Tel: 7676775624 | Mail: info@yellowandred.in

Language: EN KAN

    Follow us :


ಪ್ರಕೃತಿಯೇ ಆಯುರ್ವೇದ, ಪಥ್ಯವೇ ಆರೋಗ್ಯ. ಆಯುರ್ವೇದ ರತ್ನ ಡಾ ಮಹೇಶ್ ಮೂರ್ತಿ

Posted date: 20 Nov, 2019

Powered by:     Yellow and Red

ಪ್ರಕೃತಿಯೇ ಆಯುರ್ವೇದ, ಪಥ್ಯವೇ ಆರೋಗ್ಯ. ಆಯುರ್ವೇದ ರತ್ನ ಡಾ ಮಹೇಶ್ ಮೂರ್ತಿ

ಚನ್ನಪಟ್ಟಣ: ಆಯುರ್ವೇದ ರತ್ನ ಚನ್ನಪಟ್ಟಣ ದ ಉಗಮ ಚಿಕಿತ್ಸಾಲಯದ ಡಾ ಮಹೇಶ್ ಮೂರ್ತಿಯವರೊಂದಿಗೆ ಗೋ ರಾ ಶ್ರೀನಿವಾಸ ನಡೆಸಿದ ಒಂದು ಸಂವಾದ


*ಆಯುರ್ವೇದ ನೈಸರ್ಗಿಕ ಇಂಗ್ಲಿಷ್ ವೈದ್ಯ ಅನೈಸರ್ಗಿಕ*


*ನಮ್ಮ ಆರೋಗ್ಯ ಮಿತ್ರ ಪ್ರಕೃತಿ ಮಾತ್ರ, ಆಯಾಯ ಋತುಮಾನದಲ್ಲಿ ಚಿಗುರೊಡೆಯುವ ಸೊಪ್ಪು ತರಕಾರಿಗಳು, ಹಣ್ಣು ಹಂಪಲುಗಳ ಜೊತೆಗೆ ಸೂಕ್ತ ಮತ್ತು ಮಿತ ಆಹಾರಗಳೇ ನಮ್ಮ ಆಯುಷ್ಯ ಮತ್ತು ಆರೋಗ್ಯವನ್ನು ನಿರ್ಧರಿಸುತ್ತವೆ. ಮಾನವ ನಿರ್ಮಿತ ಬಹುತೇಕ ಆಹಾರ ಪದಾರ್ಥಗಳೇ ನಮ್ಮ ಅನಾರೋಗ್ಯಕ್ಕೆ ಕಾರಣ. ಆಯುರ್ವೇದ ವೈದ್ಯ ನೈಸರ್ಗಿಕ, ಇಂಗ್ಲಿಷ್ ವೈದ್ಯ ಅನೈಸರ್ಗಿಕ. ಇವು ಇತ್ತೀಚೆಗೆ ಪ್ರಖ್ಯಾತಿ ಹೊಂದುತ್ತಿರುವ ದೇಶದ ಉದ್ದಗಲದಿಂದಲೂ ಬರುವ ರೋಗಿಗಳಿಗೆ ಹತ್ತಾರು ಲಕ್ಷ ಖರ್ಚು ಮಾಡಿಯೂ ವಾಸಿಯಾಗದ ಅನಾರೋಗ್ಯ ಪೀಡಿತರಿಗೆ ಪಾರಂಪರಿಕ ಮತ್ತು ಆಯುರ್ವೇದ ಔ಼ಷಧಗಳಿಂದಲೇ ರೋಗಿಗಳ ರೋಗಗಳಿಗೆ ಮುಕ್ತಿ ನೀಡುತ್ತಿರುವ ಆಯುರ್ವೇದ ರತ್ನ ಡಾ ಮಹೇಶ್ ಮೂರ್ತಿ ಯವರ ನುಡಿಮುತ್ತುಗಳು.*


*ನಾಟಿ ವೈದ್ಯ ಪಾರಂಪರಿಕ ಕುಟುಂಬ*


ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯ ತುರಗನೂರು ಗ್ರಾಮದ ಪಾರಂಪರಿಕ ನಾಟಿ ವೈದ್ಯ ಕುಟುಂಬದಲ್ಲಿ ಜನಿಸಿದ ಮಹೇಶ್ ಮೂರ್ತಿ ಯವರು ಅರಣ್ಯ ಶಾಸ್ತ್ರದಲ್ಲಿ ಬಿಎಸ್ಸಿ ಪದವಿ ಅಧ್ಯಯನ ಮಾಡಿದವರು. ವಂಶ ಪಾರಂಪರ್ಯವಾಗಿ ಬಂದಿದ್ದ ನಾಟಿವೈದ್ಯಕೀಯದ ಜೊತೆಗೆ ಪದವಿ ಸಮಯದಲ್ಲೇ ಚಿಗುರೊಡೆದ ಆಯುರ್ವೇದದ ಕನಸನ್ನು ಸಾಕಾರಗೊಳಿಸುವಲ್ಲಿ ಸಫಲರಾದರು. ಆಯುರ್ವೇದವನ್ನು ಕೇವಲ ವಿಶ್ವವಿದ್ಯಾಲಯ ದ ಪದವಿಗಷ್ಟೇ ಸೀಮಿತವಾಗಿಸದೇ ಬಿಳಿಗಿರಿರಂಗನ ಬೆಟ್ಟದ ಸೋಲಿಗರ ಹಾಡಿಯಲ್ಲಿ ಗೆಡ್ಡೆ ಗೆಣಸು, ಸೊಪ್ಪುಸದೆ, ಹಣ್ಣು ಕಾಯಿಗಳ ಅಧ್ಯಯನ, ಅಲ್ಲಿನ ಪಾರಂಪರಿಕ ವೈದ್ಯಕೀಯ ಹಾಗೂ ಅನೇಕ ಹಿರಿಯ ಅಳಲೆಕಾಯಿ ಪಂಡಿತರ ಮೂಲಕ ತಿಳಿದುಕೊಂಡಿದ್ದಲ್ಲದೆ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಪರ್ಯಾಯ ಚಿಕಿತ್ಸೆ ಎಂಬ ವಿಷಯವನ್ನು ಮಂಡಿಸಿ ಪಿ ಹೆಚ್ ಡಿ ಪದವಿ ಗಳಿಸಿರುವುದಾಗಿ ಹೇಳಿದರು.


*ಹೃದಯ, ಲೋಬಿಪಿ ಮತ್ತು ಕ್ಯಾನ್ಸರ್ ಗೆ ಕೊಡಲ್ಲ, ಬೇರೆ ಖಾಯಿಲೆಗಳಿಗೆ ಬಿಡಲ್ಲ*


ಹೃದಯ ಸಂಬಂಧಿ, ಕ್ಯಾನ್ಸರ್ ಮತ್ತು ಕಡಿಮೆ ರಕ್ತದೊತ್ತಡ (ಲೋ ಬಿಪಿ) ಹೊರತುಪಡಿಸಿ ಮಿಕ್ಕೆಲ್ಲ ಖಾಯಿಲೆಗಳಿಗೂ ಆಯುರ್ವೇದ ಔಷಧ ಕೊಡುತ್ತೇನೆ. ಮೇಲಿನ ರೋಗಗಳಿಗೂ ಔಷಧ ಕೊಡಬಹುದಾದರೂ ಸಹ ರೋಗಿಯ ಪೋಷಕರ (ಕೆಲವರು ಮಾತ್ರ) ದುರ್ನಡತೆ ಯಿಂದಾಗಿ ಕೊಡಲು ಮುಂದಾಗುವುದಿಲ್ಲ. ಮಿಕ್ಕೆಲ್ಲ ಖಾಯಿಲೆಗಳಿಗೂ ಸಂಪೂರ್ಣ ಆಯುರ್ವೇದ ಔಷಧಗಳನ್ನೇ ನೀಡಲಾಗುತ್ತದೆ, ಈ ಔಷಧಗಳಲ್ಲಿ‌ ಶೇಕಡಾ ೯೦ ಕ್ಕೂ ಹೆಚ್ಚು ಅಡ್ಡಪರಿಣಾಮ ಇರುವುದಿಲ್ಲ. ಧೀರ್ಘ ಕಾಲದ ರೋಗಿಗಳಿಗೂ ಸಹ ಕಡಿಮೆ ಅವಧಿಯ ಔಷಧೋಪಚಾರ ಮತ್ತು ಪಥ್ಯ (ಮಿತ ಮತ್ತು ಸೀಮಿತ ಆಹಾರ) ಇರಬೇಕಾದ್ದು‌ ಅತ್ಯವಶ್ಯ ಎನ್ನುತ್ತಾರೆ.


*ವಾಸಿಯಾಗದ ಖಾಯಿಲೆಗಳೇ ಇಲ್ಲ*


ಇತ್ತೀಚೆಗೆ ಗಂಭೀರ ಖಾಯಿಲೆ ಹಾಗೂ ಒತ್ತಡದಿಂದ ದಿನನಿತ್ಯ ಬರುವ ಖಾಯಿಲೆಗಳಾದ ಬೆನ್ನುನೋವು, ಮಂಡಿನೋವು (Back Pain, Joint Pain) ಪಾರ್ಶ್ವವಾಯು, ಅಸ್ತಮಾ, ಉಬ್ಬಸ,ಸೋರಿಯಾಸಿಸ್ ಹಾಗೂ ಬಹಳ ಮುಖ್ಯವಾಗಿ ಸಂಧಿವಾತ ದಂತಹ ರೋಗಿಗಳೇ ಹೆಚ್ಚು ಬರುತ್ತಿದ್ದು ಶೇಕಡಾ ೯೦ ಕ್ಕೂ ಹೆಚ್ಚು ರೋಗಿಗಳಿಗೆ ವಾಸಿಯಾಗಿದೆ. ಆಯುರ್ವೇದ ಔಷಧ ಎಂದರೆ ದೇಹದೊಳಗಿನ ಎಲ್ಲಾ ಕಲ್ಮಶಗಳನ್ನು (ರೋಗಗಳನ್ನು) ಪ್ರಾಕೃತಿಕ ಔಷಧಗಳಿಂದಲೇ ಮುಕ್ತಿಗೊಳಿಸುವುದು. ಯಾವುದೇ ಆಪರೇಷನ್ ಇಲ್ಲದೆ ಗಿಡ ಮೂಲಿಕೆಗಳಿಂದಲೇ ಸಂಸ್ಕರಿಸಿದ ಔಷಧಿಗಳಿಂದಲೇ ಗುಣಪಡಿಸುವಂತದ್ದು. ಇದಕ್ಕೆ ಬೇಕಾಗಿರುವುದು ರೋಗಿಯ ನಂಬಿಕೆ ಮತ್ತು ಪಥ್ಯ ಆಹಾರ ಮಾತ್ರ.


*ನಾನೇ ಸಂಶೋಧಿಸಿ ತಯಾರಿಸಿದ ಔಷಧ ಗಳ ಜೊತೆಗೆ ಉತ್ತಮ ದರ್ಜೆಯ ಕಂಪನಿಗಳ ಔಷಧ*


ಕೆಲವು ಖಾಯಿಲೆಗಳಾದ ಚರ್ಮವ್ಯಾಧಿ, ಸ್ಥೂಲಕಾಯ, ಗ್ಯಾಸ್ಟ್ರಿಕ್‌ ಚೂರ್ಣ, ನೆಗಡಿ-ಕೆಮ್ಮು, ಕಫ ಸಂಹಾರದಂತಹ ಖಾಯಿಲೆಗಳಿಗೆ ನಾನೇ ಸಂಶೋಧಿಸಿ ತಯಾರಿಸಿದ ಔಷಧಿಗಳನ್ನು ನೀಡುತ್ತೇನೆ, ಇನ್ನುಳಿದ ಖಾಯಿಲೆಗಳಿಗೆ ನೋಂದಣಿ ಯಾಗಿರುವ ಆಯುರ್ವೇದ ಕಂಪನಿಗಳಿಂದ ಖರೀದಿಸಿ ಕೊಡುತ್ತೇನೆ. ಶೇಕಡಾ ೯೯ ಅಡ್ಡಪರಿಣಾಮಗಳಿರುವುದಿಲ್ಲ. ನಾನು ಸಂಶೋಧಿಸಿ ತಯಾರಿಸಿದ ಔಷಧಗಳಿಗೆ ಯಾರ ಅನುಮತಿಯೂ ಬೇಕಾಗಿಲ್ಲ, ಇದುವರೆಗೆ ಯಾವ ಅಡ್ಡಪರಿಣಾಮಗಳಾಗಿಲ್ಲ.ಮಾರುಕಟ್ಟೆ ಮಾಡುವುದಾದರೆ ನೋಂದಣಿಯ ಅವಶ್ಯಕತೆ ಇದೆ.


*ಆಯುರ್ವೇದ ಕಲಿತವರು ಇಂಗ್ಲಿಷ್ ವೈದ್ಯ ಕೊಡುತ್ತಾರೆ ಇದು ತಪ್ಪು*


ಆಯುರ್ವೇದ ಕಲಿತ ವೈದ್ಯರೂ ಸಹ ಇಂಗ್ಲೀಷ್ ವೈದ್ಯ ನೀಡುತ್ತಾರೆ, ಕೆಲವರು ಸ್ಟಿರಾಯ್ಡ್ ನಂತಹ ಔಷಧಿಗಳನ್ನು ನೀಡುವುದನ್ನು ಕೇಳಿದ್ದೇನೆ. ಇದು ಅಡ್ಡ ಪರಿಣಾಮ ಅಲ್ಲದೆ ರೋಗಿಯ ಜೀವದ ಮೇಲೆ ಚಲ್ಲಾಟವಾಡುವಂತದ್ದು, ಆಯುರ್ವೇದ ಸಂಪೂರ್ಣ ತಿಳಿಯದಾಗಿದ್ದರೆ ಅವರು ಎಷ್ಟು ತಿಳಿದಿದ್ದಾರೋ ಅಷ್ಟಕ್ಕೇ ಮಾತ್ರ ಔಷಧ ನೀಡಬೇಕು, ಎರಡು ರೀತಿಯ ಔಷಧಗಳನ್ನು ನೀಡಿದರೆ ವ್ಯಕ್ತಿಯು ಚೇತರಿಸಿಕೊಳ್ಳುವುದು ಕಷ್ಟವಾಗುತ್ತದೆ. ಕಳೆದ ಇಪ್ಪತ್ನಾಲ್ಕು ವರ್ಷಗಳಿಂದಲೂ ಆಯುರ್ವೇದ ಔಷಧ ಕೊಡುತ್ತಿದ್ದು ಈ ಹಿಂದೆ ಹನ್ನೆರಡು ನಗರಗಳಲ್ಲಿ ಕ್ಲಿನಿಕ್ ತೆರೆದಿದ್ದೆ, ಒತ್ತಡಗಳಿಂದಾಗಿ ಈಗ ಇದೊಂದೆ ಕ್ಲಿನಿಕ್ ನಡೆಸುತ್ತಿದ್ದು ರಾಜ್ಯ ದ ರೋಗಿಗಳಲ್ಲದೆ ಹೊರ ರಾಜ್ಯ ಮತ್ತು ಅನಿವಾಸಿ ಭಾರತೀಯರು ಸಹ ಪೋನ್ ಮೂಲಕ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.


*ವೀಡಿಯೋ ವೈರಲ್*


ಹತ್ತಾರು ಆಸ್ಪತ್ರೆಗಳಿಗೆ ಎಡತಾಕಿ ಹತ್ತಾರು ಲಕ್ಷ ಖರ್ಚು ಮಾಡಿ ವಾಸಿಯಾಗದೇ ಇದ್ದಂತಹ ರೋಗಿಗಳನ್ನು ಆಯುರ್ವೇದ ದಿಂದ ಗುಣಪಡಿಸಿದ ನಂತರ ರೋಗಿ, ರೋಗ ಮತ್ತು ಔಷಧ ಮಾಹಿತಿಯನ್ನು ವೀಡಿಯೋ ಮಾಡಿ ಯೂಟ್ಯೂಬ್ ನಲ್ಲಿ ಹಂಚಿಕೊಳ್ಳುತ್ತಿದ್ದೇನೆ, ಅಂದರೆ ಸಾಮಾಜಿಕ ಜಾಲತಾಣದ ಮೂಲಕ ನೋಡಿಕೊಂಡು ರೋಗಿಗಳು ಬರುತ್ತಿದ್ದಾರೆ.

ಕೀಲು ತಿರುಗಿಸುವುದಕ್ಕೆ (ದೇಹದ ಎಲ್ಲಾ ಭಾಗಗಳ ನಟ್ಟಿಗೆ ತೆಗೆಯುವುದು) ೩೦೦ ರೂಪಾಯಿ ತೆಗೆದುಕೊಳ್ಳುವುದು ಬಿಟ್ಟರೆ ಮಿಕ್ಕೆಲ್ಲಾ ಖಾಯಿಲೆಗಳಿಗೆ ಔಷಧದ ಬೆಲೆಯನ್ನು ಮಾತ್ರ ತೆಗೆದುಕೊಳ್ಳುತ್ತೇವೆ.

ಪ್ರತಿ ವ್ಯಕ್ತಿಗೆ ಔಷಧ ಕೊಡುವಾಗಲೂ ಔಷಧಗಳನ್ನು ಮುಖದ ಮುಂಭಾಗ ಕೈಯಲ್ಲಿ ಹಿಡಿದು ದೇವರನ್ನು ಪ್ರಾರ್ಥಿಸಿಯೇ ಕೊಡುವುದಾಗಿ ತಿಳಿಸಿದರು.


*ಸಹಸ್ರಾರು ಉಪನ್ಯಾಸಗಳು*


ಇಪ್ಪತ್ನಾಲ್ಕು ವರ್ಷಗಳಿಂದ ಕಳೆದ ಮೂರು ವರ್ಷಗಳ ತನಕ ಆಯುರ್ವೇದ ವೈದ್ಯರು, ಪಾರಂಪರಿಕ ವೈದ್ಯರು, ನಾಟಿ ಮತ್ತು ಅಳಲೆಕಾಯಿ ಪಂಡಿತರು, ಮಹಿಳಾ ಸಂಘಟನೆಗಳು ರೈತ ಸಭೆಗಳು ಸೇರಿದಂತೆ ಸೋಲಿಗರ ಆಹಾರ ಮತ್ತು ಕೃಷಿ ಪದ್ದತಿ, ಸಾವಯವ ಕೃಷಿ ಮತ್ತು ಶಾಲಾಕಾಲೇಜುಗಳಲ್ಲಿ ಸಹಸ್ರಾರು ಉಪನ್ಯಾಸಗಳನ್ನು ನೀಡಿದ್ದು ಒತ್ತಡ ಹಾಗೂ ಸಮಯದ ಅಭಾವದಿಂದ ಇತ್ತೀಚಿಗೆ ಉಪನ್ಯಾಸ ನೀಡಲು ಆಗುತ್ತಿಲ್ಲ.

ಆದರೂ ಮುಂದಿನ ಪೀಳಿಗೆ ಮತ್ತು ದೇಶದ ಅತ್ಯಮೂಲಾಗ್ರ ಔಷಧ ಸಸ್ಯಗಳ ಉಳಿವಿಗಾಗಿ ತಿಳುವಳಿಕೆ ನೀಡಲು ಬದ್ದನಾಗಿದ್ದೇನೆ ಎಂದರು.


ರೋಗಿಗಳು ದೂರದೂರುಗಳಿಂದ ಬರುವುದರಿಂದ ಮೊದಲೇ ನೋಂದಾಯಿಸಿಕೊಂಡು ಬರುವುದು ಒಳ್ಳೆಯದು. ಬುಧವಾರ ಮತ್ತು ಶನಿವಾರ ಮಧ್ಯಾಹ್ನ ಒಂದು ಗಂಟೆಯವರೆಗೆ ಮಿಕ್ಕ ದಿನಗಳಲ್ಲಿ ಸಂಜೆ ನಾಲ್ಕು ಗಂಟೆಯವರೆಗೆ ಚಿಕಿತ್ಸಾಲಯ ತೆರೆದಿದ್ದು ಭಾನುವಾರ ರಜಾ ದಿನ ವಾಗಿರುತ್ತದೆ.


ವಿಳಾಸ;

*ಡಾ ಮಹೇಶ್ ಮೂರ್ತಿ.*

*ಉಗಮ ಆಯುರ್ವೇದ ಚಿಕಿತ್ಸಾಲಯ.*

*ಹನುಮಂತ ನಗರ. ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ. ಬಾಲಾಜಿ ಕಲ್ಯಾಣ ಮಂಟಪದ ಹತ್ತಿರ. ಚನ್ನಪಟ್ಟಣ. ರಾಮನಗರ ಜಿಲ್ಲೆ.*

*ಮೊ:7975322174.*


*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑