Tel: 7676775624 | Mail: info@yellowandred.in

Language: EN KAN

    Follow us :


ಗಿಳಿಪಾಠ ಒಪ್ಪಿಸಿದ ಅಧಿಕಾರಿಗಳು ತಲೆ ಅಲ್ಲಾಡಿಸಿದ ಸದಸ್ಯರು !?

Posted Date: 04 Oct, 2019

ಗಿಳಿಪಾಠ ಒಪ್ಪಿಸಿದ ಅಧಿಕಾರಿಗಳು ತಲೆ ಅಲ್ಲಾಡಿಸಿದ ಸದಸ್ಯರು !?

ಚನ್ನಪಟ್ಟಣ: ಇಂದು ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯು ಒಂದು ಗಂಟೆ ತಡವಾಗಿ ಪ್ರಾರಂಭವಾಗಿ ಅದೇ ಹಳೇ ಚಾಳಿಯನ್ನು ಮುಂದುವರಿಸಿತು. *ಅದೇ ರಾಗ ಅದೇ ಹಾಡು ಎಂಬಂತೆ ಅಥವಾ ನಾ ಹೊಡ್ದಂಗ್ ಮಾಡ್ತಿನಿ ನೀ ಅತ್ತಂಗ್ ಮಾಡು* ಎಂಬ ನಾಣ್ಣುಡಿಯಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಿದ್ದಪಡಿಸಿ ತಂದಿದ್ದ ವರದಿಗಳನ್ನು ಗಿಳಿಪಾಠ ದಂತೆ ಒಪ್ಪಿಸಿದರು.


ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರಾದ ಹರೂರು ರಾಜಣ್ಣ ಅವರು ಮೊದಲಿಗೆ *ಪ್ಲಾಸ್ಟಿಕ್ ಮುಕ್ತ ನಗರ ದ ಬಗ್ಗೆ ಪ್ರಸ್ತಾಪಿಸಿದರಾದರೂ ಅದರ ಬಗ್ಗೆ ಸಂಪೂರ್ಣ ಚರ್ಚೆಯೇ ಆಗಲಿಲ್ಲ*. ಆನಂತರ ತಾಲ್ಲೂಕು ಬಗ್ಗೆ ಅಧಿಕಾರಿಗ ಳಿಂದ ಮಾಹಿತಿ ಕೇಳಿದರು.


ಡೆಂಗ್ಯೂ, ಮಲೇರಿಯಾ ದಿಂದ ಯಾರು ಸಾವು ನೋವಿಗೆ ಒಳಪಟ್ಟಿಲ್ಲ, ಹಲವಾರು ಶಸ್ತ್ರಚಿಕಿತ್ಸೆ ಶೇ ೩೩, ಲಸಿಕೆ ಶೇ ೯೦, ಕುಷ್ಠ ರೋಗ, ಅಂಧತ್ವ, ಕ್ಷಯ, ಚಿಕುನ್ ಗುನ್ಯಾ, ಹೆಚ್೧ ಎನ್೧  ಎಲ್ಲಾ ಪರೀಕ್ಷೆಗಳು ಲಭ್ಯವಿವೆ ನಾವು ಅದನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ ಎಂದು  ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಜು ಅವರು ಸಭೆಯ ಗಮನಕ್ಕೆ ತಂದರು.


ಅನೇಕ ಸೌಲಭ್ಯಗಳ ಮಾಹಿತಿ ಅಂಗನವಾಡಿ ಸಿಬ್ಬಂದಿಗೆ ಗೊತ್ತಿಲ್ಲ, ಗ್ರಾಮಾಂತರ ಆಸ್ಪತ್ರೆಗಳನ್ನು ಮೇಲ್ದರ್ಜೆ ಏರಿಸಿಲ್ಲ, ಮುದುಗೆರೆ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿರುವುದಲ್ಲದೆ ಅನೇಕ ಕೊರತೆಗಳ ಬಗ್ಗೆ ಆರೋಗ್ಯಾಧಿಕಾರಿಗಳು ಮತ್ತು ಸಿಡಿಪಿಓ ಕಾಂತರಾಜು ರವರನ್ನು ರಾಜಣ್ಣ ತರಾಟೆಗೆ ತೆಗೆದುಕೊಂಡರು.


ತಾಲ್ಲೂಕಿನ ರೈತರು ಮಿಶ್ರತಳಿ, ಬೈವೋಲ್ಟನ್ ಬೆಳೆ ಬೆಳೆಯುತ್ತಿದ್ದಾರೆ, ಬೈವೋಲ್ಟನ್ ಬೆಳೆಗೆ ಮೊದಲ ಆದ್ಯತೆ ನೀಡುತ್ತಿದ್ದೇವೆ. ನರೇಗಾದಿಂದ ಅನೇಕ ಸೌಲ ಭ್ಯಗಳನ್ನು ಇಲಾಖೆಯಿಂದ ನೀಡಲಾಗಿದೆ ಎಂದು ರೇಷ್ಮೆ ಇಲಾಖೆಯ ಅಧಿಕಾರಿ ಮಂಜುನಾಥ್ ವಿವರಿಸಿದರು.


ಬೆರಳೆಣಿಕೆ ಸದಸ್ಯರು ಅನುಕೂಲ ಸಿಂಧು ಪ್ರಶ್ನೆ ಮಾಡಿದರೆ ವಿನಹ ಯಾವ ಅಧಿಕಾರಿಗಳನ್ನು

ಸದಸ್ಯರು ಪ್ರಶ್ನೆ ಮಾಡಲೇ ಇಲ್ಲ. ಅಧಿಕಾರಿಗಳು ಪುಸ್ತಕ ಕೈಲಿಡಿದು ಓದಿ ಹೇಳಿದ್ದಷ್ಟು ಕೇಳಿಸಿಕೊಂಡು ಮುಗುಮ್ಮಾದರು.

*ಅನೇಕ ಇಲಾಖೆಗಳಲ್ಲಿ ಅನುದಾನ ಬಳಕೆ ಆಗದ ವಿರುದ್ಧವೂ ದನಿ ಎತ್ತಲಿಲ್ಲ, ಕಾಮಗಾರಿಗಳ ಕುಂಠಿತದ ಬಗ್ಗೆ ಚಕಾರವೆತ್ತಲಿಲ್ಲ, ಅಧಿಕಾರಿಗಳು ಹೇಳಿದ್ದನ್ನೇ  ಸತ್ಯ ಎಂದು ಸದಸ್ಯರು ಒಪ್ಪಿಕೊಂಡು ಕುಳಿತದ್ದು ಮಾತ್ರ ತಾಲ್ಲೂಕಿನ ಜನರ ದೌರ್ಭಾಗ್ಯವೇ ಸರಿ.*


ಇನ್ನುಳಿದಂತೆ ತೋಟಗಾರಿಕೆ, ಕೃಷಿ, ಅಕ್ಷರ ದಾಸೋಹ, ಅರಣ್ಯ, ಸಾಮಾಜಿಕ, ಪಶುವೈದ್ಯ, ಪಂಚಾಯತ್ ರಾಜ್, ಗ್ರಾಮೀಣ ನೀರು ಸರಬ ರಾಜು, ಹಿಂದುಳಿದ ವರ್ಗ ಇನ್ನಿತರೆ ಇಲಾಖೆ ಅಧಿಕಾ ರಿಗಳು ವರದಿ ಒಪ್ಪಿಸಿದರು. (ಗಿಳಿಪಾಠ)

 ಕೃಷಿ ಇಲಾಖೆಯ ಅಧಿಕಾರಿಯಿಂದ ಯೂರಿಯಾ ಸಮಸ್ಯೆ ಯ ಬಗ್ಗೆ ಮಾಹಿತಿ ಪಡೆದ ರಾಜಣ್ಣಅವರು ಈ ಬಗ್ಗೆ ಸಮರದೋಪಾದಿಯಲ್ಲಿ ಕೆಲಸ ಮಾಡಿ, ಇಲ್ಲದಿದ್ರೆ ಜನರು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ವ್ಯವಸಾಯ ಇಲಾಖೆಯ ಅಧಿಕಾರಿಗಳನ್ನು ಎಚ್ಚರಿ ಸಿದರು.


ಸಾಮಾನ್ಯ ಸಭೆಗಳನ್ನು ಕೇವಲ ನಾಮಕಾವಸ್ಥೆಗೆ ಮಾಡುವ ಬದಲು ಸದಸ್ಯರ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವ ಇಲಾಖೆಯಿಂದ ಎಷ್ಟು ಅನುದಾನ ಬಂದಿದೆ, ಆ ಕಾಮಗಾರಿ ಆಗಿದೆಯೇ ಅಥವಾ ದುರ್ಬಳಕೆ ಆಗಿದೆಯೇ ಎಂಬುದನ್ನು ಅರಿತು ಸಭೆಯಲ್ಲಿ ಚರ್ಚಿಸಿ ಅಧಿಕಾರಿಗಳನ್ನು ಪ್ರಶ್ನಿಸಿದಾಗಲೇ ಅಭಿವೃದ್ಧಿ ಸಾಧ್ಯ ಎಂಬುದು ನಾಗರೀಕರ ಪ್ರಶ್ನೆಯಾಗಿದೆ.


ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರು, ಕಾರ್ಯನಿರ್ವಹಣಾಧಿಕಾರಿ ಲೋಕೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್ ಸಭೆಯಲ್ಲಿ ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑