Tel: 7676775624 | Mail: info@yellowandred.in

Language: EN KAN

    Follow us :


ತಾಲ್ಲೂಕಿನಲ್ಲಿ ಸಿರಿಧಾನ್ಯ ಬೆಳೆದು ಒಕ್ಕಣೆ ಮಾಡುತ್ತಿರುವ ಸಿರಿವಂತ ಯುವಕ ಯೋಗೇಶಗೌಡ

Posted date: 16 Oct, 2019

Powered by:     Yellow and Red

ತಾಲ್ಲೂಕಿನಲ್ಲಿ ಸಿರಿಧಾನ್ಯ ಬೆಳೆದು ಒಕ್ಕಣೆ ಮಾಡುತ್ತಿರುವ ಸಿರಿವಂತ ಯುವಕ ಯೋಗೇಶಗೌಡ

ಒಕ್ಕಣೆ ಯಂತ್ರಗಳೊಂದಿಗೆ ಯೋಗೇಶಗೌಡ

ಚನ್ನಪಟ್ಟಣ: ಸಿರಿಧಾನ್ಯ ಎಂದರೆ ಇತ್ತೀಚಿನವರೆಗೂ ಮೂಗು‌ ಮುರಿಯುತ್ತಿದ್ದ ಜನರು ಸಿರಿಧಾನ್ಯ ಕ್ಕೆ ಮುಗಿ ಬೀಳುತ್ತಿರುವುದು ಕಂಡು ಬರುತ್ತಿದೆ. ಅಂದು ಬಡವರ ಧಾನ್ಯ ಎಂದೇ ಬಿಂಬಿತವಾಗಿದ್ದ ಸಿರಿಧಾನ್ಯಗಳು ಇಂದು ಸಿರಿವಂತರ ಮತ್ತು ರೋಗಿಗಳ ಧಾನ್ಯವಾಗಿ ಬದಲಾಗಿರುವುದು ನಿಜಕ್ಕೂ ಆಶ್ಚರ್ಯಕರವಾದರೂ ಸತ್ಯ.

ರಾಗಿ, ಆರ್ಕಾ, ನವಣೆ, ಸಾಮೆ, ಸಜ್ಜೆ, ಬರಗು, ಊದಲು, ಕೊರ್ಲೆ ಮತ್ತು ಬಿಳಿಜೋಳ ಎಂಬ ಒಂಭತ್ತು ಧಾನ್ಯಗಳೇ ಸಿರಿಧಾನ್ಯಗಳು.*


ಮಳೆಯಾಧಾರಿತ ಬೆಳೆಯಾದ್ದರಿಂದ ಈ ಧಾನ್ಯಗಳನ್ನು ಬೆಳೆಯಲು ನೀರಿನ ಅವಶ್ಯಕತೆ ಇಲ್ಲ, ನಾಟಿ ಮಾಡಿ, ಕಳೆ ಕೀಳುವ ಪ್ರಮೇಯವಿಲ್ಲ, ಕೊಟ್ಟಿಗೆ ಗೊಬ್ಬರ ಹೊರತುಪಡಿಸಿ ಬೇರೆ ಯಾವ ಗೊಬ್ಬರವನ್ನು ಹಾಕದೆ ಸಾವಯವ ಪದ್ಧತಿ ಯಲ್ಲಿ ಬೆಳೆಯುವ ಈ *ಸಿರಿಧಾನ್ಯಗಳಲ್ಲಿ ನಾರಿನಂಶದ ಜೊತೆಗೆ ಹೇರಳವಾದ ಪೌಷ್ಟಿಕಾಂಶಗಳು ಇರುವುದರಿಂದ ದೇಹದ ಎಲ್ಲಾ ಖಾಯಿಲೆಗಳಿಗೂ ಇದು ರಾಮಬಾಣವಾಗಿ ಕೆಲಸ ನಿರ್ವಹಿಸುತ್ತದೆ.*


ನಮ್ಮ ತಾಲ್ಲೂಕಿನಲ್ಲಿ ರಾಗಿ ಹೊಲದೊಳಗೆ ಸಾಲು ಬೆಳೆಯುತ್ತಿದ್ದು ಬಿಟ್ಟರೆ ಎಕರೆಗಟ್ಟಲೆ ಸಿರಿಧಾನ್ಯ ಬೆಳೆದಿದ್ದು ಬಹುತೇಕ ಕಡಿಮೆ.

ಆದರೆ ನಗರದಲ್ಲೇ ಹುಟ್ಟಿ ಬೆಳೆದ (ಮೂಲ ರೈತರ ಮಗ) ಎಂಬಿಎ ಪದವೀಧರ ಹಾಗೂ ವ್ಯಾಪಾರಸ್ಥ ಯುವಕ ಯೋಗೇಶಗೌಡ ತನ್ನ ಕುಟುಂಬದಿಂದ ಬಳುವಳಿಯಾಗಿ ಬಂದ ಜಮೀನು ಸೇರಿದಂತೆ *ತೊರೆಹೊಸೂರು ಗ್ರಾಮದ ಸ್ನೇಹಿತ ಟಿ ಸಿ ಅಚ್ಯುತಾನಂದ* ರವರ ಭೂಮಿಯನ್ನು ಮನವಿ ಮೇರೆಗೆ ಪಡೆದು ನವಣೆ, ಊದಲು ಮತ್ತು ಕೊರ್ಲೆಯನ್ನು ಹತ್ತಾರು ಎಕರೆ ಭೂಮಿಯಲ್ಲಿ ಬೆಳೆದು ಸಂತಷದಿಂದ ಬೀಗುತ್ತಿದ್ದಾರೆ. ಅಚ್ಯುತಾನಂದ ಭೂಮಿ ನೀಡಿದ್ದಲ್ಲದೆ ಸ್ವತಃ ಯೋಗೇಶಗೌಡ ನ ಜೊತೆ ನಿಂತು ಫಸಲು ತೆಗೆಯಲು ಸಹಕಾರ ನೀಡಿರುವುದು ನಿಜಕ್ಕೂ ಶ್ಲಾಘನೀಯ.


ಕಳೆದ ವರ್ಷ ಕಬ್ಬಾಳು ಗ್ರಾಮದ ಹೊಲದಲ್ಲಿ ಬೆಳೆದ ಕೊರ್ಲೆಯನ್ನು ಒಕ್ಕಣೆ ಮಾಡಿಸಲು ಬೇರೋಬ್ಬರ ಬಳಿ ತೆರಳಿದಾಗ ಅವರು ರೈತನ ಕಷ್ಟ ಪರಿಗಣಿಸದೇ ಬೇಕಾಬಿಟ್ಟಿಯಾಗಿ ನಡೆದುಕೊಂಡಿದ್ದರಿಂದ ನೊಂದುಕೊಂಡ ಯೋಗೇಶಗೌಡ ಸಿರಿಧಾನ್ಯಗಳನ್ನು ಒಕ್ಕಣೆ ಮಾಡುವ ಯಂತ್ರವನ್ನು ತಂದು ಅಳವಡಿಸಿಕೊಂಡು ನಂತರ ಬೆಳೆ ಬೆಳೆದಿದ್ದು ಅವರ ಛಲವನ್ನು ತೋರಿಸುತ್ತದೆ. *ನಗರದ ಕೋಟೆ ಯಲ್ಲಿರುವ ಶ್ರೀ ಕಾಳಿಕಾಂಭ ದೇವಾಲಯದ ಮುಂಭಾಗದಲ್ಲೇ ಒಕ್ಕಣೆ ಕೇಂದ್ರ, ಸಿರಿಧಾನ್ಯಗಳು ಮತ್ತು ಸಾವಯಯ ಉತ್ಪನ್ನಗಳ ಮಾರಾಟ ಮಳಿಗೆಯನ್ನು ಹೊಂದಿರುವುದಲ್ಲದೆ, ರೈತರು ಬೆಳೆದು ತಂದ ಎಲ್ಲಾ ರೀತಿಯ ಎಣ್ಣೆ ಕಾಳುಗಳನ್ನು ರುಬ್ಬಿ ಎಣ್ಣೆ ಮತ್ತು ಹಿಂಡಿಯನ್ನು ತೆಗೆಯುವ ಯಂತ್ರಗಳನ್ನು ಜೋಡಿಸಿದ್ದು ಸ್ಥಳೀಯ ರೈತರಿಗೆ ನೆರವಾಗುತ್ತಿದ್ದಾರೆ.*

*ಯೋಗೇಶಗೌಡ ರ ಸಂಪರ್ಕಿಸಬಹುದಾದ ಮೊಬೈಲ್ ನಂಬರ್ 9739828888..


*ಸಿರಿಧಾನ್ಯ ಮತ್ತು ಎಣ್ಣೆ ಕಾಳುಗಳನ್ನು ಬೆಳೆದು ಒಕ್ಕಣೆ ಗೆ ತರುವ ರೈತರಿಗೆ ರಿಯಾಯಿತಿ ದರದಲ್ಲಿ ಒಕ್ಕಣೆ ಮಾಡಿಕೊಡುತ್ತೇನೆ. ನಾನೊಬ್ಬ ರೈತನ ಮಗನಾಗಿ ರೈತನ ಕಷ್ಟ ಏನೆಂದು ನನಗೆ ಗೊತ್ತಿದೆ. ರೈತ ದೇಶದ ಬೆನ್ನೆಲುಬು ಎಂಬುದು ಕೇವಲ ಘೋಷ ವಾಕ್ಯದ ಬದಲು ಬೆನ್ನು ಮೂಳೆಯೇ ಮುರಿದು ಹೋಗುವಂತಹ ಸ್ಥಿತಿಯಲ್ಲಿ ಇಂದು ರೈತನಿದ್ದಾನೆ. ಆಳುವ ಸರ್ಕಾರಗಳ ಕಣ್ಣೊರೆಸುವ ತಂತ್ರ ಬಿಟ್ಟು ರೈತರಿಗೆ ತಂತ್ರಜ್ಞಾನ ಹೇಳಿಕೊಡಲಿ.*

*ಯೋಗೇಶಗೌಡ.*


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑