Tel: 7676775624 | Mail: info@yellowandred.in

Language: EN KAN

    Follow us :


ಹಾಸ್ಟೆಲ್ ನಲ್ಲಿ ಕಲಿತವರೆಲ್ಲರೂ ಉನ್ನತ ಹುದ್ದೆ ಅಲಂಕರಿಸಿದ್ದಾರೆ ಜಿಲ್ಲಾ ಅಧಿಕಾರಿ ಬಸವರಾಜ್

Posted date: 14 Sep, 2019

Powered by:     Yellow and Red

ಹಾಸ್ಟೆಲ್ ನಲ್ಲಿ ಕಲಿತವರೆಲ್ಲರೂ ಉನ್ನತ ಹುದ್ದೆ ಅಲಂಕರಿಸಿದ್ದಾರೆ ಜಿಲ್ಲಾ ಅಧಿಕಾರಿ ಬಸವರಾಜ್

ಚನ್ನಪಟ್ಟಣ: ಮಾಜಿ ಮುಖ್ಯಮಂತ್ರಿ ದಿವಂಗತ ಡಿ ದೇವರಾಜ ಅರಸು ಅವರು ಹುಟ್ಟು ಹಾಕಿದ ಇಂತಹ ವಿದ್ಯಾರ್ಥಿ ನಿಲಯಗಳಲ್ಲಿ ಇದ್ದುಕೊಂಡು ಓದಿದ ಬಹುತೇಕ ವಿದ್ಯಾರ್ಥಿಗಳು ಪ್ರತಿಭಾವಂತರಾಗಿದ್ದು, ಉನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ. ಭವಿಷ್ಯದಲ್ಲಿ ನೀವುಗಳು ಸಹ ಗಮನವಿಟ್ಟು ಓದಿ ಉನ್ನತ ಶಿಕ್ಷಣ ಪಡೆದು ಜವಾಬ್ದಾರಿಯತ ಕೆಲಸ ನಿರ್ವಹಿಸಬೇಕೆಂದು ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ಬಸವರಾಜ್ ರವರು ತಿಳಿಸಿದರು.

ಅವರು ನಗರದ ಮಹದೇಶ್ವರ ನಗರದಲ್ಲಿನ ಪದವಿ ನಂತರದ ಪುರುಷರ ವಿದ್ಯಾರ್ಥಿ ನಿಲಯಕ್ಕೆ ನೂತನವಾಗಿ ಸೇರ್ಪಡೆಯಾದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.


ಮದ್ದೂರು ಮಹಿಳಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ ಕೃಷ್ಣೇಗೌಡ ಮಾತನಾಡಿ ನಾನು ಮತ್ತು ನನ್ನ ಸಹೋದರ ಇಬ್ಬರೂ ಬಿಸಿಎಂ ವಿದ್ಯಾರ್ಥಿ ನಿಲಯದಲ್ಲಿದ್ದುಕೊಂಡು ವ್ಯಾಸಂಗ ಮಾಡಿದ್ದು ಈ ಹಂತಕ್ಕೆ ಬಂದಿದ್ದೇವೆ, ನನ್ನ ಸಹಪಾಠಿಗಳಾಗಿದ್ದ ಅನೇಕ ಮಿತ್ರರು ಸಹ ಇಂದು ಎಸಿ, ಡಿಸಿ ಗಳಾಗಿದ್ದು ಮುಖ್ಯಮಂತ್ರಿಗಳ ಕಾರ್ಯದರ್ಶಿ ಯೂ ಆಗಿದ್ದಾರೆ.

ವಿದ್ಯಾರ್ಥಿ ನಿಲಯಗಳಲ್ಲಿ ಅಂದಿಗಿಂತ ಇಂದು ಸೌಕರ್ಯಗಳು ಹೆಚ್ಚಾಗಿದ್ದು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು ಉನ್ನತ ವ್ಯಾಸಂಗ ಪಡೆಯಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.


ಕರ್ನಾಟಕ ಜಾನಪದ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಗೋ ರಾ ಶ್ರೀನಿವಾಸ ಮಾತನಾಡಿ ಇಂದು ಉನ್ನತ ಅಧಿಕಾರಿಗಳು ಹಾಗೂ ಅನೇಕ ಹಿರಿಯ ರಾಜಕಾರಣಿಗಳು ವಿದ್ಯಾಭ್ಯಾಸ ಪಡೆದಿದ್ದು ಸರ್ಕಾರಿ ಶಾಲೆಗಳು ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿ, ನೀವು ಸಹ ಅಂತಹ ಉತ್ತಮ ಅಧಿಕಾರಿಗಳಾಗಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.


ನಿಲಯ ಪಾಲಕ ಎನ್ ಮೋಹನ್ ರವರು ನೂತನ ವಿದ್ಯಾರ್ಥಿಗಳಿಗೆ ಉಡುಗೊರೆ ನೀಡುವ ಮೂಲಕ ನಿಲಯದ ನಿಯಮಗಳನ್ನು ಪಾಲಿಸಿಕೊಂಡು ಒಳ್ಳೆಯ ಹೆಸರು ತರಬೇಕೆಂದು ಸೂಚಿಸಿ ಶುಭ ಕೋರಿದರು.


ಕಾರ್ಯಕ್ರಮದಲ್ಲಿ ಉಪನ್ಯಾಸಕ ಭಂಡಾರಿ ಯವರು ಸೇರಿದಂತೆ ನಿಲಯದ ವಿದ್ಯಾರ್ಥಿಗಳು ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑