Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೫೫: ಅಸ್ತಮಿಸುವ ಸೂರ್ಯ ಉದಯಿಸುವ ಸೂರ್ಯನಿಗಿಂತ ಶಕ್ತಿವಂತನೇ ?

Posted date: 05 Oct, 2019

Powered by:     Yellow and Red

ತಾಳೆಯೋಲೆ ೫೫: ಅಸ್ತಮಿಸುವ ಸೂರ್ಯ ಉದಯಿಸುವ ಸೂರ್ಯನಿಗಿಂತ ಶಕ್ತಿವಂತನೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


*ಅಸ್ತಮಿಸುವ ಸೂರ್ಯ ಉದಯಿಸುವ ಸೂರ್ಯನಿಗಿಂತ ಶಕ್ತಿವಂತನೇ ?*


ನಮ್ಮ ಪೂರ್ವಿಕರು ಗಮನಿಸಿದ್ದೇನೆಂದರೆ ಅಸ್ತಮಿಸುವ ಸೂರ್ಯನಿಗಿಂತ ಉದಯಿಸುವ ಸೂರ್ಯನು ಶಕ್ತಿವಂತನಲ್ಲವೆಂದು, ಈ ವಾಸ್ತವವನ್ನು ಸಂಜೆ ಸೂರ್ಯನ ದಿಕ್ಕು ಕೆಂಪಾಗಿ ಇರುವುದರ ಮುಖಾಂತರವಾಗಿ ನಿರೂಪಿಸಿರುವರು. ಆಧುನಿಕ ವಿಜ್ಞಾನವೂ ಸಹ ಇದನ್ನು ಅಂಗೀಕರಿಸಿದೆ.


ಸೂರ್ಯ ಕಿರಣಗಳು ಪ್ರಯಾಣಿಸುತ್ತಿರುವಾಗ ಭೂಮಿಯನ್ನು ಆವರಿಸಿರುವ ಗಾಳಿಯ ಆವರಣದಿಂದ ಹೋಗುತ್ತವೆ. ಗಾಳಿಯ ಪರಮಾಣುಗಳೊಂದಿಗೆ ಢಿಕ್ಕಿ ಹೊಡೆದು ಕಡಿಮೆ ಸಾಮರ್ಥ್ಯ ಇರುವ ಕಾಂತಿ ಕಣಗಳು ಹಾಗೆಯೇ ಗಾಳಿ ಪರಮಾಣುಗಳೊಂದಿಗೆ ಢಿಕ್ಕಿ ಹೊಡೆದು ವ್ಯಾಪಿಸುತ್ತವೆ. ಎಷ್ಟು ದೂರ ಕಿರಣಗಳು ಗಾಳಿಯ ಆವರಣದಲ್ಲಿ ಪ್ರಯಾಣವನ್ನು ಮಾಡುತ್ತದೆಯೋ ಅಷ್ಟು ಹೆಚ್ಚಿನ ಕಿರಣಗಳು ಗಾಳಿ ಪರಮಾಣುಗಳನ್ನು ಢಿಕ್ಕಿ ಹೊಡೆದು ವ್ಯಾಪಿಸುತ್ತವೆ.


ಅಸ್ತಮಿಸುವ ಸೂರ್ಯನ ಕಿರಣಗಳು ಮಧ್ಯಾಹ್ನ ದ ಕಿರಣಗಳಿಗಿಂತ ಹದಿನಾರು ಪಾಲು‌‌ ಸುಧೀರ್ಘ ಪ್ರಯಾಣ ಮಾಡುತ್ತವೆ. ಹೀಗೆ ಅಸ್ತಮಿಸುವ ಸೂರ್ಯನ ಕಿರಣಗಳು ಹೆಚ್ಚು ದೂರ ಪ್ರಯಾಣ ಮಾಡುವುದರಿಂದ ಗಾಳಿಯಲ್ಲಿ ಘರ್ಷಣೆಗೆ ಒಳಗಾಗಿ ಹೆಚ್ಚಾಗಿ ವ್ಯಾಪಿಸುತ್ತವೆ. ಹೆಚ್ಚು ಪ್ರಸರಣಾ ಸಾಮರ್ಥ್ಯ ಹೊಂದಿರುವ ಕೆಂಪು ಕಿರಣಗಳು ಮಾತ್ರ ಈ ರೀತಿ ವ್ಯಾಪಿಸುತ್ತವೆ.

ಈ ಕೆಂಪು ಕಿರಣಗಳು ನಮ್ಮ ಕಣ್ಣಿಗೆ ಬಿದ್ದು ಅಸ್ತಮಿಸುವ ಸೂರ್ಯನು ನಮಗೆ ಕೆಂಪಾಗಿ ಕಾಣುತ್ತಾನೆ.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑