Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೫೯: ವಿಭೂತಿಯನ್ನು ಏಕೆ ಧರಿಸುವರು ?

Posted date: 12 Oct, 2019

Powered by:     Yellow and Red

ತಾಳೆಯೋಲೆ ೫೯: ವಿಭೂತಿಯನ್ನು ಏಕೆ ಧರಿಸುವರು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


ವಿಭೂತಿಯನ್ನು ಏಕೆ ಧರಿಸುವರು ?


ಪ್ರಾರ್ಥನಾ ಸಮಯದಲ್ಲಿ ಪ್ರತಿಯೊಬ್ಬ ಹಿಂದುವೂ ನೊಸಲಿಗೆ ವಿಭೂತಿಯನ್ನು ಹಚ್ಚಿಕೊಳ್ಳುತ್ತಿದ್ದರು. *ವಿಭೂತಿಯಲ್ಲಿರುವ ಔಷಧೀಯ ಗುಣಗಳು ಈ ಅಭ್ಯಾಸವನ್ನು ಅರ್ಥವಂತವನ್ನಾಗಿ ಮಾಡಿವೆ*. ಸ್ವಚ್ಛವಾದ ವಿಭೂತಿಗೆ ಬಹಳಷ್ಟು ಶುಭ ಲಕ್ಷಣಗಳು ಇರುವವು. *ಸ್ವಚ್ಛವಾದ ವಿಭೂತಿಯನ್ನು ಹೊಂದುವುದಕ್ಕೆ ಹುಲ್ಲನ್ನು ಮಾತ್ರವೇ ಹಸುವಿನ ಸಗಣಿಯನ್ನು ಶೇಖರಿಸಬೇಕು. ಆ ಸಗಣಿಯನ್ನು ಧಾನ್ಯದ ಹೊಟ್ಟಿನಲ್ಲಿ ಶಿವರಾತ್ರಿಯ ದಿನ ಸುಡಬೇಕು. ಸುಟ್ಟ ಸಗಣಿಯನ್ನು ನೀರಿನಲ್ಲಿ ತೊಳೆದು ನಂತರ ಒಣಗಿಸಿ ಪರಮೇಶ್ವರನಿಗೆ ಅರ್ಪಿಸಿ ಶುಭ್ರವಾದ ಕಡೆ ಇಟ್ಟು ಉಪಯೋಗಿಸಬೇಕು.*


ವಿಭೂತಿಯನ್ನು ಒದ್ದೆ ಮಾಡಿಯಾಗಲಿ ಅಥವಾ ಪುಡಿಯನ್ನಾಗಿ ಮಾಡಿ ಉಪಯೋಗಿಸಬಹುದು. *ವಿಭೂತಿಯು ಶರೀರದ ಉಷ್ಣಗ್ರತೆಯನ್ನು ಹತೋಟಿಯಲ್ಲಿಡುತ್ತದೆ*. ಹಿಂದೂಗಳ ಪ್ರಕಾರ ವಿಭೂತಿಯನ್ನು ಹಚ್ಚಿಕೊಳ್ಳುವುದರಿಂದ ಶಿವನು ಪ್ರಸನ್ನನಾಗುತ್ತಾನೆ ಎಂಬ ನಂಬಿಕೆಯಿದೆ. ವಿಭೂತಿಯನ್ನು ಹಣೆ, ಕತ್ತು, ಭುಜಗಳು, ಕೈಗಳ ಮತ್ತು ಮೊಣಕೈಗಳಿಗೆ ಹಚ್ಚಿಕೊಳ್ಳುತ್ತಾರೆ.


*ಜ್ವರದಲ್ಲಿರುವವರಿಗೆ ಹಣೆಯ ಮೇಲೆ ತೇವದ ವಿಭೂತಿಯನ್ನು ಹಚ್ಚಿದರೆ ಶರೀರದ ಉಷ್ಣತೆ ಕಡಿಮೆಯಾಗುತ್ತದೆ*. ಹೋಮದಲ್ಲಿ ಹಾಕಿರುವ ಔಷಧೀಯ ಸಂವಿತೆಗಳು ಹಾಗೂ ಹಸುವಿನ ತುಪ್ಪವು ಪವಿತ್ರ ಭಸ್ಮವನ್ನು ಉಳಿಸುತ್ತದೆ. ಹಾಗಾಗಿ ಹೋಮದ ಭಸ್ಮವನ್ನು ಸಹ ಉಪಯೋಗಿಸಬಹುದು. ಇದರಲ್ಲಿಯೂ ಅನೇಕ ಔಷಧೀಯ ಗುಣಗಳಿರುವವು.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑