Tel: 7676775624 | Mail: info@yellowandred.in

Language: EN KAN

    Follow us :


ಆದರ್ಶ ವ್ಯಕ್ತಿತ್ವದ ಮಹಾಮುನಿ ವಾಲ್ಮೀಕಿ. ದಂಡಾಧಿಕಾರಿ ಸುದರ್ಶನ್

Posted Date: 14 Oct, 2019

ಆದರ್ಶ ವ್ಯಕ್ತಿತ್ವದ ಮಹಾಮುನಿ ವಾಲ್ಮೀಕಿ. ದಂಡಾಧಿಕಾರಿ ಸುದರ್ಶನ್

ಚನ್ನಪಟ್ಟಣ: ವಾಲ್ಮೀಕಿ ಹೆಸರೇ ಒಂದು ರೋಮಾಂಚನ, ದರೋಡೆಕಾರನಾಗಿದ್ದ ವಾಲ್ಮೀಕಿ ಮುಂದೊಂದು ದಿನ ತನ್ನ ತಪ್ಪಿನ ಅರಿವಾಗಿ ತಪಸ್ಸನ್ನಾಚರಿಸಿ ಪ್ರಪಂಚವೇ ಹೊಗಳುವಂತಹ ಶ್ರೀ ರಾಮಾಯಣ ಎಂಬ ಅತ್ಯದ್ಭುತ ಕೃತಿಯನ್ನು ರಚಿಸಿ ಅಂದು, ಇಂದು ಮತ್ತು ಮುಂದೆಯೂ ತನ್ನ ಹೆಸರನ್ನು ಅಜರಾಮರವಾಗಿರಿಸಿಕೊಂಡು ನಮ್ಮೆಲ್ಲರಿಗೂ ಆದರ್ಶ ವ್ಯಕ್ತಿಯಾಗಿದ್ದಾರೆ ಎಂದು ತಾಲ್ಲೂಕಿನ ದಂಡಾಧಿಕಾರಿ ಸುದರ್ಶನ್ ನುಡಿದರು.


ಅವರು ತಾಲ್ಲೂಕು ಕಛೇರಿಯ ನ್ಯಾಯಾಲಯದ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿ ಮತ್ತು ತಾಲ್ಲೂಕು ಆಡಳಿತ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು.


ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕಿರಣಕುಮಾರ್ ಮಾತನಾಡಿ ಪರಿಶಿಷ್ಟ ಪಂಗಡಗಳ ಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ವಾಲ್ಮೀಕಿ ಹೆಸರಿನಲ್ಲಿ ಐರಾವತ ಯೋಜನೆ, ಸಮೃದ್ದಿ ಯೋಜನೆ, ಉನ್ನತಿ ಯೋಜನೆ, ಗಂಗಾ ಕಲ್ಯಾಣ ಯೋಜನೆ, ಭೂ ಒಡೆತನದ ಯೋಜನೆ ಹಾಗೂ ವಸತಿ, ಆಶ್ರಮ ಶಾಲೆಗಳು ಸೇರಿದಂತೆ ಉನ್ನತ ಶಿಕ್ಷಣ ಪಡೆಯುವ ಪರಿಶಿಷ್ಟ ಪಂಗಡ ದ ವಿದ್ಯಾರ್ಥಿಗಳಿಗೆ ಸಹಾಯಧನ ದಂತಹ ಯೋಜನೆ ಗಳನ್ನು ಸರ್ಕಾರ ಮುನಿವರ್ಯ ವಾಲ್ಮೀಕಿ ಹೆಸರಿನಲ್ಲಿ ಘೋಷಿಸಿದ್ದು ಫಲಾನುಭವಿಗಳು ಉಪಯೋಗಿಸಿಕೊಳ್ಳಬೇಕೆಂದರು.


ಕಾರ್ಯಕ್ರಮದಲ್ಲಿ ನೋಂದಣಿ ಇಲಾಖೆ, ಅಕ್ಷರ ದಾಸೋಹ, ಟ್ರಜರಿ, ತಾಲ್ಲೂಕು ಪಂಚಾಯತಿ, ತಾಲ್ಲೂಕು ಕಛೇರಿಯ ಸಿಬ್ಬಂದಿಗಳು ಮತ್ತು ಮುಖಂಡರಾದ ವೆಂಕಟಾಚಲಯ್ಯ, ಸಿದ್ದರಾಮಯ್ಯ ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑