Tel: 7676775624 | Mail: info@yellowandred.in

Language: EN KAN

    Follow us :


ದಂಡಾಧಿಕಾರಿಗಳಿಗೆ ಸಿಕ್ಕಿಬಿದ್ದ ನಕಲಿ ಐಎಎಸ್‌ ಅಧಿಕಾರಿ ಮತ್ತು ತಂಡ

Posted date: 16 Nov, 2019

Powered by:     Yellow and Red

ದಂಡಾಧಿಕಾರಿಗಳಿಗೆ ಸಿಕ್ಕಿಬಿದ್ದ ನಕಲಿ ಐಎಎಸ್‌ ಅಧಿಕಾರಿ ಮತ್ತು ತಂಡ

ಚನ್ನಪಟ್ಟಣ: ನಗರದ ಪ್ರವಾಸಿ ಮಂದಿರಕ್ಕೆ ಐಷಾರಾಮಿ ಕಾರು ಮತ್ತು ತನ್ನದೇ ಭದ್ರತಾ ಸಿಬ್ಬಂದಿಗಳ ಜೊತೆ ಆಗಮಿಸಿ ತಾಲ್ಲೂಕಿನ ಕೆಲ ಅಧಿಕಾರಿಗಳಿಂದ ಆತಿಥ್ಯ ಸ್ವೀಕರಿಸುತ್ತಿದ್ದ *ನಕಲಿ ಐಎಎಸ್‌ ಅಧಿಕಾರಿ ಮಹಮ್ಮದ್ ಸಲ್ಮಾನ್ (೩೭)* ಮತ್ತು ತಂಡದವರನ್ನು ತಾಲ್ಲೂಕಿನ *ತಹಶಿಲ್ದಾರ್/ದಂಡಾಧಿಕಾರಿಗಳಾದ ಸುದರ್ಶನ್* ರವರು ಅನುಮಾನದ ಮೇರೆಗೆ ಪ್ರಶ್ನಿಸಲಾಗಿ ತಡವರಿಸಿದ ತಂಡದವರನ್ನು ತಮ್ಮ ಸಿಬ್ಬಂದಿಯೊಡಗೂಡಿ ಹಿಡಿದು ನಗರದ ಪೋಲಿಸ್ ಠಾಣೆ ಗೆ ಒಪ್ಪಿಸಿದ್ದಾರೆ.


ಕೆಲ ಅಧಿಕಾರಿಗಳಿಂದ ಆತಿಥ್ಯ ಸ್ವೀಕರಿಸುವ ವೇಳೆ ವಿಶ್ರಾಂತಿಗೆಂದು ತಹಶಿಲ್ದಾರ್ ಸುದರ್ಶನ್ ರವರು ಆಗಮಿಸಿದ್ದು ಅಧಿಕಾರಿ ಬಂದಿದ್ದಾರೆನ್ನುವ ಮಾಹಿತಿ ತಿಳಿದ ತಕ್ಷಣ ಭೇಟಿ ಮಾಡಿದ್ದಾರೆ. ನಂತರ ಇಲಾಖೆಯ ಬಗ್ಗೆ ವಿಚಾರಿಸಲಾಗಿ ಸರ್ಕಾರದಲ್ಲಿ ಇಲ್ಲದ ಇಲಾಖೆ ಹೆಸರೇಳಿದ್ದಾರೆ. ಅನುಮಾನಗೊಂಡ ತಹಶಿಲ್ದಾರ್ ರವರು ಮತ್ತಷ್ಟು ಪ್ರಶ್ನಿಸಲಾಗಿ ತಡವರಿಸಿದ ನಕಲಿ ತಂಡದವರು ಪಲಾಯನಗೊಳ್ಳಲು ಯತ್ನಿಸಿದ್ದಾರೆ. ಎಚ್ಚೆತ್ತ ತಹಶಿಲ್ದಾರ್ ರವರು ತಮ್ಮ ಸಿಬ್ಬಂದಿಗಳೊಂದಿಗೆ ಹಿಡಿದು ಠಾಣೆಗೆ ಒಪ್ಪಿಸಿದ್ದಾರೆ.


ತಾವು ಬಳಸುತ್ತಿದ್ದ ಐಷಾರಾಮಿ ಇನ್ನೋವಾ (ಕೆಎ ೫೩ ಎನ್ ೯೮೫೩) ಕಾರಿಗೆ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ನೋಂದಣಿ ಸಂಖ್ಯೆ ನಮೂದಿಸಿದ್ದು ಕರ್ನಾಟಕ ಸರ್ಕಾರ ಎಂದು ಬರೆಸಿಕೊಂಡಿದ್ದಾರೆ. ನೋಂದಣಿ ಸಂಖ್ಯೆ ಯ ಕೆಳಗೆ *ಅಧ್ಯಕ್ಷರು ಕರ್ನಾಟಕ ರಾಜ್ಯ ಸಮಗ್ರ ಜನಸ್ಪಂದನ ಕಾರ್ಯಕ್ರಮ. ಸಮಗ್ರ ಯೋಜನೆಗಳ ಜನಜಾಗೃತಿ ಕಾರ್ಯಕ್ರಮ* ಎಂದು ಬರೆಸಿಕೊಂಡಿದ್ದು ರಾಜಾರೋಷವಾಗಿ ಓಡಾಡುತ್ತಿದ್ದರೆಂದು ಹೇಳಲಾಗಿದೆ.


ಮಹಮ್ಮದ್ ಸಲ್ಮಾನ್ ಅಂಗರಕ್ಷಕರನ್ನೂ ನೇಮಿಸಿಕೊಂಡಿದ್ದು ತಾಲ್ಲೂಕಿನ *ಬೆಳಕೆರೆ ಗ್ರಾಮದ ಸುಬ್ಬೇಗೌಡ ಉ ಗುಂಡ ಎಂಬುವವರ ಮಗನಾದ ಮಂಜು (೨೫) ಮತ್ತು ಬೆಟ್ಟಯ್ಯ ನ ಮಗನಾದ ರವಿ ಎಂಬುವವರು (೩೫)* ಒಗ್ಗೂಡಿ ರಿಯಲ್ ಎಸ್ಟೇಟ್ ಮತ್ತಿತರ ಖಾಸಗಿ ವ್ಯಾಜ್ಯಗಳನ್ನು ಪರಿಹರಿಸುವುದಾಗಿ ಹೇಳಿ ಹಣ ವಸೂಲಿ ಮಾಡುತ್ತಿದ್ದುದಾಗಿ ತಿಳಿದು ಬಂದಿದ್ದು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑