Tel: 7676775624 | Mail: info@yellowandred.in

Language: EN KAN

    Follow us :


ಗ್ರಾಮೀಣ ಜನರ ಪೌಷ್ಟಿಕ ಆಹಾರಕ್ಕಾಗಿ ಹಿತ್ತಲ ಕೋಳಿ ಸಾಕಿ ಡಾ ಜಯರಾಮ್

Posted date: 12 Oct, 2019

Powered by:     Yellow and Red

ಗ್ರಾಮೀಣ ಜನರ ಪೌಷ್ಟಿಕ ಆಹಾರಕ್ಕಾಗಿ ಹಿತ್ತಲ ಕೋಳಿ ಸಾಕಿ ಡಾ ಜಯರಾಮ್

ಚನ್ನಪಟ್ಟಣ: ಗ್ರಾಮೀಣ ಭಾಗದ ಜನರಿಗೆ ಹೆಚ್ಚಿನ ಪ್ರೋಟೀನ್ ಯುಕ್ತ ಪೌಷ್ಟಿಕ ಆಹಾರಕ್ಕಾಗಿ ಮನೆಯ ಹಿತ್ತಲಿನಲ್ಲಿ ಕೋಳಿ ಸಾಕುವುದು ಉತ್ತಮ ಎಂದು ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ ಜಯರಾಮ್ ತಿಳಿಸಿದರು. ಅವರು ನಗರದ ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಹಿತ್ತಲ ಕೋಳಿ ವಿತರಣೆ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಕೋಳಿ ಮರಿಗಳನ್ನು ವಿತರಣೆ ಮಾಡಿ ಮಾತನಾಡಿದರು.


ಈ ಹಿಂದೆ ಎಲ್ಲಾ ಹಳ್ಳಿಗಳಲ್ಲಿ ಪ್ರತಿ ಮನೆಯಲ್ಲೂ ಕೋಳಿ ಸಾಕಾಣಿಕೆ ಸಾಮಾನ್ಯವಾಗಿತ್ತು, ನಾಗರೀಕತೆ ಬೆಳೆದಂತೆಲ್ಲಾ ಇತ್ತೀಚೆಗೆ ಕೋಳಿ ಸಾಕುವವರು ಬಹಳ ಕಡಿಮೆಯಾಗಿದ್ದು ಸಾಕಲು ಪ್ರೇರಣೆಯಾಗಲಿ ಎಂದು ಪ್ರತಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಕೋಳಿ ಮರಿಗಳನ್ನು ವಿತರಿಸಲಾಗುತ್ತಿದೆ ಎಂದರು.

ಮಳೂರು, ಬೇವೂರು, ಹೊಂಗನೂರು, ಕೋಡಂಬಳ್ಳಿ ಮತ್ತೆ ಅಕ್ಕೂರು ಜಿಲ್ಲಾ ಪಂಚಾಯತಿ ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಸಾಮಾನ್ಯ ವರ್ಗದ ಜನರಿಗೆ ೧೨೩, ೪೫, ೫೧೩ ರಂತೆ ಒಟ್ಟು ೩,೪೦೬ ಕೋಳಿ ಮರಿಗಳನ್ನು ವಿತರಿಸಲಾಯಿತು. ಇದೇ ವೇಳೆ ಪಶು ಇಲಾಖೆಯ ಉಪ ನಿರ್ದೇಶಕ ಡಾ ಸಿದ್ದರಾಮಯ್ಯ ಸೇರಿದಂತೆ ಅನೇಕ ಅಧಿಕಾರಿಗಳು ಹಾಜರಿದ್ದರು.


*ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಉಚಿತವಾಗಿ‌ ನೀಡುವಂತೆ ಸಾಮಾನ್ಯ ವರ್ಗದ ಬಡವರಿಗೂ ಉಚಿತ ಕೋಳಿ ಮರಿಗಳನ್ನು ನೀಡಿ ಸಾಕುವವರಿಗೆ ಉತ್ತೇಜನ ನೀಡಬೇಕು.* *ವೀಣಾಕುಮಾರಿ, ಜಿಲ್ಲಾ ಪಂಚಾಯತಿ ಅಧ್ಯಕ್ಷರು (ಪ್ರಭಾರ)*


*ಇಲಾಖೆಯ ವತಿಯಿಂದ ವ್ಯವಸ್ಥಿತವಾಗಿ ಕೋಳಿ ಮರಿಗಳನ್ನು ಕೊಡಬೇಕು, ಒಂದು ಜಿಲ್ಲಾ ಪಂಚಾಯತಿಯಲ್ಲಿ ಕನಿಷ್ಠ ಹತ್ತು ಗ್ರಾಮದ ತಲಾ ಹತ್ತು ಮಂದಿಗೆ ಕೋಳಿ ಮರಿಗಳನ್ನು ನೀಡಬೇಕು".

*ಸುಗುಣ ತಿಮ್ಮಪ್ಪರಾಜು, ಬೇವೂರು ಜಿಲ್ಲಾ ಪಂಚಾಯತಿ ಸದಸ್ಯೆ.*


*ಕೋಳಿ ಸಾಕಾಣಿಕೆ ಮಾಡುವವರು ಬಡತನ ರೇಖೆಯಿಂದ ಹೊರಬರಲು ಸಾಧ್ಯವಾಗುತ್ತದೆ. ಒಬ್ಬ ವ್ಯಕ್ತಿಗೆ ಕನಿಷ್ಠ ಐವತ್ತು ಕೋಳಿ ಮರಿಗಳನ್ನು ನೀಡಿ ವ್ಯವಸ್ಥಿತವಾದ ಗೂಡು ಮಾಡಿಕೊಟ್ಟರೆ ಬದುಕು ಸಾಗಿಸಲು ಅನುಕೂಲವಾಗುತ್ತದೆ.*

*ರಾಜಣ್ಣ, ತಾಲ್ಲೂಕು ಪಂಚಾಯತಿ ಅಧ್ಯಕ್ಷರು.*


*ಜಿಲ್ಲಾ ಪಂಚಾಯತಿಗೆ ಕೊಡುವಂತೆ ತಾಲ್ಲೂಕು ಪಂಚಾಯತಿ ವ್ಯಾಪ್ತಿಯಲ್ಲಿಯೂ ಕನಿಷ್ಠ ಹತ್ತು ಗ್ರಾಮಗಳಿಗೆ ಉಚಿತ ಕೋಳಿ ಮರಿಗಳನ್ನು ನೀಡಿದರೆ ಬಡತನ ರೇಖೆಗಿಂತ ಕಡಿಮೆ ಇರುವ ಮಂದಿಯ ಬದುಕು ಹಸನಾಗುತ್ತದೆ.*

*ಸುರೇಶ್ ಹೊಂಗನೂರು, ತಾಲ್ಲೂಕು ಪಂಚಾಯತಿ ಸದಸ್ಯ*


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑