Tel: 7676775624 | Mail: info@yellowandred.in

Language: EN KAN

    Follow us :


ಪ್ರತಿ ವರ್ಷ ಬೊಂಬೆ ಉತ್ಸವ, ತಯಾರಕರು ಮತ್ತು ಪ್ರವಾಸಿಗರ ನಡುವೆ ವೇದಿಕೆ ಕಲ್ಪಿಸಲ ಬದ್ದ ಡಿಸಿಎಂ ಅಶ್ವಥ್ ನಾರಾಯಣ

Posted Date: 21 Oct, 2019

ಪ್ರತಿ ವರ್ಷ ಬೊಂಬೆ ಉತ್ಸವ, ತಯಾರಕರು ಮತ್ತು ಪ್ರವಾಸಿಗರ ನಡುವೆ ವೇದಿಕೆ ಕಲ್ಪಿಸಲ ಬದ್ದ ಡಿಸಿಎಂ ಅಶ್ವಥ್ ನಾರಾಯಣ

**


ಚನ್ನಪಟ್ಟಣ:ಅ/೨೧/೨೦೧೯/ಸೋಮವಾರ.


*ಬೊಂಬೆಗಳ ಉತ್ಸವ*


ವಿಶ್ವ ಪ್ರಸಿದ್ಧಿ ಪಡೆದಿರುವ ಚನ್ನಪಟ್ಟಣ ದ ಗೊಂಬೆಗಳ ಉತ್ಸವವನ್ನು ಪ್ರತಿ ವರ್ಷ ನಡೆಸಲು ತೀರ್ಮಾನ ಕೈಗೊಳ್ಳಲಾಗುವುದು, ಗೊಂಬೆಗಳ ತಯಾರಕರೂ ಮತ್ತು ಪ್ರವಾಸಿಗರಿಗೆ ನೇರ ವೇದಿಕೆ ಕಲ್ಪಿಸಲು ಬದ್ದರಾಗಿರುವುದಾಗಿ ಉಪ ಮುಖ್ಯಮಂತ್ರಿ ಡಾ ಅಶ್ವಥ್ ನಾರಾಯಣ ತಿಳಿಸಿದರು.

ಅವರು ಚನ್ನಪಟ್ಟಣ ದ ಮಹದೇಶ್ವರ ನಗರದಲ್ಲಿರುವ ಚನ್ನಪಟ್ಟಣ ಕ್ರಾಫ್ಟ್ ಪಾಕ್೯ ಗೆ ಭೇಟಿ ನೀಡಿ ಮಾತನಾಡಿದರು.


*ಶಾಶ್ವತ ಹುದ್ದೆ ಕೌಶಲ ತರಬೇತಿ*


ಕರ ಕೌಶಲ ತರಬೇತಿ ಪಡೆದವರಿಗೆ ಶಾಶ್ವತ ಉದ್ಯೋಗ ಇದ್ದೇ ಇರುತ್ತದೆ, ಅದರಲ್ಲೂ ಚನ್ನಪಟ್ಟಣ ದ ಗೊಂಬೆಗಳಿಗೆ ಬಹು ಬೇಡಿಕೆ ಇರುವುದರಿಂದ ಹೆಚ್ಚಿನ ಅನುದಾನದ ಜೊತೆಗೆ ಎಲ್ಲಾ ಸೌಕರ್ಯಗಳನ್ನು ಕಲ್ಪಿಸಿಕೊಡಲು ಶ್ರಮಿಸಲಾಗುವುದು ಎಂದರು.


*ಜಿ ಎಸ್ ಟಿ ಮತ್ತು ಡಿಕೆಶಿ*


ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು ಜಿ ಎಸ್ ಟಿ ಒಂದು ಕ್ರಾಂತಿಕಾರಿ ಬೆಳವಣಿಗೆ, ಹಲವಾರು ತೆರಿಗೆ ಕಟ್ಟುವ ಬದಲು ಒಂದು ದೇಶ ಒಂದು ತೆರಿಗೆ ಎಂಬುದು ಇದರ ಉದ್ದೇಶ, ಇನ್ನೂ ಸಡಿಲಗೊಳಿಸುವತ್ತ ಚರ್ಚೆ ನಡೆಯುತ್ತಿದೆ. ಈ ಹಿಂದೆ ದೊಡ್ಡವರು ಇಂತಹ ತೆರಿಗೆಯನ್ನು ವಂಚಿಸಿ ಏನಾಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಎಂದು ಡಿ ಕೆ ಶಿವಕುಮಾರ್ ಹೆಸರೇಳದೆ ಮಾರ್ಮಿಕವಾಗಿ ನುಡಿದರು.


*ಸಿ ಪಿ ಯೋಗೇಶ್ವರ್ ಬಿಜೆಪಿ ಮತ್ತು ಕಾಂಗ್ರೆಸ್*


ಸಿ ಪಿ ಯೋಗೇಶ್ವರ್ ರವರನ್ನು ಬಿಜೆಪಿ ಪಕ್ಷ ಕಡೆಗಣಿಸಿತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು ಯೋಗೇಶ್ವರ್ ನಮ್ಮ ವರಿಷ್ಟರು, ಅವರನ್ನು ಯಾವ ಕಾರಣಕ್ಕೂ ಕಡೆಗಣಿಸಿಲ್ಲ, ಮೊದಲನೆ ಸುತ್ತಿನಲ್ಲಿ ಆಗದಿದ್ದದ್ದೂ ಎರಡನೇ ಸುತ್ತಿನಲ್ಲಿ ಆಗಲಿದೆ ಕಾದು ನೋಡಿ. ಚನ್ನಪಟ್ಟಣ ದಲ್ಲಿ ಬಿಜೆಪಿ ಮತ್ತು ಯೋಗೇಶ್ವರ್ ರಿಂದಲೇ ಏತ ನೀರಾವರಿ ಸಾಧ್ಯವಾಗಿದ್ದು, ಇನ್ನೂ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು. ಅವರು ಕಾಂಗ್ರೆಸ್ ಪಕ್ಷಕ್ಕೆ ಹೋಗುವುದು ಸುಳ್ಳು, ಮನಸಿನಲ್ಲಿರಲಿ ಕನಸಿನಲ್ಲೂ ಯೋಚಿಸುವುದಿಲ್ಲ, ಕಾಂಗ್ರೆಸ್ ಸಮಾಜ ಒಡೆಯುವ ಪಕ್ಷವಾಗಿದ್ದು ಯಾರೂ ಆ ಪಕ್ಷವನ್ನು ನಂಬುವುದಿಲ್ಲ ಎಂದು ಟೀಕಿಸಿದರು.


*ಸಿಲ್ಕ್ ಮಿಲ್ಕ್ ಮತ್ತು ಮೇಕೆದಾಟುವಿಗೆ ಸಿ ಪು ಮತ್ತು ಧರಣೀಶ್ ಮನವಿ*


ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ ಯವರು ಮೇಕೆದಾಟು ಯೋಜನೆ, ವಿದ್ಯುತ್ ಯೋಜನೆ, ಭೂರಹಿತರಿಗಾಗಿ ತಾಲ್ಲೂಕು ಮಂಜೂರಾತಿ ಸಮಿತಿ ರಚನೆ, ರೇಷ್ಮೆ ಬೆಳೆ ಇಳುವರಿ, ಮಾರುಕಟ್ಟೆ ಅವ್ಯವಸ್ಥೆ, ರೆಂಡಿಲಾ, ಷೀಟ್ ರೀಲಿಂಗ್ ಘಟಕ ಸ್ಥಾಪನೆ, ಮಾವು ಎಳನೀರು ಸಂಸ್ಕರಣಾ ಘಟಕ ಸ್ಥಾಪನೆ ಮತ್ತು ರಫ್ತು ಉತ್ತೇಜನ, ವನ್ಯಜೀವಿಗಳ ಹಾವಳಿ, ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (RCEP) ಒಪ್ಪಂದ ಕೈಬಿಟ್ಟು ದೇಶೀಯ ಹೈನೋದ್ಯಮಕ್ಕೆ ಒತ್ತು ನೀಡಲು ಪ್ರಧಾನ ಮಂತ್ರಿ ಗಳಿಗೆ ಒತ್ತಾಯಿಸಬೇಕೆಂದು ಸಚಿವರಿಗೆ ಮನವಿ ನೀಡಿ ವಿವರಿಸಿದರು. ಇದೇ ವೇಳೆ ಮುಖಂಡ ರಾಂಪುರ ಧರಣೀಶ್ ರವರು ಎಲೆಕೇರಿ ರೈಲ್ವೆ ಮೇಲ್ಸೇತುವೆ ಪೂರ್ಣಗೊಳಿಸಲು ಮನವಿ‌ ನೀಡಿ ಸಚಿವರ ಗಮನ ಸೆಳೆದರು.


*ಆಲೆ ಮರ ಬಹು ಬೇಡಿಕೆಯ ಮರ ಭೂಪತಿ*


ಚನ್ನಪಟ್ಟಣ ಕ್ರಾಪ್ಟ್ ಪಾಕ್೯ ನ ಕಾರ್ಯದರ್ಶಿ ಭೂಪತಿ ಮಾತನಾಡಿ ಬೊಂಬೆಗಳ ತಯಾರಿಕೆಯಲ್ಲಿ ಆಲೆ ಮರ ಬಹು ಬೇಡಿಕೆಯ ಮರವಾಗಿದ್ದು‌ ರೈತರು ಬೆಳೆಯಲು ಪ್ರೊತ್ಸಾಹ ಮತ್ತು ಉತ್ತೇಜನ ನೀಡಬೇಕು, ೫,೦೦೦ ಕುಟುಂಬಗಳು ತಯಾರಿಕೆಯಲ್ಲಿ ತೊಡಗಿದ್ದು ಅವರಿಗೆ ಸವಲತ್ತುಗಳನ್ನು ನೀಡಬೇಕು, ಜಿ ಎಸ್ ಟಿ‌ ತುಟ್ಟಿಯಾಗಿದ್ದು ಕಡಿಮೆಯಾಗಬೇಕು ಎಂದು ಮನವಿ ಮಾಡಿದರು.


*ತರಬೇತಿ ಮತ್ತು ಪ್ರೋತ್ಸಾಹ*


ಬಾಳೆ ನಾರು, ತೆಂಗಿನ ನಾರು, ಕಬ್ಬು, ಬಿದಿರು ಸೇರಿದಂತೆ ಇನ್ನೂ ಅನೇಕ ಬಿಸಾಡುವ ಪದಾರ್ಥಗಳಿಂದ ಮಾಡಲು ಉತ್ತೇಜನ ನೀಡಲು ತಯಾರಿ ನಡೆದಿದೆ. ಯಾವುದೇ ವರ್ಗದ ವಿದ್ಯಾವಂತ ಮತ್ತು ಅವಿದ್ಯಾವಂತ ಯುವಕ ಯುವತಿಯರಿಗೆ ತರಬೇತಿ ನೀಡುತ್ತೇವೆ, ತರಬೇತಿ ವೇಳೆ ದಿನಭತ್ಯೆ ಯನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದರು.


ವಿಧಾನ ಪರಿಷತ್ ಸದಸ್ಯ ಅ ದೇವೇಗೌಡ ಮತ್ತು ಪಕ್ಷದ ಮುಖಂಡರಾದ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಸಿ ಪಿ ರಾಜೇಶ್, ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಶ್, ಹುಲುವಾಡಿ ದೇವರಾಜ, ಆನಂದಸ್ವಾಮಿ, ಜಯರಾಮು, ಆರ್ ಎನ್ ಮಲವೇಗೌಡ ಉಪಸ್ಥಿತರಿದ್ದರು.


ಅಧಿಕಾರಿಗಳಾದ ಉಪ ವಿಭಾಗಾಧಿಕಾರಿ ಡಾ ದಾಕ್ಷಾಯಿಣಿ,  ತಹಶಿಲ್ದಾರ್ ಸುದರ್ಶನ್, ಡಿವೈಎಸ್ಪಿ ರಾಮರಾಜನ್,  ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಚಂದ್ರು, ನಗರ ಸಭೆಯ ಆಯುಕ್ತ ಶಿವನಾಂಕರೇಗೌಡ, ಕೈಗಾರಿಕಾ ತರಬೇತಿ ಸಹಾಯಕ ನಿರ್ದೇಶಕ ಪ್ರಕಾಶ್,  ಅರಣ್ಯ ಇಲಾಖೆಯ ಮನ್ಸೂರ್, ಜಿ ಪ ಇ ಇ, ಎಇಇ ಚನ್ನಪ್ಪ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ :9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑