Tel: 7676775624 | Mail: info@yellowandred.in

Language: EN KAN

    Follow us :


ನವಂಬರ್ 15 ಬುಡಕಟ್ಟು ವನವಾಸಿ ನಾಯಕ ಬಿರ್ಸಾ ಮುಂಡಾ ಜಯಂತಿ ಹಾಗೂ ರಾಷ್ಟ್ರೀಯ ಗಿರಿಜನ ದಿನೋತ್ಸವ.

Posted date: 14 Nov, 2019

Powered by:     Yellow and Red

ನವಂಬರ್ 15 ಬುಡಕಟ್ಟು ವನವಾಸಿ ನಾಯಕ ಬಿರ್ಸಾ ಮುಂಡಾ ಜಯಂತಿ ಹಾಗೂ ರಾಷ್ಟ್ರೀಯ ಗಿರಿಜನ ದಿನೋತ್ಸವ.

ತನ್ನ ಯವ್ವನದ ವಯಸ್ಸಿನಲ್ಲಿಯೇ ಬಿರ್ಸಾ ಮುಂಡಾ  ತನ್ನ ಜನಾಂಗವಾದ ವನವಾಸಿಗಳ ಪರ ನಿಲ್ಲಲು ಕಾರಣ ಬ್ರಿಟೀಷ್ ವಸಾಹತುಸಾಹಿ ಆಡಳಿತದ ವಿರುದ್ಧ ಜೊತೆಗೆ ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದ  ತಮ್ಮ ಭೂಮಿ ತಮ್ಮ ಹಕ್ಕುಗಳನ್ನು ಕಸಿದುಕೊಂಡ ತನ್ನ ಜನರ ಪರ ಅಂತಿಮವಾಗಿ ಹೋರಾಟದ ಕಣಕ್ಕೆ ಇಳಿದ ಬಿರ್ಸಾ ಹೋರಾಟ ಅಜರಾಮರ. ಬಿಹಾರ ಮತ್ತು ಜಾರ್ಖಂಡ್ ಪ್ರಾಂತ್ಯ 19 ನೇ ಶತಮಾನದ ಆರಂಭದಲ್ಲಿ  ವಸಾಹತುಶಾಹಿ ಆಗಿತ್ತು  ಬ್ರಿಟಿಷ್ ಸರ್ಕಾರ ತನ್ನ ಅಮಾನವೀಯ ಕಾನೂನುಗಳ ಮೂಲಕ ವನವಾಸಿಗಳ ಭೂಮಿಯ ಹಕ್ಕನ್ನು ಕಸಿದುಕೊಂಡಿತು, ಇಂಡಿಗೋ ಪ್ಲಾಂಟೇಷನ್ ಹಾಗೂ ಕೈಗಾರಿಕೆಗಳಲ್ಲಿ ದುಡಿಯುತ್ತಿದ್ದ ವನವಾಸಿ  ಕಾರ್ಮಿಕರನ್ನು ಕೀಳಾಗಿ ಜೀತದಾಳುಗಳಂತೆ ಯುರೋಪಿನ್ನರು ನಡೆಸಿಕೊಳ್ಳುತ್ತಿದ್ದರು ಜೊತೆಗೆ ವನವಾಸಿಗಳ ಕಿತ್ತು ತಿನ್ನವ ಬಡತನ ಬಹಳ ನಿಕೃಷ್ಟ ಪರಿಸ್ಥಿತಿಗೆ ತಳ್ಳಿತ್ತು. 'ದರ್ಥಿ ಅಬ್ಬಾ' ಅಥವಾ ಭೂಮಿಯೇ ತಂದೆ, ಎಂಬ ಘೋಷಣೆಯನ್ನು ಬಿರ್ಸಾ ತನ್ನ ಜನರಲ್ಲಿ ತುಂಬಿದರು ಮತ್ತು ಬ್ರಿಟಿಷ್ ಹಾಗೂ ಯುರೋಪಿಯನ್ನರ ವಿರುದ್ಧ ತನ್ನ ಹೋರಟ ರೂಪಿಸಿದರು. ತನ್ನ ಜನರಿಗೆ ನೀವು ಯಾರೇ ನಿಮ್ಮ ಮೇಲೆ ಪ್ರಭಾವ ಬೀರಿದರು ನಮ್ಮ ಧರ್ಮ ಸಂಸ್ಕೃತಿ ಬಿಡಬೇಡಿ ಮರೆಯಬೇಡಿ ಅವು ನಮ್ಮ ಸಾಂಸ್ಕೃತಿಕ ಬೇರುಗಳು ಎಂದು ತನ್ನ ಜನರಿಗೆ ತಿಳಿಸಿದರು. ಜೊತೆಗೆ ಭೂಮಿಯು ಹೃದಯ ಮತ್ತು ಅದನ್ನು ಉಳಿಸಿಕೊಳ್ಳುವುದು ನಮ್ಮ ಹಕ್ಕು ಎಂದರು.


 *ವನವಾಸಿಗಳ ಪ್ರಕಾರ ಬಿರ್ಸಾ ಮುಂಡಾ ವನವಾಸಿಗಳ ಪ್ರವಾದಿ*


ಒಬ್ಬ ಸನ್ಯಾಸಿ ಬಳಿಯಲ್ಲಿ ಬಿರ್ಸಾ ದೀಕ್ಷೆ ಪಡೆದು  ಹಿಂದೂ ಧಾರ್ಮಿಕ ಬೋಧನೆಗಳು ಮತ್ತು  ಅದರ ಸಾರದ ಬಗ್ಗೆ ಅಧ್ಯಯನ ಮಾಡಿ ಪುರಾಣ ಗ್ರಂಥಗಳ ಜೊತೆಗೆ ರಾಮಾಯಣ ಮತ್ತು ಮಹಾಭಾರತ ಅಧ್ಯಾಯನ ಮಾಡಿದರು. ಅವರು ಮಧ್ಯಪಾನ ಮತ್ತು ಧೂಮಪಾನವನ್ನು ವೀರೋಧಿಸಿದರು ಇದರಿಂದ ಸಂಪೂರ್ಣ ಹೊರಬರಬೇಕೆಂದು ವನವಾಸಿಗಳಿಗೆ ಕರೆಕೊಟ್ಟರು.

 ಸಮಾಜ ಸುಧಾರಣೆಗೆ ಬುಡಕಟ್ಟು ಸಮಾಜದವರು ವಾಮಾಚಾರ ಮತ್ತು ಮೂಡನಂಬಿಕೆ ಇತರೆ ವಿಷಯಗಳಿಂದ ದೂರವಿರಬೇಕು ಎಂದು ಒತ್ತಾಯಿಸಿದರು, ಅಂದಿನ ಯುರೋಪಿನ  ಕ್ರಿಶ್ಚಿಯನ್ ಮಿಷನರಿಗಳು ತಮ್ಮ ಮಿಷನರಿ ಶಾಲೆಗಳಲ್ಲಿ ಬಿರ್ಸಿಯನ್ ಎಂಬ ಹೆಸರಿನಲ್ಲಿ ಕ್ರಿಶ್ಚಿಯನ್ ಸಮೂದಾಯವನ್ನು ಹುಟ್ಟು ಹಾಕಿತ್ತು ಇದನ್ನು ಬಿರ್ಸಾ ವಿರೋಧಿಸಿದರು.


ಬಿರ್ಸಾ ಆರಂಭಿಸಿದ ಚಳುವಳಿ  'ಉಲ್ಗೂನ್', ಅಂದರೆ 'ಮಹಾನ್ ಗೊಂದಲಮಯ'. ಬ್ರಿಟಿಷ್  ವಿರುದ್ಧ ಹೋರಾಟಕ್ಕೆ ಕಾರಣ ಬ್ರಿಟಿಷ್ ಸರ್ಕಾರ ವನವಾಸಿಗಳ ವಿರುದ್ದದ ಷಡ್ಯಂತ್ರ ಶೋಷಣೆ ಮತ್ತು ತಾರತಮ್ಯ ವಿರುದ್ಧ ಎಂದು ಬಿರ್ಸಾ ಘೋಸಿಸಿದರು  ಬ್ರಿಟಿಷ್ ಸರ್ಕಾರ  ಚೋಟನಾಗ್ಪುರ್  ಪ್ರದೇಶದಲ್ಲಿ   ಭೂ ಕಾಯಿದೆ ಪ್ರಕಾರ ವನವಾಸಿಗಳನ್ನು ಅಲ್ಲಿಂದ ಒಕ್ಕಲೆಬ್ಬಿಸಿತು ಇದರಿಂದ ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ತಾಳ್ಮೆಯ ಕಟ್ಟಿ ಒಡೆಯಿತು. ಅವರು ವನವಾಸಿಗಳ ಒಂದು ಗೆರಿಲ್ಲಾ ಸೈನಿಕರ ಗುಂಪನ್ನು ಕಟ್ಟಿ ಬ್ರಿಟಿಷ್ ವಿರುದ್ಧ ಉಗ್ರ ಹೋರಾಟ ಪ್ರಾರಂಭ ಮಾಡಿದರು. ಬಿರ್ಸಾ ಅವರನ್ನು  ಜೂನ್ 9, 1900ರಂದು ಬಂಧಿಸಲಾಯಿತು ಉತ್ತರ ಭಾರತದ ಅನೇಕ ಭಾಷೆಗಳ ಜನಪದ ಹಾಡುಗಳಲ್ಲಿ ಅದರಲ್ಲೂ ವನವಾಸಿಗಳ ಜನಪದ ಹಾಡುಗಳಲ್ಲಿ ಬಿರ್ಸಾ ಅವರು ಒಬ್ಬ ವೀರ ಯೋಧ, ಅವರು ಒಬ್ಬ ಭಗವಂತ, ಅವರು ಒಬ್ಬ ಪ್ರವಾದಿ ಅವರು ವನವಾಸಿಗಳ ಸೂರ್ಯ ಹೀಗೆ ಅನೇಕ ಉಪಮೇಯಗಳನ್ನು ಬಳಸಿ ಹೊಗಳಲಾಗಿದೆ.


 ಬಿರ್ಸಾ ಅವರು ಕ್ರಿಶ್ಚಿಯನ್ ಧರ್ಮ ಪರಿವರ್ತನೆಯಾಗಲು ಜರ್ಮನ್ ಮಿಷನ್ ಶಾಲೆ ಕಾರಣ ಯುರೋಪಿನ ವಸಾಹತು ಆಡಳಿತದಲ್ಲಿ ಮಿಷನರಿ ಶಾಲೆ ಸೇರಲು  ಕಡ್ಡಾಯ ಕ್ರಿಶ್ಚಿಯನ್ ಧರ್ಮ ಮತಾಂತರಗೊಂಡು ಸೇರಬೇಕಿತ್ತು ಹಾಗೆಯೇ  ಶಾಲೆಗೆ ಸೇರಿದ ವಿದ್ಯಾರ್ಥಿಗಳು ತಮ್ಮ ಹೆಸರುಗಳನ್ನು  ಮರುನಾಮಕರಣ ಮಾಡಿಕೊಳ್ಳಬೇಕಿತ್ತು ಬಿರ್ಸಾ ಮುಂಡಾ ಅವರ ಹೆಸರನ್ನು ಬಿರ್ಸಾ ಡೇವಿಡ್ ಎಂದು ಬದಲಾಯಿಸಿಬಿಟ್ಟಿದ್ದರು. ಆಗ 

 ಜರ್ಮನ್ ಮತ್ತು ರೋಮನ್ ಕ್ಯಾಥೋಲಿಕ್ ಕ್ರಿಶ್ಚಿಯನ್ ಮೀಷನರಿಗಳ ಶಾಲೆಗಳು ಕಿರಿಕಿರಿ ಉತ್ತುಂಗದಲ್ಲಿದ್ದ ಕಾಲ. ಇದನ್ನು ಮನಗಂಡ ಬಿರ್ಸಾ ತಂದೆ ಸುಗುಣ ಮುಂಡಾ ಮಗನನ್ನು ಶಾಲೆಯಿಂದ ಬಿಡಿಸಿದರು. ಬಿರ್ಸಾ ಅವರು ವನವಾಸಿಗಳು ಹಿಂದೂ ಧರ್ಮದ ಮೂಲ ಪುರುಷರೆಂದು ಪ್ರತಿಪಾದಿಸಿದರು. ವನವಾಸಿಗಳ ಜೀವನಶೈಲಿ ಮತ್ತು ಧರ್ಮಾಚರಣೆ ವಿಶಿಷ್ಟ ಮತ್ತು ಅದೇ ಮಾನವ ಮೂಲ ಸಂಸ್ಕೃತಿಯ ಬೇರು ಎಂದು ತಿಳಿಸಿದರು.

ಭಾರತ ಸರ್ಕಾರ ಅವರ ಹೆಸರಿನಲ್ಲಿ ಮತ್ತು ಅವರ ಸ್ಮರಣಾರ್ಥ 1988 ಸ್ಟಾಂಪ್ ಬಿಡುಗಡೆ ಮಾಡಿದೆ.

ಅವರ ಜನ್ಮ ವಾರ್ಷಿಕೋತ್ಸವವು ನವೆಂಬರ್ 15ರಂದು ನಡೆಯುತ್ತದೆ ಮತ್ತು ಈ ದಿನವನ್ನು ರಾಷ್ಟ್ರೀಯ ಗಿರಿಜನ ದಿನ ಎಂದು ಕರೆಯಲಾಗುತ್ತದೆ.  ಅವರ ಸಮಾಧಿ ಜಾರ್ಖಂಡ್ ರಾಜ್ಯದ ರಾಜಧಾನಿಯಲ್ಲಿದೆ.

ಅವರ ಹೆಸರಿನಲ್ಲಿ ಅನೇಕ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ  ಅವೆಂದರೆ ಬಿರ್ಸಾ ಮುಂಡಾ ವಿಮಾನನಿಲ್ದಾಣ ರಾಂಚಿ, ಬಿರ್ಸಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಿಂದ್ರಿ, ಬಿರ್ಸಾ ಮುಂಡಾ ವನವಾಸಿ ಚತ್ರವಾಸ್, ಸಿದ್ದೋ ಕನ್ಹೋ ಬಿರ್ಸಾ ವಿಶ್ವವಿದ್ಯಾಲಯ ಪುರೂಳಿಯ, ಮತ್ತು ಬಿರ್ಸಾ ಕೃಷಿ ವಿಶ್ವವಿದ್ಯಾಲಯ

ಅವರೊಬ್ಬರೇ ಗಿರಿಜನರ ನಾಯಕ ಅವರ ಭಾವಚಿತ್ರವನ್ನು ಭಾರತೀಯ ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ಗೌರವದ  ಗುರುತಾಗಿ ಪ್ರತಿಷ್ಠಾಪಿಸಲಾಗಿದೆ.


ಬಿರ್ಸಾ ಅವರು ತಮ್ಮ 25ನೇ ವಯಸ್ಸಿನಲ್ಲಿ ನಮ್ಮನ್ನು ಹಗಲಿದ್ದಾರೆ  ಜೂನ್ 9, 1900ರಂದು ಇಹಲೋಕ ತ್ಯಜಿಸಿ ಭಾರತೀಯ ವನವಾಸಿಗಳ ಹೆಮ್ಮೆಯ ಪ್ರತೀಕವಾಗಿ ಅವರ ಹೃದಯಂತರಾಳದಲ್ಲಿ ಅಮರರಾಗಿದ್ದಾರೆ ಬ್ರಿಟಿಷ್ ಸರ್ಕಾರ ಜೈಲಿನಲ್ಲಿದ್ದ ಬಿರ್ಸಾ ಅವರು ಕಾಲರ ಬಂದು ಅನಾರೋಗ್ಯದಿಂದ ಹಸುನೀಗಿದರೆಂದು ಪ್ರಕಟಣೆ ಹೊರಡಿಸಿತು ಕೊನೆಗು ಬ್ರಿಟಿಷ್ ವಸಾಹತುಶಾಹಿ ನೀತಿಗೆ ಸ್ವಾತಂತ್ರ್ಯ ಕೊಂಡಿಯೋಂದು ಕಳಚಿದರು, ಕಡಿಮೆ ವಯಸ್ಸಿನಲ್ಲಿ ಅವರು ಮಾಡಿದ ಸಾಧನೆ ಹೋರಾಟ ಸೂರ್ಯ ಚಂದ್ರರಿರುವವರೆಗು ಅಮರ.


ಚನ್ನವೀರಪ್ಪ ಎಂ.ಎಸ್. (ಚಮಾಶಿ)

ಮಾಯಗಾನಹಳ್ಳಿ (ಅಭಾಸಾಪ).



ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑