Tel: 7676775624 | Mail: info@yellowandred.in

Language: EN KAN

    Follow us :


ಅಕ್ರಮ ಗ್ರಾನೈಟ್ ಮತ್ತು ಎಂ ಸ್ಯಾಂಡ್ ಜಪ್ತಿ ಮಾಡಿದ ತಹಶಿಲ್ದಾರ್

Posted Date: 06 Dec, 2019

ಅಕ್ರಮ ಗ್ರಾನೈಟ್ ಮತ್ತು ಎಂ ಸ್ಯಾಂಡ್ ಜಪ್ತಿ ಮಾಡಿದ ತಹಶಿಲ್ದಾರ್

ಕನಕಪುರ/ಚನ್ನಪಟ್ಟಣ: ಶುಕ್ರವಾರ ಮುಂಜಾನೆ ೧೨:೪೫ ರ ವೇಳೆ ಅಕ್ರಮವಾಗಿ ಗ್ರಾನೈಟ್ ಸಾಗಿಸುತ್ತಿದ್ದ ಎರಡು ಲಾರಿಗಳನ್ನು ತಹಶಿಲ್ದಾರ್ ಸುದರ್ಶನ್ ಮತ್ತು ಭೂವಿಜ್ಞಾನ ಹಾಗೂ ಗಣಿ ಇಲಾಖೆಯ ಅಧಿಕಾರಿ ಪವನ್ ರವರು ಆನೇಕಲ್ ಜಿಗಣಿ ರಸ್ತೆಯಲ್ಲಿ ತಡೆದು ಹಾರೋಹಳ್ಳಿ ಪೋಲೀಸರಿಗೆ ಒಪ್ಪಿಸಿದ್ದಾರೆ.


ಖಚಿತ ಮಾಹಿತಿಯನ್ನು ಪಡೆದ ತಹಶಿಲ್ದಾರ್ ರವರು ತಡರಾತ್ರಿ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಬಂದ ಲಾರಿಗಳನ್ನು ತಡೆದು ನಿಲ್ಲಿಸಿ ಪರೀಕ್ಷಿಸಿದಾಗ ಒಂದು ಲಾರಿಯಲ್ಲಿ ಒಂದು ಹಾಗೂ ಮತ್ತೊಂದು ಲಾರಿಯಲ್ಲಿ ಮೂರು ಕಲ್ಲುಗಳಿದ್ದು ಸರಿಯಾದ ದಾಖಲೆ ಇಲ್ಲದ ಕಾರಣ ಚಾಲಕರ ಸಮೇತ ಹಾರೋಹಳ್ಳಿ ಪೋಲೀಸರಿಗೆ ಒಪ್ಪಿಸಿದ್ದಾರೆ.


*ಚನ್ನಪಟ್ಟಣ ವರದಿ*


ನಗರದ ಹೆದ್ದಾರಿಯಲ್ಲಿ ಎಂ ಸ್ಯಾಂಡ್ ಸಾಗಿಸುತ್ತಿದ್ದ ಎರಡು ಲಾರಿಗಳನ್ನು ತಡೆದು ಪರಿಶೀಲಿಸಿದ ತಹಶಿಲ್ದಾರ್ ಸುದರ್ಶನ್ ಮತ್ತು ತಂಡ ಎರಡು ಲಾರಿಗಳು ಮತ್ತು ಚಾಲಕರನ್ನು ನಗರ ಪೋಲಿಸ್ ಠಾಣೆಗೆ ಶುಕ್ರವಾರ ಬೆಳಗಿನ ಜಾವ ೩:೩೦ ರ ವೇಳೆಯಲ್ಲಿ ಒಪ್ಪಿಸಿದ್ದಾರೆ.


ಒಂದು ಲಾರಿಗೆ ಎಂ ಸ್ಯಾಂಡ್ ಸಾಗಿಸಲು ಪರವಾನಗಿ ಪಡೆದಿರಲಿಲ್ಲ, ಮತ್ತೊಂದು ಲಾರಿಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಎಂ ಸ್ಯಾಂಡ್ ತುಂಬಿರುವುದನ್ನು ಗಮನಿಸಿದ ಸುದರ್ಶನ್ ರವರು ತಡೆದು ನಗರ ಪೋಲಿಸ್ ಠಾಣೆಗೆ ಒಪ್ಪಿಸಿದ್ದಾರೆ.

ಕಾರ್ಯಾಚರಣೆ ಯಲ್ಲಿ ಚಾಲಕ ನಾಗರಾಜು ಮತ್ತು ಸಿಬ್ಬಂದಿ ಶಿವಕುಮಾರ್ ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑