Tel: 7676775624 | Mail: info@yellowandred.in

Language: EN KAN

    Follow us :


ಇಪ್ಪತ್ತಾರು ಮಂದಿಯಿಂದ ಶೆಟ್ಟಿಹಳ್ಳಿ ಕೆರೆ ಒತ್ತುವರಿ ನೋಟೀಸ್ ಜಾರಿ

Posted date: 07 Nov, 2019

Powered by:     Yellow and Red

ಇಪ್ಪತ್ತಾರು ಮಂದಿಯಿಂದ ಶೆಟ್ಟಿಹಳ್ಳಿ ಕೆರೆ ಒತ್ತುವರಿ ನೋಟೀಸ್ ಜಾರಿ

ಚನ್ನಪಟ್ಟಣ: ನಗರದ ಶೆಟ್ಟಿಹಳ್ಳಿ ಕೆರೆಯ ಒತ್ತುವರಿ ಸರ್ವೇ ಕಾರ್ಯವು ಜಿಲ್ಲಾ ಪಂಚಾಯತಿ ಮತ್ತು ನಗರಸಭೆ ಅಧಿಕಾರಿಗಳ ಸಹಭಾಗಿತ್ವದಲ್ಲಿ ಜಂಟಿಯಾಗಿ ನಡೆಯಿತು. ಈಗಾಗಲೇ ಸರ್ವೇ ನಡೆದು ಗುರುತು ಮಾಡಿದ್ದರೂ ಸಹ ತಾಲ್ಲೂಕು ಆಡಳಿತ, ನಗರಸಭೆ, ಜಿಲ್ಲಾ ಪಂಚಾಯತಿ ಹಾಗೂ ದೂರುದಾರರ ಸಮಕ್ಷಮದಲ್ಲಿ ಸರ್ವೇ ಮಾಡಿಸಿ ಒತ್ತುವರಿ ಮಾಡಿಕೊಂಡಿರುವ ಒಟ್ಟು ಇಪ್ಪತ್ತಾರು ಮಂದಿಗೆ ನೋಟೀಸ್ ನೀಡಲು ತೀರ್ಮಾನಿಸಲಾಗಿದೆ.


ಸತತ ಎರಡು ಗಂಟೆಗಳಿಗೂ ಹೆಚ್ಚು ಕಾಲ ಎಲ್ಲಾ ಅಧಿಕಾರಿಗಳು ಸೇರಿ ಸರ್ವೇ ಕೆಲಸದಲ್ಲಿ ಭಾಗವಹಿಸಿ ಕೆರೆ ಒತ್ತುವರಿ ಮಾಡಿ ಮನೆ ಕಟ್ಟಿಕೊಂಡಿರುವವರಿಗೆ ಶೀಘ್ರವಾಗಿ ತಮ್ಮ ಮನೆಯ ದಾಖಲೆಗಳನ್ನು ಒದಗಿಸುವಂತೆ ಹಾಗೂ ನೋಟೀಸ್ ಗೆ ಉತ್ತರಿಸುವಂತೆ ಸೂಚಿಸಿದರು.


ಸರ್ವೇ ನಂಬರ್ ೧೩ ರಲ್ಲಿರುವ ಶೆಟ್ಟಿಹಳ್ಳಿ ಕೆರೆಯು ಒಟ್ಟು ಒಟ್ಟು ೨೦ ಎಕರೆ ೧೪ ಗುಂಟೆ ಇದ್ದು ೦೧ ಎಕರೆ ೨೮ ಗುಂಟೆ ಒತ್ತುವರಿಯಾಗಿದೆ. ರಸ್ತೆಯ ವಿಸ್ತೀರ್ಣ ೨೬ ಗುಂಟೆಯಿದ್ದು ಹಾಲಿ ೧೮ ಎಕರೆ ಮಾತ್ರ ಉಳಿದಿದ್ದು ಸಾಮಾಜಿಕ ಕಾರ್ಯಕರ್ತರಾದ ವಕೀಲ ಸುರೇಶ್ ಮತ್ತು ಗಜೇಂದ್ರ ಸಿಂಗ್ ರವರು ದಾಖಲೆಗಳ ಸಮೇತ ಬಹುತೇಕ ಇಲಾಖೆಗಳಿಗೆ ದೂರು ಸಲ್ಲಿಸಿದರು. ಲೋಕಾಯುಕ್ತ ಅಧಿಕಾರಿಗಳು ಆಸ್ಥೆ ವಹಿಸಿದ ಕಾರಣ ತಾಲ್ಲೂಕು ಅಧಿಕಾರಿಗಳು ಇಂದು ಸಂಪೂರ್ಣ ಸರ್ವೇ ಮಾಡಿ ಗುರುತಿಸಿ ನೋಟೀಸ್ ನೀಡಲು ತಯಾರಿ ನಡೆಸಿದ್ದಾರೆ.


*ಇದು ಶೆಟ್ಟಿಹಳ್ಳಿ ಕೆರೆಯಲ್ಲ ? ಮಂಗಳವಾರಪೇಟೆ ಕೆರೆ ?*


*ನಮ್ಮ ಇಲಾಖೆಗೆ ಬರುವುದೇ ಇಲ್ಲ ಎಂದು ವಾದ ಮಾಡುತ್ತಿದ್ದ ಜಿಲ್ಲಾ ಪಂಚಾಯತಿ ಎಇಇ ಚನ್ನಪ್ಪ ರವರು ನಮ್ಮ ಇಲಾಖೆಗೆ ಬರುತ್ತದೆ ಎಂದು ಒಪ್ಪಿಕೊಂಡರಲ್ಲದೆ ಇದು ಆಡು ಮಾತಿನಲ್ಲಿ ಶೆಟ್ಟಿಹಳ್ಳಿ ಕೆರೆ ಎಂದು ದಾಖಲೆಗಳಲ್ಲಿ ಮಂಗಳವಾರಪೇಟೆ ಕೆರೆ ಎಂದು ಇದೆ. ಹಾಗಾಗಿ ನಮಗೆ ಗೊಂದಲವಿತ್ತು ಎಂದರು.*


*ಸರ್ವೇ ಕಾರ್ಯ ಮುಗಿದಿದ್ದು ಒತ್ತುವರಿದಾರರಿಗೆ ನೋಟೀಸ್ ನೀಡಲಾಗುವುದು. ನೋಟೀಸ್ ಗೆ ಉತ್ತರಿಸಿದ ನಂತರ ಚರ್ಚಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು.*

*ಸುದರ್ಶನ್ ತಹಶಿಲ್ದಾರ್.*


*ಒತ್ತುವರಿದಾರರಿಗೆ ದಾಖಲೆಗಳನ್ನು ಸಲ್ಲಿಸುವಂತೆ ಶೀಘ್ರವಾಗಿ ನೋಟೀಸ್ ಜಾರಿ ಮಾಡಲಾಗುವುದು. ಒದಗಿಸಿದ ದಾಖಲೆಗಳನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ.*

*ಶಿವನಾಂಕರಿಗೌಡ. ಪೌರಾಯುಕ್ತ.*


*ನಮ್ಮ ಹೋರಾಟಕ್ಕೆ ಜಯ ದೊರಕುವ ಸಾಧ್ಯತೆ ಅಗಾಧವಾಗಿದ್ದು ಅಧಿಕಾರಿಗಳು ಸಾಮಾಜಿಕ ನ್ಯಾಯ ಒದಗಿಸಿಕೊಡುವ ವಿಶ್ವಾಸವಿದೆ. ಶೆಟ್ಟಿಹಳ್ಳಿ ಕೆರೆ ಅಷ್ಟೇ ಅಲ್ಲದೇ ಜಿಲ್ಲಾದ್ಯಂತ ಒತ್ತುವರಿ ಆಗಿರುವ ಸರ್ಕಾರದ ಎಲ್ಲಾ ಜಾಗದ ವಿರುದ್ಧ ಹೋರಾಡಲು ನಾವು ಬದ್ದರಾಗಿದ್ದೇವೆ.*

*ಸುರೇಶ್ ಮತ್ತು ಗಜೇಂದ್ರ ಸಿಂಗ್.*


*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑