Tel: 7676775624 | Mail: info@yellowandred.in

Language: EN KAN

    Follow us :


ಬೇವೂರು ಜಿಲ್ಲಾ ಪಂಚಾಯತಿಯ ತಿಟ್ಟಮಾರನಹಳ್ಳಿ ಗ್ರಾಮ ಪಂಚಾಯತಿ ಯಲ್ಲಿ ಲಕ್ಷೋಪಲಕ್ಷ ದೋಚಿದ ಶಂಕರ

Posted date: 26 Sep, 2019

Powered by:     Yellow and Red

ಬೇವೂರು ಜಿಲ್ಲಾ ಪಂಚಾಯತಿಯ ತಿಟ್ಟಮಾರನಹಳ್ಳಿ ಗ್ರಾಮ ಪಂಚಾಯತಿ ಯಲ್ಲಿ ಲಕ್ಷೋಪಲಕ್ಷ ದೋಚಿದ ಶಂಕರ

ಚನ್ನಪಟ್ಟಣ: ಬೇವೂರು ಜಿಲ್ಲಾ ಪಂಚಾಯತಿ ಭಾಗ ೩
ಅಂದಿನ ಜಿಲ್ಲಾ ಪಂಚಾಯತಿ ಪರಿಕ್ಷಾರ್ಥ *ಇಂಜಿನಿಯರ್ ಶಂಕರ್* ತಾಲ್ಲೂಕಿನ ಎಲ್ಲಾ ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲೂ ತುಂಡು ಗುತ್ತಿಗೆ ಕಾಮಗಾರಿಗಳ ಹೆಸರಿನಲ್ಲಿ ಒಂದೊಂದು ಕಾಮಗಾರಿಯಲ್ಲೂ ಆರಂಕಿಯ ಹಣ ನುಂಗಿದ್ದು *ನೂತನ ಬಕಾಸುರ* ನಾಗಿ ಹೊರಹೊಮ್ಮಿದ್ದಾನೆ.

*ಹೊಂಗನೂರು, ಮಳೂರು ಮತ್ತು ಕೋಡಂಬಳ್ಳಿ* ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಕನಿಷ್ಠ *ಏಳು ಅಂಕಿ* ಯ ಹಣವನ್ನು ನುಂಗಿದ್ದು *ಬೇವೂರು* ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿಯೂ *ಹತ್ತು ಲಕ್ಷ* ರೂ  ಆಜೂಬಾಜೂ ನುಂಗಿರುವ ಕಾಮಗಾರಿಗಳ ದಾಖಲೆಗಳಿವೆ, ಅಂದಿನ ಪ್ರಭಾರ ಸಹಾಯಕ ಕಾರ್ಯಪಾಲಕ ಅಭಿಯಂತರ *ಕುಮಾರಸ್ವಾಮಿ, ಪರೀಕ್ಷಾರ್ಥ ಇಂಜಿನಿಯರ್ ಶಂಕರ್, ಆಯಾಯ ಕಾಮಗಾರಿಗೆ ಸಂಬಂಧಿಸಿದ ಗುತ್ತಿಗಾದರರ ಜೊತೆಗೆ ಸಂಬಂಧಿಸಿದ ಜಿಲ್ಲಾ ಪಂಚಾಯತಿ ಸದಸ್ಯರನ್ನು* ಹೊಣೆಗಾರರನ್ನಾಗಿಸಬೇಕೆಂದು ಮಾಹಿತಿ ಹಕ್ಕು ಕಾರ್ಯಕರ್ತ ವಿ ಜಿ ಕೃಷ್ಣೇಗೌಡ ಒತ್ತಾಯಿಸಿದ್ದಾರೆ.

ಬೇವೂರು ಜಿಲ್ಲಾ ಪಂಚಾಯತಿ ಯ *ತಿಟ್ಟಮಾರನಹಳ್ಳಿ ಗ್ರಾಮ ಘಟಾನುಘಟಿ ರಾಜಕಾರಣಿಗಳ ತವರೂರು*. ಈ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲೇ ಅರ್ಧಂಬರ್ಧ ಕಳಪೆ ಕಾಮಗಾರಿ ಮಾಡಿ ಹಣ ದೋಚಿರುವುದು ಬೆಳಕಿಗೆ ಬಂದಿದೆ.

ತಿಟ್ಟಮಾರನಹಳ್ಳಿ ಗ್ರಾಮದ ಹೊಸ ಬೀದಿಯ ಮಹದೇವಮ್ಮನ ಪುಟ್ಟಯ್ಯರ ಕೃಷ್ಣನ ಮನೆಯಿಂದ ಕೆಂಪಮ್ಮನ ಮನೆಯವರೆಗೆ ಮಿಷನರಿ ಚರಂಡಿ ನಿರ್ಮಾಣ ಕಾಮಗಾರಿ ಮಾಡಿದ್ದು *ಗುತ್ತಿಗೆದಾರ ಬಸವರಾಜು ಎಂಬುವರ ಹೆಸರಿನಲ್ಲಿ *೪,೯೯,೦೦೦ ರೂಪಾಯಿಗಳ ಬಿಲ್ ಪಡೆದು *೩,೦೦,೦೦೦* ರೂ ನಷ್ಟವಾಗಿದೆ ಎಂದು ಅವರು ದೂರಿದ್ದಾರೆ.

ಈ ಮೇಲಿನ ಕಾಮಗಾರಿಯಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ *ಟಿ ಪಿ ಪುಟ್ಟಸಿದ್ದೇಗೌಡ*ರ ಮನೆಯ ಪಕ್ಕದಲ್ಲಿ ಮಾಡಿರುವ ಕಾಮಗಾರಿಯ ಪೋಟೋ ಲಗತ್ತಿಸಿದ್ದಾರೆ. ಕಾಮಗಾರಿ ನಡೆದಿರುವುದು *೪೨ ಮೀಟರ್* ಆದರೆ ಬಿಲ್ ನಲ್ಲಿ *೧೩೭ ಮೀಟರ್* ತೋರಿಸಿದ್ದಾರೆ.

ಕಾಮಗಾರಿಯ ಪೋಟೋ ಬೇರೆಯದು ತೋರಿಸಿ‌ ಕೆಲಸದ ಹೆಸರನ್ನು *ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ" ಎಂದು ತೋರಿಸಿದ್ದಾರೆ.

ಈ ಅನುದಾನವು ಸಹ *ರಾಜ್ಯಸಭಾ ಸದಸ್ಯ ರಾಜೀವ್ ಗೌಡರ* ಅನುದಾನವಾಗಿದ್ದು ಮೂರನೇ ವ್ಯಕ್ತಿಯಾದ *ಗೌಸಿಯಾ ಇಂಜಿನಿಯರಿಂಗ್ ಕಾಲೇಜಿನ ಇಂಜಿನಿಯರ್* ಗಳೇ ಜಾಗ ಮತ್ತು ಅಳತೆ ಪರಿಶೀಲಿಸಿ ವರದಿ ನೀಡಿರುವುದು ಅಚ್ಚರಿಯಾಗಿದೆ.

ಇವೆಲ್ಲಕ್ಕಿಂತ ಹೆಚ್ಚಾಗಿ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಹೆಸರು ನಮೂದಿಸಿದ್ದರೂ ಸಹ *ಗ್ರಾಮ ಪಂಚಾಯತಿ ಅಧ್ಯಕ್ಷ, ಸದಸ್ಯರಾಗಲಿ, ಅಭಿವೃದ್ಧಿ ಅಧಿಕಾರಿಗಳಾಗಲಿ* ಚಕಾರ ಎತ್ತದೆ ಇರುವುದು ಯಾಕೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ರಾಮನಗರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಳಿಗೆ ದೂರು ನೀಡಿದ್ದು ಸೂಕ್ತ ಕಾನೂನು ಕ್ರಮ ಕೈಗೊಂಡು ನಷ್ಟದ ಹಣ ವಸೂಲಿ ಮಾಡಲು ಕೋರಿದ್ದಾರೆ.



ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑