Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೧೦೯: ಮನೆಗಿಂತ ಎತ್ತರವಾಗಿ ಪಪ್ಪಾಯಿ ಗಿಡವನ್ನು ಏಕೆ ಬೆಳೆಸಬಾರದು ?

Posted date: 11 Dec, 2019

Powered by:     Yellow and Red

ತಾಳೆಯೋಲೆ ೧೦೯: ಮನೆಗಿಂತ ಎತ್ತರವಾಗಿ ಪಪ್ಪಾಯಿ ಗಿಡವನ್ನು ಏಕೆ ಬೆಳೆಸಬಾರದು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ


ಮನೆಗಿಂತ ಎತ್ತರವಾಗಿ ಪಪ್ಪಾಯಿ ಗಿಡವನ್ನು ಏಕೆ ಬೆಳೆಸಬಾರದು ?


ಪಪ್ಪಾಯಿ ಗಿಡವನ್ನು ಮನೆಯ ಛಾವಣಿಗಿಂತ ಎತ್ತರಕ್ಕೆ ಬೆಳೆಸಬಾರದೆಂದು ಹೇಳುತ್ತಾರೆ ! ಈ ಉದ್ದೇಶವು ಮುಖ್ಯವಾಗಿ *ಗುಂಡಗಿನ ಗುಡಿಸಲು ಮನೆ* ಇದ್ದರೆ ಮಾತ್ರ ಸರಿಯಾದುದು.


ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ತರಹದ ಫಲ ನೀಡುವ ವೃಕ್ಷಗಳನ್ನು ಮನೆಯ ಬಳಿ ಬೆಳೆಸಲಾಗುತ್ತದೆ. *ಹಿಂದಿನ ಕಾಲದಲ್ಲಿ ಹಣ್ಣುಗಳನ್ನು ಹೆಚ್ಚಾಗಿ ತಿನ್ನುತ್ತಿದ್ದರಿಂದ ಹೆಚ್ಚಿನ ವಿಟಮಿನ್ ಗಳನ್ನು ಹೊಂದಿ ಆರೋಗ್ಯವಂತರಾಗಿದ್ದರು.* ಪಪ್ಪಾಯಿ ಕಾಯಿಯಲ್ಲಿ ಔಷಧೀಯ ಗುಣಗಳು ಅಧಿಕವಾಗಿ ಇರುತ್ತವೆ. *ಹಸಿ ಪಪ್ಪಾಯಿ ಕಾಯಿಯಿಂದ ಒಸರುವ ಹಾಲಿನಂತಹ ದ್ರವವನ್ನು ತೆಗೆದು ಮೇಲೆ ಉಜ್ಜಿ ಹುರಿದು ತಿಂದರೆ ಮಕ್ಕಳ ಹೊಟ್ಟೆಯಲ್ಲಿರುವ ವಿಷಕ್ರಿಮಿಗಳು ನಾಶವಾಗುತ್ತವೆಂದು ಆಯುರ್ವೇದ ತಿಳಿಸುತ್ತದೆ.* ಜೀರ್ಣ ವ್ಯವಸ್ಥೆಗೆ ಮತ್ತು ಆರೋಗ್ಯಕ್ಕೆ ಈ ಪದ್ದತಿಯು ಹೆಚ್ಚಿನ ಪ್ರಚಾರದಲ್ಲಿದೆ.


ಪಪ್ಪಾಯಿ ಯಿಂದ ಎಷ್ಟೋ ಪ್ರಯೋಜನಗಳಿದ್ದರೂ ಗಿಡವನ್ನು ಮಾತ್ರ ಮನೆಯ ಛಾವಣಿಗಿಂತ ಹೆಚ್ಚು ಎತ್ತರಕ್ಕೆ ಬೆಳೆಸಿದರೆ ನಿಸ್ಸಂಶಯವಾಗಿ ಕಡಿದು ಹಾಕಲಾಗುತ್ತದೆ. *ಬಲಹೀನವಾದ ಗಿಡಗಳಲ್ಲಿ ಪಪ್ಪಾಯಿ ಗಿಡವೂ ಒಂದು. ಹಣ್ಣಿನ ಆಸೆಗಾಗಿ ಗಿಡವನ್ನು ಹತ್ತಿದರೆ ಗಿಡದ ಕಾಂಡ ಮುರಿದು ಕೆಳಗೆ ಬೀಳುತ್ತದೆ.* ಹಾಗೆಯೇ ಜೋರಾದ ಮಳೆಗಾಳಿಗೂ ಸಹ ಮುರಿದು ಬೀಳುವ ಸಾಧ್ಯತೆ ಹೆಚ್ಚು. *ಮನೆಯ ಮೇಲೆ ಅದರಲ್ಲೂ ಗುಡಿಸಲ ಮನೆಯ ಜೊತೆಗೆ ಮನೆಯಲ್ಲಿರುವವರಿಗೂ ಅಪಾಯ ಕಟ್ಟಿಟ್ಟ ಬುತ್ತಿ.* ಈ ಕಾರಣಕ್ಕಾಗಿಯೇ ಪಪ್ಪಾಯಿ ಗಿಡವನ್ನು ಮನೆಯ ಛಾವಣಿಗಿಂತ ಎತ್ತರವಾಗಿ ಬೆಳೆಸಬಾರದು.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑