Tel: 7676775624 | Mail: info@yellowandred.in

Language: EN KAN

    Follow us :


ಜಾನಪದವನ್ನು ನೋಡುವ ಮತ್ತು ಕೇಳುವುದಕ್ಕಿಂತ ಅನುಭವಿಸಬೇಕು ಸಿ ಟಿ ರವಿ

Posted Date: 09 Oct, 2019

ಜಾನಪದವನ್ನು ನೋಡುವ ಮತ್ತು ಕೇಳುವುದಕ್ಕಿಂತ ಅನುಭವಿಸಬೇಕು ಸಿ ಟಿ ರವಿ

ರಾಮನಗರ: ಜಾನಪದ ಎಂಬುದು ಕೇವಲ ಒಂದು ಕುಟುಂಬದಂತಲ್ಲ, ಪ್ರತಿ ಕುಟುಂಬದ ಸಾಕು ಪ್ರಾಣಿಗಳು, ಜಾನುವಾರುಗಳು, ಕಾಡಿನ ಪ್ರಾಣಿ ಪಕ್ಷಿಗಳು ಹಾಗೂ ಭೂಮಂಡಲವನ್ನು ಸದೃಢಗೊಳಿಸುವಂತಹ ಮರಗಿಡಗಳೆಲ್ಲವೂ ಸೇರಿಯೇ ಜನಪದರ ಬಾಯಿಂದ ಬಾಯಿಗೆ ಹರಡುವ ಮೂಲಕ ಜಾನಪದವಾಗಿ ಬೆಳೆದು ನಿಂತಿದೆ, ಇಂತಹ ಜಾನಪದವನ್ನು ಈಗಿನ ಮಂದಿ‌ನೋಡುತ್ತಿದ್ದಾರೆ, ಆದರೆ ನಾವು ಮತ್ತು ನಮ್ಮ ಹಿರಿಯರು ಅನುಭವವಿಸಿ ಬಂದಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವ ಸಿ ಟಿ ರವಿ ಹೇಳಿದರು.

ಅವರು ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದ ಜಾನಪದ ಲೋಕದಲ್ಲಿ ಹಮ್ಮಿಕೊಂಡಿದ್ದ ಸಿರಿ ದಸರಾ ಜಾನಪದ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮುಂದುವರೆದು ಮಾತನಾಡಿದ ಅವರು ಕುಟುಂಬ ಎಂದರೆ ಕೇವಲ ಮನುಷ್ಯರಷ್ಟೇ ಅಲ್ಲ, ಸಾಕುವ ಎಲ್ಲಾ ಜಾನುವಾರುಗಳು ಸಹ ಕುಟುಂಬವೇ, ಜಾನಪದದಲ್ಲಿ ಈ ಎರಡಕ್ಕೂ ಅವಿನಾಭಾವ ಸಂಬಂಧವಿದೆ ಎಂದು ಹೇಳಿದರು.
 ಲನಾವು ಜಾನಪದವನ್ನು ಕಾಡು ಮೇಡು, ಪ್ರಾಣಿಪಕ್ಷಿಗಳು, ಗಿಡಮರಗಳು ಸೇರಿಯೇ ಜಾನಪದವಾಗಿದೆ ಆದರೆ ಇಂದಿನ ಅಪಾಟ್೯ಮೆಂಟ್ ಮತ್ತು ಜಾಗತೀಕರಣದ ಯುಗದಲ್ಲಿ ಪರಿಚಿತರು ಅಪಚರಿತರೇ ಆಗಿದ್ದಾರೆ. ಅಪರಿಚತರನ್ನು ಪರಿಚಿತರನ್ನಾಗಿ  ನಂತರ ನಮ್ಮವರನ್ನಾಗಿಯೇ ಕಂಡುಕೊಳ್ಳು ವುದೇ ಜಾನಪದ ಎಂದು ತಮ್ಮ ಮನದಾಳದ ಮಾತನ್ನು ವ್ಯಕ್ತಪಡಿಸಿದರು.

ಹೆಚ್ ಎಲ್ ನಾಗೇಗೌಡರು ಜಾನಪದ ಜಗತ್ತಿನ ಕಲ್ಪನೆ ಮತ್ತು ಕಟ್ಟುವಿಕೆಯಿಂದ ಮುಂದಿನ ಪೀಳಿಗೆಗೆ ಬಳುವಳಿ ನೀಡಿದ್ದಾರೆ. ಪೂಜಾ ಪ್ರಾರ್ಥನೆ ಯಿಂದಲೂ ನಮ್ಮ ಪೂರ್ವಿಕರು ಮತ್ತು ಜಾನಪದರ ಸ್ಮರಣೆ ಇದೆ ಪ್ರಾಕೃತಿಕ ಜೀವನ ಎಂದರೆ ಮೃತ್ಯುಂಜಯ ಸಮಾಜ ಇಂದಿನ ಜೀವನ ಇದ್ದು ಇಲ್ಲದಂತಹ ತಬ್ಬಲಿ ಜೀವನ ನಮ್ಮದಾಗಿದೆ. ಜಾನಪದ ಲೋಕಕ್ಕೆ ಮುಂದಿನ ಆಯವ್ಯಯದಲ್ಲಿ ಅನುದಾನ ನೀಡಲು ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಮಕ್ಕಳ ಬಾಲ್ಯವನ್ನು ಶಾಲೆಗಳು ಮತ್ತು ಪೋಷಕರು ಕಿತ್ತುಕೊಳ್ಳುತ್ತಿರುವುದು ಅಕ್ಷಮ್ಯ ಅಪರಾಧ, ಕೇವಲ ಕೆಲಸದ ಸಲುವಾಗಿ ಓದಿಸುವ ಬದಲಿಗೆ ಆತ್ಮವಿಶ್ವಾಸವನ್ನು ಬೆಳೆಸುವತ್ತ ಮಕ್ಕಳನ್ನು ಬೆಳೆಸಬೇಕು ಎಂದು ಕಿವಿಮಾತು ಹೇಳಿದರು.

ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ.ಜಯಪ್ರಕಾಶ್‌ಗೌಡ ಮಾತನಾಡಿ, ೧೯೭೯ರಲ್ಲಿ ನಾಗೇಗೌಡರು ಕಟ್ಟಿದ ಈ ಜಾನಪದ ಲೋಕದಲ್ಲಿ ಅವರೇ ಸಂಪಾದಿಸಿಟ್ಟು ಹೋಗಿರುವ ಸಾವಿರ ಗಂಟೆಗಳು ಹಾಡಬಹುದಾದ ಧ್ವನಿಸುರುಳಿ ಮತ್ತು ನೂರಾರು ಗಂಟೆಗಳ ಕಾಲ ಪ್ರದರ್ಶನಮಾಡಬಹುದಾದ ವೀಡಿಯೋ ಹಾಗೂ ಎಂಟು ಸಾವಿರ ಕಲಾ ಪ್ರಕಾರಗಳು ಜಾನಪದ ಲೋಕದಲ್ಲಿ ಸ್ಥಾಪಿಸಿದ್ದಾರೆ.
ಸಂಸ್ಕೃತಿ ಸಚಿವ ರವಿಯವರು ಹೆಚ್ಚಿನ ಅನುದಾನ ದ ಜೊತೆಗೆ ಸಿಬ್ಬಂದಿಗಳಿಗೆ ನೆಲೆ ಒದಗಿಸಲು ಸಹಕಾರ ನೀಡಬೇಕು. ಶಾಸ್ತ್ರೀಯ ಕಲಾವಿದರಂತೆ ಜಾನಪದ ಕಲಾವಿದರಿಗೂ ಹೆಚ್ಚಿನ ಅವಕಾಶ ಮತ್ತು ಮಾಶಾಸನ ನೀಡಬೇಕು, ಹಾಗೆ ಮೂಡಲಪಾಯ ಯಕ್ಷಗಾನ ಪುನರುಜ್ಜೀವನ ಗೊಳಿಸಲು ಜಾನಪದ ಪ್ರಾಧಿಕಾರ ರಚಿಸುವ ಮೂಲಕ ಜಾನಪದ ಸಂಸ್ಕೃತಿಯನ್ನು ಉಳಿಸುವ ಪ್ರಯತ್ನ ವನ್ನು ಸಚಿವರು ಮಾಡಬೇಕೆಂದು ಮನವಿ ಮಾಡಿದರು.


ರಾಮನಗರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಯ ವಿಭವ ಸ್ವಾಮಿ ಮಾತನಾಡಿ, ೨೦೧೩ ರಲ್ಲಿ ಜಾನಪದ ಲೋಕದ ಸಹಕಾರದಿಂದ ಮಹದೇಶ್ವರ ಬೆಟ್ಟದಲ್ಲಿ ಜಾನಪದ ಜಾತ್ರೆ ಅನಾವರಣ ಗೊಳಿಸಿ ಜಾನಪದ ಕಲಾ ಲೋಕ ವನ್ನೇ ಮರು ಸೃಷ್ಟಿಸಿ ಹೊರಜಗತ್ತಿಗೆ ಪರಿಚಯ ಮಾಡಿದ ಕ್ಷಣವನ್ನು ನೆನಪಿಸಿಕೊಂಡರು.

ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜೋಗಿಲ ಸಿದ್ದರಾಜು ಮನವಿಯೊಂದನ್ನು ಸಲ್ಲಿಸಿ ಹದಿನೇಳು ಅಕಾಡೆಮಿ ಗಳಿಗೆ ಹೆಚ್ಚಿನ ಅನುದಾನ ನೀಡಲಾಗುತ್ತಿದೆ. ಜಾನಪದ ಕಲಾವಿದರು ನಿರ್ಲಕ್ಷಕ್ಕೆ ಒಳಗಾಗಿದ್ದಾರೆ, ಅವರಿಗೆ ಕೊಡುವ ಗೌರವ ಧನವೂ ಸಹ ತೀರಾ ಕಡಿಮೆಯಾಗಿದೆ ಅವರಿಗೆ ಸಾಮಾಜಿಕ ನ್ಯಾಯ ಸಿಗಬೇಕು ಎಂದರು.
ಸಂಘಸಂಸ್ಥೆಗಳಿಗೆ ಮತ್ತು ಮುಖ್ಯಸ್ಥರಿಗೆ ಹೆಚ್ಚಿನ ಅನುದಾನ, ಸಂಸ್ಕೃತಿ ಉಳಿಸುವ ಉತ್ಸವಗಳನ್ನು ನೀಡುವುದು, ಅಂತರಾಜ್ಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಜರುಗುವ ಸಂಸ್ಕೃತಿಯ ಕಾರ್ಯಗಳಿಗೆ ಕರ್ನಾಟಕದ ಕಲಾವಿದರಿಗೆ ಪ್ರೋತ್ಸಾಹ, ಉತ್ತರ ಕರ್ನಾಟಕ ಕಲಾವಿದರು ನೆರೆಯಿಂದ ಎಲ್ಲವನ್ನೂ ಕಳೆದುಕೊಂಡಿದ್ದಾರೆ, ಅವರಿಗೆ ಶೀಘ್ರವಾಗಿ ಕಲಾಬದುಕು ಕಟ್ಟಿಕೊಳ್ಳಲು ಅಗತ್ಯ ಕ್ರಮ ವಹಿಸುವಂತೆ ಸಚಿವರಿಗೆ ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಟಿ. ತಿಮ್ಮೇಗೌಡ  ಕೋರಿಕೆ ಮಂಡಿಸಿ ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿವೆ, ಸಚಿವರು ಬಳಸಿಕೊಳ್ಳಲಿ, ಕನ್ನಡ ಸಾಹಿತ್ಯ ಪರಿಷತ್ತಿನಂತೆ ಕರ್ನಾಟಕ ಜಾನಪದ ಪರಿಷತ್ತು ಸಹ ರಾಜ್ಯದಾದ್ತ ಪ್ರತಿ ಜಿಲ್ಲೆಗಳಲ್ಲಿ ಸಂಘಟನೆ ಮಾಡಲು ಸಹಾಯಧನ, ಜಾನಪದ ಲೋಕದಲ್ಲಿ ಪ್ರವಾಸಿ ಕುಟೀರ, ಜಾನಪದ ಕಾರಂಜಿ, ಬುಡಕಟ್ಟು ಜನಾಂಗದ ಜೀವನಶೈಲಿಯ ಅಧ್ಯಯನ ಮಾಡಲು ಹಾಗೂ ಲಕ್ಷಾಂತರ ಕಲಾವಿದರಿಗೆ ಮಾಶಾಸನ ಮಂಜೂರು ಮಾಡಲು ಮನವಿ ಮಾಡಿದರು.

ಕಲೆ ಸಂಸ್ಕೃತಿ ಉಳಿಸುವಲ್ಲಿ ಹೆಚ್ ಎಲ್ ನಾಗೇ ಗೌಡರು, ಜೀಶಂಪ, ನಾರಾಯಣ, ಗೊ.ರು ಚನ್ನಬಸಪ್ಪ ಅನೇಕ ಮಹನೀಯರ ಕೊಡುಗೆ ಜಾನಪದ ಲೋಕಕ್ಕೆ ಇದೆ ಎಂದು ಇದೇ ವೇಳೆ ಸ್ಮರಿಸಿದರು.
ಕಲಾವಿದರಿಗೆ ವಯೋಮಿತಿ ಸಡಿಲ ಮಾಡಿ, ಮಾಶಾಸನ ಹೆಚ್ಚಳ ಮಾಡುವಂತೆ ಸಚಿವರಲ್ಲಿ ಮನವಿ ಮಾಡಿದ ಅವರು ಯುವಜನರು ಜಾನಪದ ಕಲಿಯಬೇಕು. ಜಾನಪದವನ್ನು ಪಠ್ಯದಲ್ಲಿ ಅಳವಡಿಸುವಂತೆ ಮನವಿ ಮಾಡಿದರು.

ವೇದಿಕೆಯಲ್ಲಿ ಜಾನಪದ ಪರಿಷತ್ತಿನ ವ್ಯವಸ್ಥಾಪಕ ಟ್ರಸ್ಟಿಗಳಾದ ಆದಿತ್ಯ ನಂಜರಾಜ್, ಜಿಲ್ಲಾಧಿಕಾರಿಗಳಾದ ಎಂ.ಎಸ್ ಅರ್ಚನಾ, ಸಾಹಸ ಕಲಾವಿ ದರ ಸಂಘದ ಅಧ್ಯಕ್ಷರಾದ ಹಾಸನ ರಘು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಶಂಕರಪ್ಪ, ರಾಮನಗರ ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯ ಕ್ಷರಾದ ಸು.ತ ರಾಮೇಗೌಡ, ಇತರರು ಇದ್ದರು.
ಕಾರ್ಯಕ್ರಮಕ್ಕೆ ಜಾನಪದ ಲೋಕದ ಮುಖ್ಯ ಆಡಳಿತಾಧಿಕಾರಿ ರುದ್ರಪ್ಪ ಸ್ವಾಗತ ಬಯಸಿದರು. ಆಡಳಿತಾಧಿಕಾರಿ ಡಾ. ಕುರುವ ಬಸವರಾಜ್ ಕಾರ್ಯಕ್ರಮ ನಿರೂಪಣೆ ಮಾಡಿ ವಂದನೆ ಸಲ್ಲಿಸಿದರು.

ನಂತರ ಪತ್ರಕರ್ತರು ರಾಜಕೀಯ ಕೆಸರೆರಚಾಟದ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಿದ ಸಚಿವರು, ಪಕ್ಷದ ಅಂತರಿಕ ವಿಷಯವನ್ನು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇನೆ, ಸಾರ್ವಜನಿಕವಾಗಿ ಮಾತಾಡುವುದಿಲ್ಲ, ನೆರೆ ಸಂತ್ರಸ್ತರಿಗೆ ಎಲ್ಲಾ ಅನುಕೂಲ ಮಾಡಿಕೊಡಲು ಒಟ್ಟಾಗಿ ಶ್ರಮಿಸುತ್ತಿದ್ದೇವೆ. ನನ್ನನ್ನು ಸೇರಿದಂತೆ ಪಕ್ಷದ ಯಾವ ಮುಖಂಡರು ನಾಯಕರು ಮತ್ತು ಪಕ್ಷದ ವಿರುದ್ಧ ಮಾತನಾಡಬಾರದು, ಏನಿದ್ದರೂ ಪಕ್ಷದ ವೇದಿಕೆಯಲ್ಲಿ ಕುಳಿತು ಬಗೆಹರಿಸಿಕೊಳ್ಳಬೇಕು ಎಂದು ಪುನರುಚ್ಚರಿಸಿದರು.

ಗೋ ರಾ ಶ್ರೀನಿವಾಸ...
ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑