Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೧೧೮: ಪ್ರಯಾಣ ಹೋಗುವವರನ್ನು ಹಿಂದಿನಿಂದ ಕರೆಯುವುದು ಸರಿಯಲ್ಲ ಏಕೆ ?

Posted date: 25 Dec, 2019

Powered by:     Yellow and Red

ತಾಳೆಯೋಲೆ ೧೧೮: ಪ್ರಯಾಣ ಹೋಗುವವರನ್ನು ಹಿಂದಿನಿಂದ ಕರೆಯುವುದು ಸರಿಯಲ್ಲ ಏಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ


ಪ್ರಯಾಣ ಹೋಗುವವರನ್ನು ಹಿಂದಿನಿಂದ ಕರೆಯುವುದು ಸರಿಯಲ್ಲ ಏಕೆ ?


ಆಗಾಗ ಮಕ್ಕಳು ಅವರ ಹಿರಿಯರು ಪ್ರಯಾಣ ಹೊರಡುವಾಗ ಯಾವುದೋ ವಿಷಯಕ್ಕೆ ಕರೆಯುತ್ತಾ ಹಿಂಬಾಲಿಸುತ್ತಾರೆ. ಈ ರೀತಿ ಮಾಡುವುದಕ್ಕೆ ಬೈಗುಳಗಳನ್ನು ಸಹ ತಿನ್ನುವರು.


*ಇದರ ಹಿಂದೆ ಯಾವುದೇ ರೀತಿಯ ಶಾಸ್ತ್ರೀಯವಾದ ಅಂಶ ಅಡಗಿಲ್ಲ.* ಆದರೆ ನೈತಿಕ ಪರವಾಗಿ, ಮಾನಸಿಕವಾಗಿ ವೀ ವಿಷಯಕ್ಕೆ ಬಹಳಷ್ಟು ಮೌಲ್ಯವಿದೆ. ಒಂದಾನೊಂದು ಕೆಲಸದ ಮೇಲೆ ನಿಶ್ಚಯ ದೃಷ್ಟಿಯಲ್ಲಿ ಹೋಗುತ್ತಿರುವವರನ್ನು ಹಿಂದಿನಿಂದ ಕರೆಯುವುದರಿಂದ ಅಡಚಣೆಯಾಗುತ್ತದೆ. ಅವರು ಯಾವುದಾದರೂ ಅತಿ ಮುಖ್ಯವಾದ ಕೆಲಸದ ಮೇಲೆ ಹೋಗುತ್ತಿರಬಹುದು. ಈ ವಿಧವಾಗಿ ಹಿಂದಿನಿಂದ ಮತ್ತೆ ಕರೆಯುವುದರಿಂದ ಕೆಲಸದ ಮೇಲೆ ಹೋಗುತ್ತಿರುವವರಿಗೆ ಅಡಚಣೆ ಉಂಟಾಗಿ ಅವರಿಗೆ ಇರುಸು ಮುರುಸಾಗಿ ಮಾನಸಕ

 ಒತ್ತಡ ಉಂಟಾಗುವ ಅವಕಾಶವಿರುವುದು.


ಈ ರೀತಿ ಕಾರ್ಯದ ಮೇಲೆ ಹೋಗುತ್ತಿರುವವರನ್ನು ಕರೆದು ಅಡಚಣೆ ಮಾಡುವುದು ಅಪಶಕುನವಾಗಿ ತಿಳಿದು, ಅವರು ಆಂದೋಳನಕ್ಕೂ ಸಹ ಗುರಿಯಾಗುವ ಅವಕಾಶವಿದೆ. ಅದಕ್ಕೆಂದು ನಮ್ಮ ಹಿರಿಯರು ಇಟ್ಟಿರುವ ನಿಷೇಧಗಳನ್ನು ಚನ್ನಾಗಿ ಅರ್ಥ ಮಾಡಿಕೊಂಡು ಆಚರಿಸಬೇಕು. ಇಲ್ಲದಿದ್ದರೆ ಅವು ನಮ್ಮ ಮನೋವ್ಯಥೆಗೆ ಕಾರಣವಾಗುವವು. 



*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑