Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೬೧: ತುಳಸಿ ಎಲೆಯನ್ನು ಕಿವಿಯ ಹಿಂಭಾಗದಲ್ಲಿ ಏಕೆ ಧರಿಸಬೇಕು?

Posted date: 15 Oct, 2019

Powered by:     Yellow and Red

ತಾಳೆಯೋಲೆ ೬೧: ತುಳಸಿ ಎಲೆಯನ್ನು ಕಿವಿಯ ಹಿಂಭಾಗದಲ್ಲಿ ಏಕೆ ಧರಿಸಬೇಕು?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


ತುಳಸಿ ಎಲೆಯನ್ನು ಕಿವಿಯ ಹಿಂಭಾಗದಲ್ಲಿ ಏಕೆ ಧರಿಸಬೇಕು ?


ಸಂಪ್ರದಾಯದ ಪ್ರಕಾರವಾಗಿ ನಮ್ಮ ಪೂರ್ವಿಕರು ಪೂಜಾ ಸಮಯದಲ್ಲಿ ಮತ್ತು ಇನ್ನಿತರ ಶುಭ ಸಮಾರಂಭಗಳಲ್ಲಿ ತುಳಸಿ ದಳಗಳನ್ನು ಕಿವಿಗಳ ಹಿಂಭಾಗ ಧರಿಸುತ್ತಿದ್ದರು. ಇದರಲ್ಲಿ ಬಹಳಷ್ಟು ಶಾಸ್ತ್ರೀಯತೆ ಇದೆ ಎಂಬ ವಿಷಯವನ್ನು ಹಿರಿಯರು ಗ್ರಹಿಸಿದ್ದಾರೆ.


*ಶರೀರದಲ್ಲಿ ತೀವ್ರವಾಗಿ ಗ್ರಹಿಸುವ ಗುಣ ಕಿವಿಗಳ ಹಿಂದಿನ ಭಾಗಕ್ಕೆ ಇದೆ.* ತುಳಸಿಯಲ್ಲಿನ ಔಷಧೀಯ ಗುಣಗಳು ನಮ್ಮೆಲ್ಲರಿಗೂ ತಿಳಿದಿದೆ. ತುಳಸಿಯನ್ನು ನಮ್ಮ ಕಿವಿಗಳ ಹಿಂಭಾಗ ತೂರಿಸಿ ಇಟ್ಟುಕೊಳ್ಳುವುದರಿಂದ *ಆ ಭಾಗದ ಚರ್ಮವು ತುಳಸಿಯ ಔಷಧ ಗುಣಗಳನ್ನು ಗ್ರಹಿಸುತ್ತವೆ*. ಆದ್ದರಿಂದ ಈ ವಿಧಾನವನ್ನು ಪ್ರಾಚೀನ ಋಷಿಗಳು ಸೂಚಿಸಿದ್ದಾರೆ. ತುಳಸಿಯ ಗಿಡವನ್ನು ಮನೆಯ ಮುಂಭಾಗದಲ್ಲಿ ಅಕ್ಕರೆಯಿಂದ ಬೆಳೆಸುತ್ತಾರೆ. *ಇತರೆ ತಳಿಯ ತುಳಸಿ ಗಿಡಗಳಿಗಿಂತ ಕೃಷ್ಣ ತುಳಸಿಯನ್ನು ಹೆಚ್ಚಾಗಿ ಇಷ್ಟಪಡುತ್ತಾರೆ*. ತುಳಸಿ ಗಿಡವನ್ನು ಪವಿತ್ರವಾದ ಗಿಡವೆಂದು ಭಾವುಸಿರುವುದರಿಂದ *ಮೈಲಿಗೆಯಾಗಿರುವವರು ಮುಟ್ಟಬಾರದೆನ್ನುವರು.* ತುಳಸಿ ಗಿಡದ ಸುತ್ತಲೂ ಭಕ್ತಿಯಿಂದ ಪ್ರತ್ಯೇಕವಾದ ಶ್ಲೋಕಗಳನ್ನು ಪಠಿಸುತ್ತಾ ಸುತ್ತು ಹಾಕುವುದರಿಂದ ಆರೋಗ್ಯವು ಸುಧಾರಿಸುತ್ತದೆ. ತುಳಸಿ ದಳಗಳನ್ನು ತೆಗೆಯುವಾಗಲೂ ಸಹ ಕೆಲ ಶ್ಲೋಕಗಳನ್ನು ಪಠಿಸಬೇಕು.


*ಏಕಾದಶಿ, ಬುಧವಾರ ಮತ್ತು ಶುಕ್ರವಾರ ಗಳ ದಿನಗಳಲ್ಲಿ ಮತ್ತು ಸಾಯಂಕಾಲದ ಸಮಯದಲ್ಲಿ ತುಳಸಿ ದಳಗಳನ್ನು ಕೀಳಬಾರದು ಎಂದು ಶಾಸ್ತ್ರಜ್ಞರು ಹೇಳಿದ್ದಾರೆ.*


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑