Tel: 7676775624 | Mail: info@yellowandred.in

Language: EN KAN

    Follow us :


ಅನ್ನದಾನೇಶ್ವರ ಶ್ರೀ ಗಳಿಗೆ ಅರವತ್ತೊಂದು

Posted date: 08 Sep, 2019

Powered by:     Yellow and Red

ಅನ್ನದಾನೇಶ್ವರ ಶ್ರೀ ಗಳಿಗೆ ಅರವತ್ತೊಂದು

ರಾಮನಗರ: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಮಠಾಧಿಪತಿಗಳಾಗಿದ್ದ ಭೈರವೈಕ್ಯ *ಪದ್ಮಭೂಷಣ ಡಾ ಬಾಲಗಂಗಾಧರ ನಾಥ ಸ್ವಾಮೀಜಿಗಳ* ಪರಮ ಶಿಷ್ಯರಾಗಿದ್ದ ಹಾಗೂ ಈಗಿನ ಪೀಠಾಧಿಪತಿಗಳಾದ ಡಾ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿಗಳ ಆಪ್ತ ವಲಯದಲ್ಲಿ ಗುರುತಿಸಿಕೊಂಡು *ಅಂಧ ಮಕ್ಕಳ ಕಣ್ಮಣಿಯಾಗಿರುವ ಶ್ರೀ ಅನ್ನದಾನೇಶ್ವರ ನಾಥ ಸ್ವಾಮೀಜಿಗಳು* ಇಂದು ತಮ್ಮ ಅರವತ್ತೊಂದನೇ ಜನ್ಮ ದಿನವನ್ನು ತಮ್ಮ ಮೂಲ ಕ್ಷೇತ್ರವಾದ ಕನಕಪುರ ತಾಲೂಕಿನ ಶಿವಗಿರಿ (ಶಿವಾಲ್ದಪ್ಪನ ಬೆಟ್ಟ) ಯಲ್ಲಿ ಭಕ್ತರ ನಡುವೆ ಸರಳವಾಗಿ ಆಚರಿಸಿಕೊಂಡರು.


*ಶ್ರೀ ಶ್ರೀ ಗಳ ಬಗ್ಗೆ ಒಂದಿಷ್ಟು*


ಶ್ರೀ ಗಳು ಗಾಂಧಿ ವಾದಿ ಎಂದೇ ಪ್ರಸಿದ್ದರಾಗಿದ್ದ *ಪೂಜ್ಯ ಕರಿಯಪ್ಪನವರ* ರೂರಲ್ ಕಾಲೇಜಿನಲ್ಲಿ ವಿಜ್ಞಾನ ವಿದ್ಯಾರ್ಥಿಯಾಗಿದ್ದಾಗಲೇ ಆಧ್ಯಾತ್ಮ ಒಲವು ಬೆಳೆಸಿಕೊಂಡಿದ್ದರು, ಜಮೀನ್ದಾರಿ ಕುಟುಂಬದಲ್ಲಿ ಹುಟ್ಟಿ ಬೆಳೆದ ಶ್ರೀ ಗಳು ಶ್ರೀಮಂತಿಕೆಯನ್ನು ಬಿಟ್ಟು ದೊಡ್ಡ ಆಲಹಳ್ಳಿ ಬಳಿ ಇರುವ ಶಿವಾಲ್ದಪ್ಪ ಬೆಟ್ಟದಲ್ಲಿ ಸಣ್ಣ ಗುಡಿಸಲು ನಿರ್ಮಿಸಿಕೊಂಡು ಅಜ್ಞಾತ ಸ್ಥಳದಲ್ಲಿ ಧ್ಯಾನಸಕ್ತರಾಗಿ *ಸುಜ್ಞಾನ ಬೆಳೆಸಿಕೊಂಡು ಪರಿಪೂರ್ಣ ಸನ್ಯಾಸಿಯಾದರು.*


ಒಕ್ಕಲಿಗರ ಮಠ ಎಂದು ಬಿಂಬಿತವಾಗಿದ್ದರೂ ಸರ್ವಧರ್ಮ ಮತ್ತು ಸರ್ವ ಜನಾಂಗದ ಭಕ್ತರ ಆಲಯವಾಗಿದ್ದ ಆದಿಚುಂಚನಗಿರಿ ಯ ಪೀಠಾಧ್ಯಕ್ಷರಾದ *ಬಾಲಗಂಗಾಧರ ನಾಥ ಸ್ವಾಮೀಜಿಗಳು* ಶಿವಗಿರಿ ಕ್ಷೇತ್ರದ ಜೊತೆಗೆ ನಮ್ಮ ಶಾಖಾ ಮಠವನ್ನು ನೋಡಿಕೊಳ್ಳುವಂತೆ ಮನವೊಲಿಸಿ ಕರೆ ತಂದರು, ಹಿರಿಯ ಮತ್ತು ಈಗಿನ ಸ್ವಾಮೀಜಿಗಳಿಗೆ ಅತ್ಯಂತ ಪ್ರಿಯವಾದ ಶಾಖಾ ಮಠವೆಂದರೆ ಅದು ರಾಮನಗರ ದ ಶಾಖಾ ಮಠ, ಅದಕ್ಕೆ ಕಾರಣ ಇಲ್ಲಿನ *ಅಂಧರ ಶಾಲೆ* ಆದಿಚುಂಚನಗಿರಿ ಎಲ್ಲಾ ಸ್ವಾಮೀಜಿಗಳಿಗಿಂತಲೂ ಒಂದು ಕೈ ಮೇಲಾಗಿ ಅಂಧ ಮಕ್ಕಳನ್ನು ಪ್ರೀತಿಸುವ, ಅವರ ಆರೋಗ್ಯ ಮತ್ತು ಶಿಕ್ಷಣಕ್ಕೆ ಅತಿ ಹೆಚ್ಚು ಒತ್ತು ಕೊಡುವಲ್ಲಿ ಅನ್ನದಾನೇಶ್ವರ ನಾಥ ಸ್ವಾಮೀಜಿಗಳು ಮಹಾಸಂಸ್ಥಾನದ ಎಲ್ಲಾ ಮಠಗಳಿಗೂ ಒಂದು ಕೈ ಮೇಲೆನ್ನಲು ಅಡ್ಡಿಯಿಲ್ಲ.


ಮಹಾಸಂಸ್ಥಾನ, ಹಿರಿಯ ಸ್ವಾಮೀಜಿ ಹಾಗೂ ಅಂಧ ಮಕ್ಕಳ ಪ್ರೀತಿಯ ಸಂಕೇತವಾಗಿ ಇಂದಿಗೂ ಹಿರಿಯ ಸ್ವಾಮೀಜಿಗಳು ಉಪಯೋಗಿಸಿ ನೀಡಿದ ಹಳೆಯ ಕಾರನ್ನೇ ಬಳಸುತ್ತಿರುವುದು ಅವರ ಸರಳತೆಗೆ ಸಾಕ್ಷಿ. *ಅರ್ಚಕರಹಳ್ಳಿ ಶಾಖಾ ಮಠದಲ್ಲಿ ಅಂಧರ ಶಾಲೆ, ಬಿಜಿಎಸ್ ವಲ್ಡ್೯ ಸ್ಕೂಲ್ ಮತ್ತು ಪಿಯು ಕಾಲೇಜು, ಬಾನಂದೂರಿನ ಮಠ ಮತ್ತು ಶಾಲೆ, ಕನಕಪುರ ಮಠ ಮತ್ತು ಶಾಲೆ, ಜೆ ಬ್ಯಾಡರಹಳ್ಳಿ ಶಾಲೆ, ಇತ್ತೀಚಿಗೆ ಹೇಮಗಿರಿ ಯ ಬೆಟ್ಟ ಹಾಗೂ ಅವರ ಪ್ರಿಯವಾದ ಶಿವಗಿರಿ ಮಠದ ಉಸ್ತುವಾರಿಯನ್ನು ಅವರೇ ನೋಡಿಕೊಂಡು ಪ್ರೀತಿಯಿಂದ ಕರೆದ ಭಕ್ತರ ಕಾರ್ಯಕ್ರಮ, ಸಾರ್ವಜನಿಕ ಕಾರ್ಯಕ್ರಮ ದಲ್ಲಿ ಭಾಗವಹಿಸಿ, ವಿದ್ವತ್ಪೂರ್ಣ, ಆಚಾರ-ವಿಚಾರಗಳ ಸಮ್ಮಿಲನದ ಆಶೀರ್ವಚನ ನೀಡಿ ಭಕ್ತರ ಪಾಲಿಗೆ ನೈಜದೈವವಾಗಿ ರೂಪುಗೊಂಡಿದ್ದಾರೆ.*


ರಾಮನಗರ ಜಿಲ್ಲೆ ಹೇಳಿ ಕೇಳಿ ಘಟಾನುಗಟಿ ರಾಜಕಾರಣಿಗಳ ಆಡುಂಬೊಲದ ತವರೂರು, ಹಾವು ಮುಂಗುಸಿ ಗಳಂತಿರುವ ಎಲ್ಲಾ ರಾಜಕಾರಣಿಗಳನ್ನು ಒಂದೇ ತೆರನಡಿ ನೋಡುವ ಅವರ ಗುಣ ಎಲ್ಲಾ ರಾಜಕಾರಣಿಗಳು ಒಮ್ಮೆ ಹೋಗಿಬರಲು ಇಷ್ಟಪಡುತ್ತಾರೆ.

ಜಿಲ್ಲೆಗೆ ಯಾವುದೇ ಉನ್ನತಾಧಿಕಾರಿಗಳು ಬಂದರೂ ಅವರ ಸಲಹೆಯ ಜೊತೆಗೆ ಆಶೀರ್ವಾದ ಪಡೆಯದೆ ಕಾರ್ಯನಿರ್ವಹಿಸುವವರು ಬಹುತೇಕ ಕಡಿಮೆ.

*ನಾಡು-ನುಡಿ, ರೈತ-ಜಲ ದ ವಿಷಯವಾಗಿ ಅನ್ಯಾಯವಾದಾಗ ಬೀದಿಗಿಳಿದು ಹೋರಾಟ ಮಾಡುವ ಅವರ ದಿಟ್ಟತನ ಇಂದಿನ ಯುವಕರನ್ನು ನಾಚಿಸುವಂತಿದೆ.*


ಅರವತ್ತು ವರ್ಷ ಎಂದರೆ ಅರಳೋ ಮರಳೋ ಎನ್ನುವ ವಯಸ್ಸು ಎಂಬ ಗಾದೆಗೆ ವ್ಯತಿರಿಕ್ತವಾಗಿರುವ ಶ್ರೀ ಗಳು ಅರವತ್ತೊಂದಾದರು ಅರಳು ಹುರಿದಂತೆ ಮಾತನಾಡುವ, ನಡೆದುಕೊಳ್ಳುವ ಚಾತಿ ಹೊಂದಿರುವುದು ನಮ್ಮೆಲ್ಲರ ಸುದೈವ, ನಮ್ಮ ಶಾಲೆಯ ಎಲ್ಲಾ ಸಭೆ ಸಮಾರಂಭಗಳಲ್ಲಿ ಭಾಗವಹಿಸಿ ಆಶೀರ್ವಚನ ಮತ್ತು ಶಾಲೆಯ ಆಡಳಿತದ ಬಗ್ಗೆ ಸಲಹೆ ನೀಡುವುದನ್ನು ಕೇಳುವುದೇ ನಮ್ಮ ಸುದೈವ.


ಶ್ರೀ ಶ್ರೀ ಅನ್ನದಾನೇಶ್ವರ ನಾಥ ಸ್ವಾಮೀಜಿಗಳು ನೂರಕ್ಕೂ ಹೆಚ್ಚು ಜನ್ಮ ದಿನಗಳನ್ನು ಆಚರಿಸಿಕೊಳ್ಳಲಿ ಎಂದು ಭಕ್ತಾಧಿಗಳಾದ ನಾವು ಪ್ರಾರ್ಥಿಸೋಣ.


*ಲಕ್ಷ್ಮಿ ಗೋ ರಾ ಶ್ರೀನಿವಾಸ...*

*ಕರಾಟೆ ಮತ್ತು ಯೋಗ ಶಿಕ್ಷಕಿ*

*ಬಿಜಿಎಸ್ ವಲ್ಡ್೯ ಸ್ಕೂಲ್ ರಾಮನಗರ.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑