Tel: 7676775624 | Mail: info@yellowandred.in

Language: EN KAN

    Follow us :


ಇದೇ ಫೆಬ್ರುವರಿ 11ನೇ, ಭಾನುವಾರ 2018 ರಂದು ರಾಮನಗರದಲ್ಲಿ, “ರಾಮನಗರ ಮ್ಯಾರಥಾನ್”

Posted date: 10 Feb, 2018

Powered by:     Yellow and Red

ಇದೇ ಫೆಬ್ರುವರಿ 11ನೇ, ಭಾನುವಾರ 2018 ರಂದು ರಾಮನಗರದಲ್ಲಿ, “ರಾಮನಗರ ಮ್ಯಾರಥಾನ್”

ಮಾರ್ಗದ ನಕ್ಷೆ

ಯೆಲ್ಲೋ ಅಂಡ್ ರೆಡ್ ಫೌಂಡೇಷನ್ಸ್ ವತಿಯಿಂದ ಇದೇ ಫೆಬ್ರುವರಿ 11ನೇ, ಭಾನುವಾರ 2018 ರಂದು ರಾಮನಗರದಲ್ಲಿ, ರಾಮನಗರ ಜಿಲ್ಲಾ ಪೊಲೀಸ್ ಇಲಾಖೆಯ ಸಂಪೂರ್ಣ ಬೆಂಬಲ, ಸºಕ Áರದೊದಂದಿಗೆ “ರಾಮನಗರ ಮ್ಯಾರಥಾನ್” ಆಯೋಜಿಸಲಾಗಿದೆ.

ಕಳೆದ 4 ವರ್ಷಗಳಿಂದ ರಾಮನಗರ ಮ್ಯಾರಥಾನ್ ಆಯೋಜಿಸಲಾಗುತ್ತಿದ್ದು, 2014 ರಲ್ಲಿ 550 ಓಟಗಾರರು, 2015 ರಲ್ಲಿ 1500, 2016 ರಲ್ಲಿ 1200 ಮತ್ತು 2017 ರಲ್ಲಿ 2000ಕ್ಕೂ ಹೆಚು ಓಟಗಾರರು ಭಾಗವಹಿಸಿದ್ದರು. ಈ ವರ್ಷದ ಮ್ಯಾರಥಾನ್ ಓಟದಲ್ಲಿ 1500ಕ್ಕೂ ಹೆಚು್ಚ ಓಟಗಾರರು ಭಾಗವಹಿಸುವ ನಿರೀಕ್ಷೆ ಇದೆ. ಮ್ಯಾರಥಾನ್‍ನಲ್ಲಿ 100 ರಿಂದ 200 ಸ್ವಯಂ ಸೇವಕರು ಕಾರ್ಯನಿರ್ವಹಿಸುತ್ತಾರೆ.

2018 ರ ರಾಮನಗರ ಮ್ಯಾರಥಾನ್‍ನ ಉದ್ದೇಶ, ಜನರಲ್ಲಿ ಸಾವಯವ ಕೃಷಿ ಮತ್ತು ಉತ್ಪನ್ನಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ಅಂಗಾಂಗಗಳ ದಾನದ ಬಗ್ಗೆ ಜಾಗೃತಿ ಹಾಗೂ 2025ರ ಹೊತ್ತಿಗೆ ರಾಮನಗರ ಅಭಿವೃದಿ ಪಥದ ಚಿಂತನೆ ಬಗ್ಗೆ ಜನರಿಗೆ ಮನವರಿಕೆ ಮಾಡುವುದಾಗಿ.

ಈ ಮ್ಯಾರಥಾನ್‍ಗೆ ಮುಖ್ಯ ಅತಿಥಿಗಳಾಗಿ ರಾಮನಗರ ಜಿಲ್ಲಾಧಿಕಾರಿಗಳಾದ ಡಾ|| ಬಿ. ಆರ್. ಮಮತಾರವರು ಭಾಗವಹಿಸುತಿಧಾರೆ, ರಾಮನಗರ ಜಿಲ್ಲಾ ಪೊಲೀಸ್ ಅಧೀಕ್ಷರಾದ ಬಿ. ರಮೇಶ್, ಚಂದನಗೌಡ (ಚಿತ್ರ ನಟಿ), ನಾಯಕ್ ಜೋಷಿ (ಚಿತ್ರ ನಟ) ಪಾಲ್ಗೊಳ್ಳುತಿಧಾರೆ .

2018 - ರಾಮನಗರ ಮ್ಯಾರಥಾನ್‍ನ್ನು ರಾಮನಗರ ತಾಲ್ಲೊಕಿನ ಬಸವನಪುರದಲ್ಲಿ ಏರ್ಪಡಿಸಲಾಗಿದ್ದು, ಕಾರ್ಯಕ್ರಮವು
ಬೆಳಿಗ್ಗೆ: 6.20ಕ್ಕೆ  ಪ್ರಾರಂಭಗೊಳ್ಳುತದೆ . ಓಟದಲ್ಲಿ ಐದು ವರ್ಗಗಳಿದ್ದು, ಈ  ಕೆಳಕಂಡಂತಿವೆ.

* ರೂರಲ್ 7.ಕಿ.ಮೀ,

* ವಿದ್ಯಾರ್ಥಿ 7.ಕಿ.ಮೀ,

* ಹಿರಿಯರ 7ಕಿ.ಮೀ.,

* ರಾಕ್ 11.ಕಿ.ಮೀ ಮತ್ತು

* ರೀಡಿಫೈನ್ 1/2 (21.1ಕಿ.ಮೀ) ಓಟ.

 

ಮಾರ್ಗ: ಈ ಮ್ಯಾರಥಾನ್ ಓಟವು ಬಸವನಪುರದಲ್ಲಿ ಪ್ರಾರಂಭಗೊಂಡು ವಡೇರಹಳ್ಳಿ, ರಾಂಪುರದೊಡ್ಡಿ, ಗೋಪಾಲಪುರ, ದಾಸೇಗೌಡನ ದೊಡ್ಡಿ, ಮಾರ್ಗವಾಗಿ ಹುಣಸನಹಳ್ಳಿ ತಲುಪಿ ಪುನಃ ಬಸವನಪುರದಲ್ಲಿ ಓಟವು ಅಂತ್ಯಗೊಳುತ್ತದೆ.

ರಾಮನಗರ ಮ್ಯಾರಥಾನ್‍ನಲ್ಲಿ ಭಾಗವಹಿಸಲು ಸ್ಥಳೀಯ, ರಾಜ್ಯ, ರಾಷ್ಷ್ರ ಹಾಗೂ ವಿದೇಶದಿಂದ ಆನ್ ಲೈನ್ ಮೂಲಕ ಈಗಾಗಲೇ
ಸುಮಾರು  1000 ಕ್ಕಿಂತ ಹೆಚ್ಚು ಜನರು ನೊಂದಾಯಿಸಿಕೊಂಡಿದ್ದಾರೆ. ಈ ಓಟಕ್ಕೆ ಯೆಲ್ಲೋ ಆಂಡ್ ರೆಡ್ ಸರ್ವೀಸ್ ಪ್ರೆ.ಲಿ., ತಾಂತ್ರಿಕ ಸಹಕಾರವನ್ನು ನೀಡುತ್ತಿದೆ ಮತ್ತು ರೋಟರಿ ಸಿಲ್ಕ್ ಸಿಟಿ ರಾಮನಗರ, ಕೆಂಗಲ್ ಹನುಮಂತಯ್ಯ ಸ್ಪೋಟ್ರ್ಸ್ ಕ್ಲಬ್ ರವರು ಸಹ ಪ್ರಾಯೋಜಕತ್ವಕರಾಗಿದ್ದಾರೆ ಹಾಗೂ ಗೇಲ್ ಇಂಡಿಯಾ ಲಿಮಿಟೆಡ್, ಬಿಡದಿ, ಬಾಷ್ ಇಂಡಿಯಾ ಫೌಂಡೇಷನ್ಸ್, ರೋಟರಿ ಬಿಡದಿ ಸೆಂಟ್ರಲ್, ಕೆ.ಎಂ.ಎಫ್ ಬೆಂಗಳೂರು, ಜಿಲ್ಲಾ ಪೊಲೀಸ್ ಅಧೀಕ್ಷಕರು, ಮಾತೃಶೀ ಹಾಸ್ಪಿಟಲ್ ಚನ್ನಪಟ್ಟಣ, ಇಂಪನ ಕ್ಲಿನಿಕ್ ರಾಮನಗರ, ಚಿಗುರು ಫ್ರೇಮ್ಸ್ ಮತ್ತು ಅನೇಕ  ಸಂಘ ಸಂಸ್ಥೆಗಳು ಸಹಕಾರ ನೀಡುತ್ತಿವೆ. ಮ್ಯಾರಥಾನ್ ಓಟದಲ್ಲಿ ನಿರ್ಧಿಷ್ತ್ 
ಗುರಿ ತಲುಪಿದ ಎಲ್ಲಾ ಓಟಗಾರರಿಗೂ ಪಾರಿತೋಷಕ, ಪ್ರಶಸ್ತಿ ಪತ್ರ ನೀಡಲಾಗುವುದು. ಈ ಓಟದಲ್ಲಿ  ರಾಮನಗರ ಜಿಲ್ಲೆಯ ಜನರು ಹೆಚ್ಚಿನ  ಸಂಖ್ಯೆಯಲ್ಲಿ ಭಾಗವಹಿಸಿ ಸಾವಯವ ಕೃಷಿ ಮತ್ತು ಉತ್ಪನ್ನಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ಅಂಗಾಂಗಗಳ ದಾನದ ಬಗ್ಗೆ ಜಾಗೃತಿ ಹಾಗೂ 2025ರ ಹೊತ್ತಿಗೆ ರಾಮನಗರ ಅಭಿವೃದ್ಧಿ ಪಥದ ಚಿಂತನೆ ಬಗ್ಗೆ ಬಗ್ಗೆ ಜಾಗೃತಿ ಮೂಡಿಸುವ ಮಹತ್ತರವಾದ ಕಾರ್ಯಕ್ಕೆ ಕೈಜೋಡಿಸಿ ಸಹಕರಿಸಲು ಕೋರುತ್ತೇವೆ.

 

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑