Tel: 7676775624 | Mail: info@yellowandred.in

Language: EN KAN

    Follow us :


ಶೆಟ್ಟಿಹಳ್ಳಿ ಕೆರೆ ಯಾವ ಇಲಾಖೆ ಗೆ ಸೇರಿದ್ದು ? ಬಗೆಹರಿಯದ ಗೊಂದಲ ! ಲೋಕಾಯುಕ್ತ ಬೇಸರ

Posted date: 04 Nov, 2019

Powered by:     Yellow and Red

ಶೆಟ್ಟಿಹಳ್ಳಿ ಕೆರೆ ಯಾವ ಇಲಾಖೆ ಗೆ ಸೇರಿದ್ದು ? ಬಗೆಹರಿಯದ ಗೊಂದಲ ! ಲೋಕಾಯುಕ್ತ ಬೇಸರ

ಚನ್ನಪಟ್ಟಣ: ಶೆಟ್ಟಿಹಳ್ಳಿ ಕೆರೆಯ ಒತ್ತುವರಿಗೆ ಸಂಬಂಧಿಸಿದಂತೆ ಅರ್ಜಿದಾರರ ದೂರಿನ ಮೇರೆಗೆ ದೂರು ದಾಖಲಿಸಿಕೊಂಡು ಸರ್ವೇ ಮಾಡಿಸಲು ಸೂಚನೆ ನೀಡಿದ್ದು ಪರಿಶೀಲಿಸಲು ಇಂದು ಲೋಕಾಯುಕ್ತ ಡಿವೈಎಸ್ಪಿ ಗೌತಮ್ ಮತ್ತು ತಂಡ ತಾಲ್ಲೂಕು ಕಛೇರಿಯಲ್ಲಿ ದೂರುದಾರರ ಸಮ್ಮುಖದಲ್ಲಿ ಅಧಿಕಾರಿಗಳ ಸಭೆ ನಡೆಸಿದರು.


ಈ ಮೊದಲು ನಮ್ಮ ವ್ಯಾಪ್ತಿಗೆ ಬರುತ್ತದೆ ಎಂದು ಒಪ್ಪಿಕೊಂಡಿದ್ದ ಜಿಲ್ಲಾ ಪಂಚಾಯತಿ ಯ ಎಇಇ ಚನ್ನಪ್ಪ ರವರು ಈ ಕೆರೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ನಮ್ಮ ಇಲಾಖೆಯಲ್ಲಿ ಯಾವ ದಾಖಲೆಗಳು ಇಲ್ಲಾ ಎಂದು ನುಣುಚಿಕೊಳ್ಳಲು ಯತ್ನಿಸಿದರೇ ನಗರಸಭೆಯ ಪೌರಾಯುಕ್ತ ಶಿವಾಂಕರಿಗೌಡ ನಮ್ಮ ಇಲಾಖೆಗೆ ಯಾವುದೇ ಇಲಾಖೆಯಿಂದ ಶೆಟ್ಟಿಹಳ್ಳಿ ಕೆರೆ ಹಸ್ತಾಂತರ ಆಗಿಲ್ಲ ಎಂದರು.


ಈ ನಡುವೆ ಸರ್ವೇ ಇಲಾಖೆಯ ಅಧಿಕಾರಿ ನಾಗರಾಜು ಮಾತನಾಡಿ ನಮ್ಮ ಇಲಾಖೆಯಿಂದ ಲೋಕಾಯುಕ್ತ ಆದೇಶದಂತೆ ಸರ್ವೇ ಮಾಡಿ ಬಣ್ಣದ ಗುರುತು ಮಾಡಿದ್ದೇವೆ, ಒಟ್ಟು ೨೦ ಎಕರೆ ೧೪ ಗುಂಟೆ ಇದ್ದು ೦೧ ಎಕರೆ ೨೮ ಗುಂಟೆ ಒತ್ತುವರಿಯಾಗಿದೆ. ರಸ್ತೆಯ ವಿಸ್ತೀರ್ಣ ೨೬ ಗುಂಟೆಯಿದ್ದು ಹಾಲಿ ೧೮ ಎಕರೆ ಇದೆ ಎಂದು ವರದಿ ಸಲ್ಲಿಸಿದರು.


ಇದಕ್ಕೆ ಬೇಸರ ವ್ಯಕ್ತಪಡಿಸಿದ ಲೋಕಾಯುಕ್ತ ಡಿವೈಎಸ್ಪಿ ಗೌತಮ್ ರವರು ಇನ್ನು ಐದು ದಿನಗಳ ಕಾಲ ಕೊನೆಯ ಅವಕಾಶ ನೀಡುತ್ತಿದ್ದು ನಗರಸಭೆ ಮತ್ತು ಜಿಲ್ಲಾ ಪಂಚಾಯತಿ ಉಪವಿಭಾಗ ಇಬ್ಬರೂ ಸೇರಿ ಜಂಟಿ ಸರ್ವೇ ಮಾಡಿ ಒತ್ತುವರಿ ತೆರವುಮಾಡಿಕೊಡಿ, ಇಲ್ಲವಾದರೆ ನಾನು ಮೇಲ್ಮನವಿ ಸಲ್ಲಿಸುತ್ತೇನೆ ಎಂದರು.


ಸಭೆಯಲ್ಲಿ ಲೋಕಾಯುಕ್ತ ಇನ್ಸ್ಪೆಕ್ಟರ್ ತನ್ವೀರ್, ಸಿಬ್ಬಂದಿಗಳಾದ ಜನಾರ್ಧನ್, ಗಂಗಮ್ಮ, ನಗರಸಭೆಯ ಅಧಿಕಾರಿಗಳಾದ ಲತಾ ಮತ್ತು ಸಿಬ್ಬಂದಿ ಹಾಗೂ ದೂರುದಾರರಾದ ವಕೀಲ ಸುರೇಶ್ ಮತ್ತು ಗಜೇಂದ್ರ ಸಿಂಗ್ ಭಾಗವಹಿಸಿದ್ದರು.


*ಏಳು ದಿನಗಳೊಳಗಾಗಿ ಜಂಟಿ ಸರ್ವೇ ಮಾಡಿಸಿ ಒತ್ತುವರಿದಾರರಿಗೆ ನಗರಸಭೆ ವತಿಯಿಂದ ನೋಟೀಸ್ ಜಾರಿ ಮಾಡುವಂತೆ ಸೂಚಿಸಲಾಗಿದೆ.*

*ಸುದರ್ಶನ್ ತಹಶಿಲ್ದಾರ್.*


*ನಾಳೆಯಿಂದ ಜಂಟಿ ಸರ್ವೇ ಮಾಡಲು ಜಿಲ್ಲಾ ಪಂಚಾಯತಿ ಅಧಿಕಾರಿಗಳು ಒಪ್ಪಿಕೊಂಡಿದ್ದು ಒತ್ತುವರಿದಾರರಿಗೆ ದಾಖಲೆ ಕೇಳಿ ನೋಟೀಸ್ ನೀಡಲು ನಿರ್ಧರಿಸಿದ್ದೇವೆ.*

*ಶಿವನಾಂಕರಿಗೌಡ ಪೌರಾಯುಕ್ತ.*


ಗೋ ರಾ ಶ್ರೀನಿವಾಸ...

ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑