Tel: 7676775624 | Mail: info@yellowandred.in

Language: EN KAN

    Follow us :


ರಾಜ್ಯ ಸರ್ಕಾರಿ ನೌಕರರ ಸಮ್ಮೇಳನಕ್ಕೆ ಜಿಲ್ಲೆಯಿಂದ 2 ಸಾವಿರಕ್ಕೂ ಹೆಚ್ಚು ನೌಕರರು : ಆರ್.ಕೆ. ಬೈರಲಿಂಗಯ್ಯ

Posted date: 28 Feb, 2018

Powered by:     Yellow and Red

ರಾಜ್ಯ ಸರ್ಕಾರಿ ನೌಕರರ ಸಮ್ಮೇಳನಕ್ಕೆ ಜಿಲ್ಲೆಯಿಂದ 2 ಸಾವಿರಕ್ಕೂ ಹೆಚ್ಚು ನೌಕರರು : ಆರ್.ಕೆ. ಬೈರಲಿಂಗಯ್ಯ

ರಾಮನಗರ: ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಾರ್ಚ್,3 ರಂದು ನಡೆಯುವ ರಾಜ್ಯ ಸರ್ಕಾರಿ ನೌಕರರ ಸಮ್ಮೇಳನದಲ್ಲಿ ಜಿಲ್ಲೆಯಿಂದ 2 ಸಾವಿರಕ್ಕೂ ಹೆಚ್ಚು ನೌಕರರು ಭಾಗವಹಿಸುತ್ತಿರುವುದಾಗಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಕೆ.ಬೈರಲಿಂಗಯ್ಯ ತಿಳಿಸಿದರು.
ನಗರದ ಸ್ಪೂರ್ತಿ ಭವನದ ಕಚೇರಿಯಲ್ಲಿ ನಡೆದ  ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು ಸಂಘದ ರಾಜ್ಯಾಧ್ಯಕ್ಷರಾದ ಮಂಜೇಗೌಡರ ನೇತೃತ್ವದಲ್ಲಿ ರಾಜ್ಯ ಮಟ್ಟದ ಸಮ್ಮೇಳನ ಮತ್ತು ಪ್ರಜಾಸ್ನೇಹಿ ಆಡಳಿತ ಕುರಿತ ವಿಚಾರ ಸಂಕೀರ್ಣ ಕಾರ್ಯಕ್ರಮ ನಡೆಯುತ್ತಿದೆ.ಆ ಸಂಧರ್ಭದಲ್ಲಿ 6 ನೇ ವೇತನ ಆಯೋಗದ ಶಿಪಾರಸ್ಸನ್ನು ಸೌಹಾರ್ಧಯುತವಾಗಿ ಮಾತುಕತೆಯ ಮೂಲಕ ಜಾರಿಗೆ ತಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜ್ಯ ಸರ್ಕಾರಿ ನೌಕರರ ಪರವಾಗಿ ಅಭಿನಂದಿಸಲಾಗುವುದು ಎಂದರು.
ಸತತವಾಗಿ ಮೂರು ವರ್ಷಗಳಿಂದ ಸಮಾನ ವೇತನ ನೀಡುವಂತೆ ಹೋರಾಟ ಮಾಡಿದ ಫಲವಾಗಿ, ರಾಜ್ಯ ಸರ್ಕಾರ ಆಯೋಗವನ್ನು ರಚನೆ ಮಾಡಿತ್ತು, ಆ ಆಯೋಗ ನೀಡಿದ ವರದಿಯ ಮೇರೆಗೆ ತನ್ನ ಮೊದಲ ಸಂಪುಟ ವರದಿಯಲ್ಲಿ ಶೇ.30 ರಷ್ಟು ವೇತನ ಹೆಚ್ಚಳಕ್ಕೆ ಶಿಪಾರಸ್ಸು ಮಾಡಿದೆ. ಅಲ್ಲದೆ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು 10.568 ಕೋಟಿ ಬಜೆಟ್ ಹಣವನ್ನು ವೇತನ ಆಯೋಗಕ್ಕೆ ನೀಡಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಸರ್ಕಾರಿ ನೌಕರರಿಗೆ ಇತರೆ ನೆರೆ ರಾಜ್ಯಗಳಲ್ಲಿ ನೀಡುತ್ತಿರುವ ವೇತನದ ಬಗ್ಗೆ ಸರ್ಕಾರದ ಗಮನವನ್ನು ಸೆಳೆಯಲಾಗಿತ್ತು. ಅಲ್ಲದೆ ಕೇಂದ್ರ ಸರ್ಕಾರದ ವೇತನವನ್ನು ರಾಜ್ಯ ಸರ್ಕಾರಿ ನೌಕರರಿಗೂ ಇರುವ ತಾರತಮ್ಯವನ್ನು ಬಗೆಹರಿಸಲು ಸರಿ ಸಮಾನವಾಗಿ ವೇತನ ನೀಡುವಂತೆ ಮನವಿ ಮಾಡಲಾಗಿತ್ತು. ಅದಕ್ಕೆ ಸ್ಪಂದಿಸಿದ ಸರ್ಕಾರ ರಾಜ್ಯ ಸರ್ಕಾರ ಐದು ವರ್ಷಕ್ಕೊಮ್ಮೆ ಮತ್ತು ಕೇಂದ್ರ ಸರ್ಕಾರ ಹತ್ತು ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆಯ ಹಂತಗಳನ್ನು ಪರಿಶೀಲಿಸಿ ಶೇ.30 ರಷ್ಟು ವೇತನ ಹೆಚ್ಚಳ ಮಾಡುತ್ತಿರುವುದು ಅಭಿನಂದನೀಯ. ಇದು ನೆರೆ ರಾಜ್ಯಗಳ ವೇತನಕ್ಕೂ ಸ್ವಲ್ಪ ಹೆಚ್ಚಳ ನಮ್ಮ ರಾಜ್ಯದಲ್ಲಿ ನೌಕರರಿಗೆ ಸಿಗುತ್ತಿದೆ ಎಂದರು.
ಸುದ್ಧಿಗೋಷ್ಟಿಯಲ್ಲಿ ಸಂಘದ ಗೌರಾವಾಧ್ಯಕ್ಷ ಪುಟ್ಟಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಸ್.ವೆಂಕಟಪ್ಪ, ಖಜಾಂಚಿ ರಾಜಶೇಖರ್‍ಮೂರ್ತಿ, ಉಪಾಧ್ಯಕ್ಷರಾದ ರಾಜೇಗೌಡ, ಸತೀಶ್, ನರಸಯ್ಯ ಪತ್ರಿಕಾ ಕಾರ್ಯದರ್ಶಿ ಸತೀಶ್ ಮತ್ತಿತರರು ಹಾಜರಿದ್ದರು.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑