Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೫೨: ಮಗುವಿಗೆ ಮೊದಲು ಅನ್ನವನ್ನು ಯಾವಾಗ ತಿನ್ನಿಸಬೇಕು?

Posted date: 02 Oct, 2019

Powered by:     Yellow and Red

ತಾಳೆಯೋಲೆ ೫೨:  ಮಗುವಿಗೆ ಮೊದಲು ಅನ್ನವನ್ನು ಯಾವಾಗ ತಿನ್ನಿಸಬೇಕು?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ

ಮಗುವಿಗೆ ಮೊದಲು ಅನ್ನವನ್ನು ಯಾವಾಗ ತಿನ್ನಿಸಬೇಕು ?

ಇತ್ತೀಚಿಗೆ ನಾಮಕರಣ ಮತ್ತು ಅನ್ನಪ್ರಾಶನವನ್ನು ಒಟ್ಟಿಗೆ ನಿರ್ವಹಿಸುತ್ತಿದ್ದಾರೆ. ಸಿದ್ದಾಂತದ ಪ್ರಕಾರ ಇವುಗಳನ್ನು ಬೇರೆಬೇರೆಯಾಗಿ ನಿರ್ವಹಿಸಬೇಕು.

*ಮಗುವಿಗೆ ಆರು ತಿಂಗಳು ತುಂಬಿದ ನಂತರ ಒಂದು ಶುಭ ದಿನದಂದು ಅನ್ನಪ್ರಾಶನ ಮಾಡಬೇಕು.* ಅನ್ನಪ್ರಾಶನ ಕಾರ್ಯಕ್ರಮದಲ್ಲಿ ಭಗವಂತನ ಪ್ರಾರ್ಥನೆಗಳನ್ನು ಶ್ರದ್ಧೆಯಿಂದ ಮಾಡಬೇಕು. ಮೊದಲು ಭಗವಂತನಿಗೆ ಎಣ್ಣೆ ದೀಪವನ್ನು ಬೆಳಗಿಸಿ ಧೂಪವನ್ನು ಮಾಡಿ ಮನೆಯಲ್ಲೇ ಮಾಡಿದ *ಅನ್ನವನ್ನು ಜೇನು, ಮೊಸರು ಮತ್ತು ತುಪ್ಪದಲ್ಲಿ ಕಲಸಿದ ನೈವೇದ್ಯವನ್ನು ಪ್ರಸಾದವಾಗಿ ಮಗುವಿಗೆ ತಿನ್ನಿಸಬೇಕು. ಪುರೋಹಿತರು, ಬಂಧು-ಮಿತ್ರರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಅನ್ನಪ್ರಾಶನಕ್ಕೆ ಬಂದವರು ಮಗುವನ್ನು *ಓಂ ತ್ವಂ ಅನ್ನ ಪತಿರನ್ನದೊ ವರ್ತಮಾನೋ ಭುಯ* ಎನ್ನುವ ಮಂತ್ರವನ್ನು ಹೇಳುತ್ತಾ ಆಶೀರ್ವದಿಸಬೇಕು. ಆ ದಿನದಂದು ದಾನಧರ್ಮಗಳನ್ನು ಮಾಡಬೇಕು.

*ಸಂಗ್ರಹ ಮತ್ತು ಪ್ರಚಾರ;*
*ಗೋ ರಾ ಶ್ರೀನಿವಾಸ...*
*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑