Tel: 7676775624 | Mail: info@yellowandred.in

Language: EN KAN

    Follow us :


ಭವಿಷ್ಯದಲ್ಲಿ ದೇಶ ಕಟ್ಟುವವರೇ ವಿದ್ಯಾರ್ಥಿಗಳು ಇಂದಿನ ರಾಜಕೀಯದ ವಿರುದ್ಧ ನೀವೇ ದಂಗೆ ಏಳಬೇಕು ಕುಮಾರಸ್ವಾಮಿ

Posted date: 20 Sep, 2019

Powered by:     Yellow and Red

ಭವಿಷ್ಯದಲ್ಲಿ ದೇಶ ಕಟ್ಟುವವರೇ ವಿದ್ಯಾರ್ಥಿಗಳು ಇಂದಿನ ರಾಜಕೀಯದ ವಿರುದ್ಧ ನೀವೇ ದಂಗೆ ಏಳಬೇಕು ಕುಮಾರಸ್ವಾಮಿ

ಚನ್ನಪಟ್ಟಣ: ಭವಿಷ್ಯದ ದೇಶೋದ್ದಾರಾಕರೇ ಇಂದಿನ ವಿದ್ಯಾರ್ಥಿಗಳು. ರಾಜಕೀಯ ಮತ್ತು ನಾಯಕರ ಪರ ಓಲೈಕೆ ಬಿಟ್ಟು ಓದಿನ ಬಗ್ಗೆ ಗಮನ ನೀಡಿ, ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿ ದೇಶದ ಭವಿಷ್ಯವನ್ನು ಉಜ್ವಲಗೊಳಿಸುವತ್ತ ಮುಂದಡಿ ಇಡಬೇಕು ಎಂದು ಮಾಜಿ ಮುಖ್ಯಮಂತ್ರಿ ಕ್ಷೇತ್ರದ ಶಾಸಕ ಹೆಚ್ ಡಿ ಕುಮಾರಸ್ವಾಮಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅವರು ಇಂದು ಕಾಲೇಜು ಶಿಕ್ಷಣ ಇಲಾಖೆ, ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಆಯೋಜಿಸಿದ್ದ ಸಾಂಸ್ಕೃತಿಕ, ಕ್ರೀಡಾ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ನನ್ನ ಮುಖ್ಯಮಂತ್ರಿ ಅವಧಿಯಲ್ಲಿ ೧೮೯ ಸರ್ಕಾರಿ ಹೊಸ ಕಾಲೇಜುಗಳನ್ನು ತೆರೆಯಲು ಅನುಮತಿ ನೀಡಿದ್ದು ಹತ್ತು ವರ್ಷಗಳ ಹಿಂದೆಯೆ ತಲಾ ಎರಡು ಕೋಟಿ ಹಣ ಬಿಡುಗಡೆ ಮಾಡಿದ್ದೆ. ಅಂದಿನ ಶಿಕ್ಷಣ ಮಂತ್ರಿ ಗೋವಿಂದೇಗೌಡ ರನ್ನು ಹೊರತು ಪಡಿಸಿ ಹೆಚ್ಚು ಶಿಕ್ಷಕರನ್ನು ನೇಮಿಸಿಕೊಂಡಿದ್ದು ಸಹ ನಾನು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲೇ ಎಂದರು.


*ಬಿಜೆಪಿ ಮತ್ತು ಮಾಧ್ಯಮದವರನ್ನು ತೆಗಳಲಷ್ಟಕ್ಕೆ ಮೀಸಲಾದ ಭಾಷಣ*


ಅರ್ಧ ಗಂಟೆಗೂ ಹೆಚ್ಚು ಕಾಲ ಭಾಷಣ ಮಾಡಿದ ಕುಮಾರಸ್ವಾಮಿ ಯವರು ವಿದ್ಯಾರ್ಥಿಗಳ ಕಾರ್ಯಕ್ರಮ ಎನ್ನುವುದನ್ನು ಮರೆತು ಬಿಜೆಪಿ ಸರ್ಕಾರ ಮತ್ತು ದೃಶ್ಯ ಮಾಧ್ಯಮದವರನ್ನು ತೆಗಳಲು ಸಮಯ ಮೀಸಲಾಗಿರಿಸಿದರು.

ಕೆಲವರು ಪ್ರಚಾರಕ್ಕಾಗಿ ಭಾಷಣ ಮಾಡುತ್ತಾರೆ, ಮೋದಿಯವರು ಕರ್ನಾಟಕಕ್ಕೆ ಬಂದರೂ ನೆರೆ ಸಂತ್ರಸ್ತರನ್ನು ಸೌಜನ್ಯಕ್ಕಾಗಿಯಾದರೂ ಮಾತನಾಡಿಸಲಿಲ್ಲ, ಹಣವನ್ನು ಬಿಡುಗಡೆ ಮಾಡಲಿಲ್ಲ, ರಾಜ್ಯ ಸರ್ಕಾರಕ್ಕೆ ಕೇಳುವ ತಾಕತ್ತಿಲ್ಲ ಎಂದು ದೂರಿದರು.


*ಯಡಿಯೂರಪ್ಪ ವಿರುದ್ಧ ವಾಗ್ದಾಳಿ*


*೧×೧ ಅಡಿ ಜಾಗದ ನೀರಿನ ಸಂಪಿನಲ್ಲಿ ಯಾರಾದರೂ ಜಾರಿ ಬಿದ್ದು ಸಾಯುತ್ತಾರೆಯೇ ?* ಡಿಕೆಶಿ ಯವರಿಗೆ ಹೇಳಿದೆ, ವಿದ್ಯುತ್ ಖರೀದಿ ಸಂದರ್ಭದಲ್ಲಿ ಹಣ ಕೊಳ್ಳೆ ಹೊಡೆದಿದ್ದಾರೆ ತನಿಖೆ ಮಾಡಿಸಿ ಎಂದು. ಆಗ ಅವರನ್ನು ಡಿಕೆಶಿ ರಕ್ಷಿಸಿದರು ಈಗ ಬಿಜೆಪಿಯವರಿಂದ ಶಿಕ್ಷೆ ಅನುಭವಿಸುತ್ತಿದ್ದಾರೆ, *ರಾಮನಗರ, ಮಂಡ್ಯ ಮತ್ತು ಹಾಸನ ಕ್ಕೆ ಘೋಷಿಸಿದ ಹಣವನ್ನು ಹಿಂಪಡೆದಿದ್ದಾರೆ* ಇದನ್ನು ಮಾಧ್ಯಮದವರು ಪ್ರಶ್ನಿಸುವುದಿಲ್ಲ ಎಂದು ಯಡಿಯೂರಪ್ಪ ನವರ ಹೆಸರೇಳದೆ ಮಾರ್ಮಿಕವಾಗಿ ದೂರಿದರು.


*ಕ್ಷೇತ್ರದ ಮಾಜಿ ಶಾಸಕ ಭಗೀರಥ ನೇ ನಮ್ಮ ಸರ್ಕಾರ ಉರುಳಿಸುವಲ್ಲಿ ಮುಂದಾಳತ್ವ ವಹಿಸಿದ ಪುಣ್ಯಾತ್ಮ,* ಈತ ಅಧಿಕಾರಿಗಳ ಬಳಿ ಮಂತ್ಲಿ (ಮಾಸಿಕ) ವಸೂಲಿ ಮಾಡುತ್ತಿದ್ದು ಕೊಡಲಿಲ್ಲಾಂದ್ರೆ ವರ್ಗಾವಣೆ ಮಾಡುಸ್ತಾನಂತೆ ಎಂದು ಸಿ ಪಿ ಯೋಗೇಶ್ವರ್ ಹೆಸರೇಳದೆ ಚಾಟಿ ಬೀಸಿದರು. *ಯಲಹಂಕದ ತಹಶಿಲ್ದಾರ್ ವರ್ಗಾವಣೆಗೆ ಒಂದು ಕೋಟಿ ರೂಪಾಯಿ ಕೊಡಲು ಬಂದಿದ್ದರು, ನಾನು ಬಡವರ ಸುಲಿಗೆಗೆ ಅವಕಾಶ ಕೊಡುವುದಿಲ್ಲ ಎಂದು ವಾಪಸು ಕಳುಹಿಸಿದೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಒಂದು ಮುಕ್ಕಾಲು ಕೋಟಿ ಗೆ ಹರಾಜು ಹಾಕಿದ್ದಾರೆ.*


ನಾನು ಮಾಧ್ಯಮದವರಿಗೋಸ್ಕರ ರಾಜಕೀಯ ಮಾಡುತ್ತಿಲ್ಲ, ಅಮಿತ್ ಷಾ ಮನೆ ಬಾಗಿಲ ಮುಂದೆ ನಿಲ್ಲುವಂತ ಮಾಧ್ಯಮದವರ ಅವಶ್ಯಕತೆ ನನಗಿಲ್ಲ, *ಡಿಕೆಶಿ ಯವರ ಪರ ನಡೆದ ಪ್ರತಿಭಟನೆ ಗೆ ಹೋಗಿಲ್ಲ ಎನ್ನುವುದನ್ನೇ ದಿನಗಟ್ಟಲೆ ಎಳೆಯುವಂತ ದೃಶ್ಯ ಮಾಧ್ಯಮದ ಹಂಗು ನನಗಿಲ್ಲ*.

ನಾನು ನನ್ನ ಅಧಿಕಾರದ ಅವಧಿಯಲ್ಲಿ *ವರ್ಗಾವಣೆಗಾಗಿ ಒಂದು ರೂಪಾಯಿ ಪಡೆದಿಲ್ಲ. ಯಾರಾದರೂ ನನಗೆ ಹಣ ಕೊಟ್ಟಿರುವುದನ್ನು ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ.*

ನಾನು ಆರೂವರೆ ಕೋಟಿ ಜನರ ಮತ್ತು ಹೃದಯವಂತ ತಾಯಂದಿರಿಗೋಸ್ಕರ ಇನ್ನೂ ರಾಜಕೀಯದಲ್ಲಿದ್ದೇನೆ ಎಂದರು.


ಕಾಲೇಜಿನ ವರದಿಯನ್ನು ಓದಿದ ಉಪನ್ಯಾಸಕ ಡಾ ಅಣ್ಣಯ್ಯ ತೈಲೂರು ರವರು ನಮ್ಮ ಕಾಲೇಜಿಗೆ ನಾಲ್ಕು ಕೋಟಿ ತೊಂಭತ್ತೈದು ಲಕ್ಷ, ಬೇರೆ ಅನುದಾನಗಳಡಿಯಲ್ಲಿ ಎರಡು ಕೋಟಿ ಮತ್ತು ತೊಂಭತ್ತೈದು ಲಕ್ಷ ರೂಪಾಯಿಗಳು ದೊರೆತಿದ್ದು ಹೊಸ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಒಂದೂವರೆ ಎಕರೆ ಜಮೀನು ಸಹ ಮಂಜೂರಾಗಿದ್ದು ತಾಲ್ಲೂಕಿನ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳು ಕುಮಾರಸ್ವಾಮಿ ಯವರಿಗೆ ಅಭಾರಿಯಾಗಿದ್ದೇವೆ ಎಂದರು.

ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಲಾವಣ್ಯ ಮತ್ತು ಫೈಸಲ್ ಖಾನ್ ಎಂಬ ವಿದ್ಯಾರ್ಥಿಗಳು ಯೋಗ ಸ್ಪರ್ಧೆಯಲ್ಲಿ ವಿಜೇತರಾಗಿದ್ದು ಮಲೆಷ್ಯಾ ದೇಶಕ್ಕೆ ಸ್ಪರ್ಧೆಗೆ ಹೋಗುವ ಸಲುವಾಗಿ ತಲಾ ಎಂಭತ್ತು ಸಾವಿರ ರೂಪಾಯಿಗಳನ್ನು ಕುಮಾರಸ್ವಾಮಿ ವಿತರಿಸಿದರು.


ಕಾರ್ಯಕ್ರಮದಲ್ಲಿ ತಹಶಿಲ್ದಾರ್ ಸುದರ್ಶನ್, ಪ್ರಾಂಶುಪಾಲ ಡಾ ವಿ ವೆಂಕಟೇಶ್, ನಂಜುಂಡ ಆರ್, ಡಾ ಶ್ರೀನಿವಾಸ, ಡಾ ಮುರಳಿ ಕೂಡ್ಲೂರು ಮತ್ತು ರಾಘವೇಂದ್ರ ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑