Tel: 7676775624 | Mail: info@yellowandred.in

Language: EN KAN

    Follow us :


ಅಯೋಧ್ಯಾ ಐತಿಹಾಸಿಕ ತೀರ್ಪು (೯/೧೧) ನೀಡಿದ ಸುಪ್ರೀಂ, ದೇಶಾದ್ಯಂತ ಕಟ್ಟೆಚ್ಚರ. ಶಾಂತಿಯುತ ಸಂಭ್ರಮ

Posted date: 09 Nov, 2019

Powered by:     Yellow and Red

ಅಯೋಧ್ಯಾ ಐತಿಹಾಸಿಕ ತೀರ್ಪು (೯/೧೧) ನೀಡಿದ ಸುಪ್ರೀಂ, ದೇಶಾದ್ಯಂತ ಕಟ್ಟೆಚ್ಚರ. ಶಾಂತಿಯುತ ಸಂಭ್ರಮ

ರಾಮನಗರ (ದೆಹಲಿ):  ೧೫೦ ವರ್ಷಗಳಿಗೂ ಹೆಚ್ಚು ಕಾಲ ವಿವಾದವಿದ್ದು ೧೯೮೦ ರ ಬಳಿಕ ದೇಶದ ರಾಜಕೀಯ ಬೆಳವಣಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದು ೧೯೯೨ ರ ಡಿಸೆಂಬರ್ ನಲ್ಲಿ ರಾಮಮಂದಿರ ನಿರ್ಮಾಣವಾಗಬೇಕೆಂದು ಹಿಂದೂ ಕಾರ್ಯಕರ್ತರಿಂದ ಬಾಬರಿ ಮಸ್ಜಿದ್ ಧ್ವಂಸ ನಂತರ ನಡೆದ ನಿರಂತರ ವ್ಯಾಜ್ಯಗಳಲ್ಲದೆ ಕಳೆದ ನಲವತ್ತು ದಿನಗಳಿಂದ ಸತತ ವಿಚಾರಣೆ ನಡೆದು ಕಳೆದ ಅಕ್ಟೋಬರ್ ನಲ್ಲಿ ತೀರ್ಪನ್ನು ಕಾಯ್ದಿರಿಸಿ ಐಕ್ಯತೆ ಸಾರುವಂತಹ ಎರಡೂ ಸಮುದಾಯಕ್ಕೆ ಒಪ್ಪಿಗೆಯಾಗುವಂತಹ ಪುರಾಣ, ಇತಿಹಾಸ ಎರಡನ್ನೂ ಗಣನೆಗೆ ತೆಗೆದುಕೊಂಡು ಈರ್ವರೂ ಸಂತಸಕೊಳ್ಳುವಂತಹ ಐತಿಹಾಸಿಕ ತೀರ್ಪನ್ನು ಇಂದು ಬೆಳಿಗ್ಗೆ ೧೦:೩೦ ಕ್ಕೆ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ ಗಳಾದ ರಂಜನ್ ಗೊಗೊಯಿ ಮತ್ತು ತಂಡದ ಐವರು ನ್ಯಾಯಾಧೀಶರು ನೀಡಿದರು.


ಇದೇ ತಿಂಗಳ ೧೭ ನೇ ತಾರೀಖಿನಂದು ನಿವೃತ್ತರಾಗಲಿರುವ ಮುಖ್ಯ ನ್ಯಾಯಾಧೀಶರಾದ ರಂಜನ್ ಗೊಗೊಯಿ ರವರ ಈ ಐತಿಹಾಸಿಕ ತೀರ್ಪು ಸರ್ವರಿಗೂ ಸಂತಸ ತಂದಿದ್ದು ಎಲ್ಲಾ ರೀತಿಯಿಂದಲೂ ಸಂಭ್ರಮಾಚರಣೆಗಳಿಗೆ ನಿಷೇಧ ಹೇರಿ ಕಟ್ಟೆಚ್ಚರ ವಹಿಸಿರುವುದರಿಂದ ಸಾರ್ವಜನಿಕರು ಸಹ ಅಂತಹ ಯಾವುದೇ ಕಾರ್ಯಕ್ಕೂ ಕೈ ಹಾಕದೆ ಇರುವುದು ಜನಸಾಮಾನ್ಯರ ಜ್ಞಾನಕ್ಕೆ ಹಿಡಿದ ಕನ್ನಡಿಯಾಗಿದೆ.


೨.೭೭ ಎಕರೆ ಸಂಪೂರ್ಣ ಜಾಗವನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರ ಮಾಡಬೇಕು, ಸುನ್ನಿ ವಕ್ಫ್ ಮಂಡಳಿಗೆ ಪರ್ಯಾಯ ೦೫ ಎಕರೆ ಜಾಗ ನೀಡಬೇಕು, ರಾಮಲಲ್ಲಾ ರವರಿಗೆ ಮಂದಿರ ಜಾಗ ನೀಡಬೇಕು, ರಾಮಮಂದಿರ ನಿರ್ಮಾಣ ಸರ್ಕಾರದ ಹೊಣೆ, ೦೩ ತಿಂಗಳೊಳಗೆ ದೇವಾಲಯದ ಸಮಿತಿ ರಚನೆ ಮಾಡಬೇಕು ಎಂದು ಐತಿಹಾಸಿಕ ತೀರ್ಪು ನೀಡಲಾಗಿದೆ.


*ಬೆಂಗಳೂರು ವರದಿ*


ಬೆಂಗಳೂರಿನ ಸೂಕ್ಷ್ಮ ಪ್ರದೇಶಗಳು ಸೇರಿದಂತೆ ಬಹುಭಾಗದಲ್ಲಿ ಪೋಲಿಸರನ್ನು ನಿಯೋಜಿಸಿದ್ದು ಯಾವ ಸಮುದಾಯದವರು ಪರ ವಿರೋಧ ಮತ್ತು ಸಂಭ್ರಮಾಚರಣೆಯಲ್ಲಿ ತೊಡಗದಂತೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವಿಜೃಂಭಣೆ ಮತ್ತು ವಿಕೃತಿ ಮೆರೆಯದಂತೆ ಎಚ್ಚರಿಕೆ ನೀಡಲಾಗಿದ್ದು ರೌಡಿಗಳನ್ನು ವಶಕ್ಕೆ ಪಡೆಯಲಾಗಿದೆ.


*ರಾಮನಗರ ವರದಿ*

ನಾಳೆ (೧೦/೧೧/ಭಾನುವಾರ) ಈದ್ ಮಿಲಾದ್ ಹಬ್ಬ ಆಚರಣೆ ಹಾಗೂ ಇಂದಿನ ತೀರ್ಪು ಇದ್ದಿದ್ದರಿಂದ ಸೂಕ್ಷ್ಮ ಪ್ರದೇಶವೆಂದೇ ಗುರುತಿಸಿಕೊಂಡಿರುವ ರಾಮನಗರ ಜಿಲ್ಲೆಯಲ್ಲಿ ಹೆಚ್ಚು ಪೋಲಿಸರನ್ನು ನಿಯೋಜಿಸಿ ಕಟ್ಟೆಚ್ಚರ ವಹಿಸಿರುವುದಲ್ಲದೆ ಇಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಇಂದಿನಿಂದ ಸೋಮವಾರ ದ ತನಕ ಮದ್ಯದ ಅಂಗಡಿಗಳನ್ನು ತೆರೆಯದಂತೆ ಆದೇಶಿಸಲಾಗಿದೆ.


*ಚನ್ನಪಟ್ಟಣ ದ ವರದಿ*

ನಗರದ ಷೇರು ಹೋಟೆಲ್, ಸಾತನೂರು ವೃತ್ತ, ಮದಿನಾ ಚೌಕ ಸೇರಿದಂತೆ ಹಲವಾರು ಕಡೆ ಮೀಸಲು ಪಡೆ ಪೋಲಿಸರು ಮತ್ತು ರಾಜ್ಯ ಪೋಲೀಸರನ್ನು ನಿಯೋಜಿಸಿದ್ದು ಕಟ್ಟೆಚ್ಚರ ವಹಿಸಿದ್ದಾರೆ. ತೀರ್ಪಿನ ನಂತರವೂ ಎಲ್ಲೂ ಸಹ ಪರವಿರೋಧ ವಾಗಲಿ, ಸಂಭ್ರಮಾಚರಣೆಗಳಾಗಲಿ ನಡೆದ ಉದಾಹರಣೆ ಗಳು ವರದಿಯಾಗಿಲ್ಲ.

ಹಿಂದೂ ಮುಸ್ಲಿಮರು ಸಾಮರಸ್ಯದಿಂದ ಇರುವುದನ್ನು ಇದು ತೋರಿಸುತ್ತದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑