Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೩೬: ಭಾರತೀಯರು ಹಸುಗಳನ್ನು ಪವಿತ್ರವೆಂದು ಭಾವಿಸುವರೇಕೆ ?

Posted date: 13 Sep, 2019

Powered by:     Yellow and Red

ತಾಳೆಯೋಲೆ ೩೬: ಭಾರತೀಯರು ಹಸುಗಳನ್ನು ಪವಿತ್ರವೆಂದು ಭಾವಿಸುವರೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


ಭಾರತೀಯರು ಹಸುಗಳನ್ನು ಪವಿತ್ರವೆಂದು ಭಾವಿಸುವರೇಕೆ ?


ಭಾರತೀಯರು ಹಸುಗಳನ್ನು ಗೋಮಾತಾ ಎಂದು ಕರೆಯುತ್ತಾರೆ. ಹಸು ಪವತ್ರತೆಯಿಂದಿದ್ದು ಶುಭ ಚಿನ್ಹೆಯಾಗಿದೆ. *ಹಸುವಿನ ಹಾಲು, ಮೂತ್ರ ಮತ್ತು ಸಗಣಿ ಬಹಳ ಪವಿತ್ರವಾದುದು.* *ಹಸುವಿನ ದರ್ಶನ ಮಾಡಿ ಆ ದಿನದ ಕೆಲಸಗಳನ್ನು ಪ್ರಾರಂಭಿಸುವುದು ಬಹಳ ಶುಭ ಶಕುನ ಎಂದು ಭಾವಿಸಲಾಗಿದೆ.* ಶ್ರೀ ಕೃಷ್ಣ ಪರಮಹಾತ್ಮನು ಗೋ ಪಾಲಕನಾಗಿ ವ್ಯವಹರಿಸಿದ್ದನೆಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ.


ಹಸುವಿನ ಹಾಲಿನಲ್ಲಿರುವ ವಿವಿಧ ಗುಣಗಳಿರುವ ಕಾರಣಗಳಿಂದ ಅದನ್ನು ವ*ಅಮೃತ* ಎಂದು ಹೇಳಲ್ಪಟ್ಟಿದೆ. *ಹಸುವಿನ ಹಾಲು ಔಷಧ ತಯಾರಿಕೆಯಲ್ಲಿ ಘಟಕಾಂಶವಾಗಿ ನಿಂತಿದೆ. ಪ್ರತಿ ದಿನ ನಮ್ಮ ಆಹಾರದಲ್ಲಿ ಹಾಲಿನ ಉತ್ಪನ್ನಗಳಾದ ಮೊಸರು, ಬೆಣ್ಣೆ, ತುಪ್ಪ ಮುಂತಾದವುಗಳನ್ನು ಉಪಯೋಗಿಸುತ್ತೇವೆ. *ಇತರೆ ಪ್ರಾಣಿಗಳ ಮಲವನ್ನು ಅಶುದ್ದವೆಂದು ಹೇಳಲ್ಪಟ್ಟರು ಹಸುವಿನ ಸಗಣಿಯನ್ನು ಮಾತ್ರ ಶುಭಕರವೆಂದು ಹೇಳಲ್ಪಟ್ಟಿದೆ.*


ವಿಜ್ಞಾನ ವೂ ಈ ವಿಷಯವನ್ನು ಅಂಗೀಕರಿಸುತ್ತಾ ಬಂದಿದ್ದು ಹಸುವಿನ ಸಗಣಿ ಕೆಟ್ಟ ವಾಸನೆ ಇಲ್ಲದಿರುವುದಲ್ಲದೆ ಇದು ಶಕ್ತಿಯನ್ನು ಸಹ ನೀಡುತ್ತದೆ ಎಂದು ಹೇಳಲಾಗಿದೆ. ಗಿಡಗಳಿಗೆ ಮತ್ತು ಎಳೆಯ ಪೈರಿಗೆ ಹಸುವಿನ ಸಗಣಿ ಉತ್ತಮ ಗೊಬ್ಬರವಾಗಿ ಉಪಯೋಗವಾಗುತ್ತದೆ. ಗೋ ಮೂತ್ರ ವೂ ಔಷಧಿಯಾಗಿ ಬಳಕೆಯಾಗುತ್ತಿದೆ. ಶ್ರೇಷ್ಠವಾದ ಔಷಧ ಗುಣಗಳನ್ನು ಹೊಂದಿರುವ ಗೋರೋಜನವು ಹಸುವಿನ ಹಣೆಯ ಭಾಗದಲ್ಲಿನ ಚೀಲದಂತಿರುವುದರಲ್ಲಿ ಇರುತ್ತದೆ. *ಗೋರೋಜನವು ಆಯುರ್ವೇದ ಸೂಚಿಸುವ ಒಂದು ಶ್ರೇಷ್ಠ ಔಷಧವಾಗಿದೆ.

ಇಷ್ಟೊಂದು ಉಪಯೋಗಗಳಿಂದ ಕೂಡಿದ ಹಸುವನ್ನು ನಮ್ಮ ಪೂರ್ವಿಕರು ಗೋಮಾತಾ ಎಂಬ ಹೆಸರನ್ನಿಟ್ಟು ಸಾರ್ಥಕವಾಗಿಸಿದ್ದಾರೆ.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑