Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೪೦: ಸ್ನಾನಕ್ಕೆ ಮೊದಲು ನಡಿಗೆಯ ಅವಶ್ಯಕತೆಯೇನು?

Posted date: 18 Sep, 2019

Powered by:     Yellow and Red

ತಾಳೆಯೋಲೆ ೪೦: ಸ್ನಾನಕ್ಕೆ ಮೊದಲು ನಡಿಗೆಯ ಅವಶ್ಯಕತೆಯೇನು?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


ಸ್ನಾನಕ್ಕೆ ಮೊದಲು ನಡಿಗೆಯ ಅವಶ್ಯಕತೆಯೇನು ?


ನಮ್ಮ ಪೂರ್ವಜರು ಹೇಳಿರುವ ವಿಷಯಗಳಲ್ಲಿ ಒಳ್ಳೆಯ ಅವಗಾಹನೆ ಹಾಗೂ ವೈಜ್ಞಾನಿಕತೆ ಸ್ಪಷ್ಟವಾಗಿ ಅಡಗಿದೆ.


ನಿದ್ರೆಯಿಂದ ಎದ್ದ ನಂತರ ಸ್ವಲ್ಪ ದೂರ ನಡೆದು ದೇವಾಲಯದ ಸಮೀಪದಲ್ಲಿರುವ ಕೆರೆ ಅಥವಾ ನದಿಯಲ್ಲಿ ಮುಳುಗುತ್ತಾ ಸ್ನಾನ ಮಾಡಬೇಕೆಂದು ಹೇಳಿರುವರು. ಮುಳುಗಿ ಸ್ನಾನ ಮಾಡುವುದು ಒಂದು ಒಳ್ಳೆಯ ಅನುಭವ. ಆದರೆ ಸ್ನಾನಕ್ಕೆ ಮುನ್ನಾ ಸ್ವಲ್ಪ ದೂರ ನಡೆಯುವುದರಲ್ಲಿನ ಆಂತರ್ಯವೇನೆಂದು ಬಹಳಷ್ಟು ಜನರಿಗೆ ತಿಳಿಯದು.


ಬೆಳಗಿನ ಸಮಯದಲ್ಲಿ ನಡೆಯುವುದು ಒಳ್ಳೆಯ ವ್ಯಾಯಾಮ ಮತ್ತು ಇದರಿಂದ ಸಾಕಷ್ಟು ಆಮ್ಲಜನಕವು ದೊರೆತು ಶರೀರಕ್ಕೆ ಮತ್ತು ಮನಸ್ಸಿಗೆ ಪ್ರಶಾಂತತೆಯನ್ನು ನೀಡುವುದು.


ದೇವಾಲಯದ‌ ಹತ್ತಿರದ ಕೆರೆ ಅಥವಾ ನದಿಯಲ್ಲಿ ಸ್ನಾನ ಮಾಡಿ ದೇವಾಲಯದಲ್ಲಿ ಭಗವಂತನ ಧ್ಯಾನ ಮತ್ತು ಪ್ರಾಣಾಯಾಮವನ್ನು ಮಾಡಿಕೊಳ್ಳಬಹುದು.


ಪ್ರಾಣಾಯಾಮವು ಯೋಗದಲ್ಲಿನ ಒಂದು ಸಾಧನೆ. ಇದರಿಂದ ಶರೀರದಲ್ಲಿನ ಕಣಗಳಿಗೆ ಪುಸ್ಕಲವಾಗಿ ಪ್ರಾಣ ವಾಯುವು ಸೇರಿ ಶರೀರವು ಆ ದಿನವೆಲ್ಲ ಚುರುಕಾಗಿ ಇರುವುದು. "ಬೆಳಗಿನ ಸಮಯದಲ್ಲಿ ನಡಿಗೆಯ ನಂತರ ಮುಳುಗು ಸ್ನಾನ ಮಾಡಿದರೆ ಬುದ್ದಿ ಶಕ್ತಿಯನ್ನು ಮತ್ತು ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವುದರಲ್ಲಿ ಸಹಕರಿಸುತ್ತದೆ.* ಎಂಬುದನ್ನು ಆಧುನಿಕ ವಿಜ್ಞಾನವೂ ಅಂಗೀಕರಿಸಿದೆ.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑