Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೧೦೬: ನರಿಯ ಕೂಗು ಅಪಶಕುನವೇ ?

Posted date: 07 Dec, 2019

Powered by:     Yellow and Red

ತಾಳೆಯೋಲೆ ೧೦೬: ನರಿಯ ಕೂಗು ಅಪಶಕುನವೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ


*ನರಿಯ ಕೂಗು ಅಪಶಕುನವೇ ?*


ನರಿಯ ಕೂಗು ಕೆಟ್ಟ ವಾರ್ತೆಯನ್ನು ತರುತ್ತದೆಂದು ಭಾರತಿಯರು ನಂಬುತ್ತಾರೆ. *ನರಿಗೆ ನಮ್ಮ ಕಣ್ಣಿಗೆ ಕಾಣದ ದೆವ್ವಗಳು, ಯಕ್ಷರು, ಕಿನ್ನರರು ಮತ್ತು ದೇವತೆಗಳನ್ನು ನೋಡುವ ಶಕ್ತಿ ಇರುವುದೆಂದು ಹೇಳುವರು.* ನಮ್ಮ ಪೂರ್ವಿಕರು ಅರಣ್ಯ ಪ್ರಾಂತ್ಯಗಳಲ್ಲಿ ಮತ್ತು ದಟ್ಟವಾದ ಅರಣ್ಯಗಳ ಹತ್ತಿರದಲ್ಲಿ ವಾಸಿಸುತ್ತಿದ್ದರು. ಆದ್ದರಿಂದ ಈ ನಂಬಿಕೆಯು ಪ್ರಬಲವಾಗುವುದಕ್ಕೆ ಅವಕಾಶ ಮಾಡಿಕೊಟ್ಟಿತ್ತು.


*ಪ್ರಾಣಿಗಳು ಮುಖ್ಯವಾಗಿ ಹಸಿವಿನಿಂದ ಇರುವಾಗ ಇಲ್ಲವೇ ಮಿಲನದ ಆಸೆ ಉಂಟಾಗಿ ಜೊತೆಯನ್ನು ಆಶಿಸುವಾಗ ದೀರ್ಘವಾಗಿ ಕೂಗುತ್ತವೆ. ನರಿಗಳು ಸಹಜವಾಗಿ ಭಯಪಟ್ಟಾಗ ಇಲ್ಲವೇ ಹಸಿವಿನಿಂದ ಇರುವಾಗ ಕೂಗುತ್ತವೆ. ಸಂಗಾತಿ ತನ್ನ ಜೊತೆಯಲ್ಲಿರುವಾಗಲೂ ಸಹ ಕೂಗುತ್ತವೆ. ಕೆಲವೊಂದು ಸಂದರ್ಭಗಳಲ್ಲಿ ಮಿಲನದಿಂದಾಗಲೀ ಅಥವಾ ಹೊಟ್ಟೆ ತುಂಬಾ ತಿಂದ ಸಂತೃಪ್ತಿಯಿಂದಲೂ ಸಹ ನರಿಗಳು ಕೂಗುತ್ತವೆ. ಇಂತಹ ಸಮಯದಲ್ಲಿ ಅವು ಕ್ರೂರವಾಗಿ ದಾಳಿ ಮಾಡುವ ಅವಕಾಶ ಹೆಚ್ಚು.*


ಆದ್ದರಿಂದ ಹಿರಿಯರು *ಮಕ್ಕಳನ್ನು ಭಯಪಡಿಸಿ ಹಿಡಿತದಲ್ಲಿಟ್ಟುಕೊಳ್ಳಲು,* ನರಿಗಳು ದೆವ್ವಗಳನ್ನು ಇಲ್ಲವೇ ಯಕ್ಷ ಕಿನ್ನರ ಮುಂತಾದ ಅತೀಂದ್ರಿಯ ಶಕ್ತಿಗಳನ್ನು ನೋಡಿ ಕೂಗುತ್ತಿವೆ ಎಂದು ಹೇಳಿ ಮಕ್ಕಳನ್ನು ಮನೆಯಿಂದ ಹೊರಗೆ ಹೋಗದಿರುವ ಹಾಗೆ ಮಾಡಿ ಅಪಾಯದಿಂದ ರಕ್ಷಿಸುತ್ತಿದ್ದರು.



*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑