Tel: 7676775624 | Mail: info@yellowandred.in

Language: EN KAN

    Follow us :


ಸಿಎಎ, ಎನ್ಆರ್ಸಿ, ಎನ್ಆರ್ಪಿ ಕಾಯ್ದೆ ಹಿಂಪಡೆಯದಿದ್ದರೆ ನಿರಂತರ ಹೋರಾಟ ಪ್ರಗತಿಪರ ಸಂಘಟನೆಗಳ ಒಕ್ಕೂಟ

Posted Date: 09 Jan, 2020

ಸಿಎಎ, ಎನ್ಆರ್ಸಿ, ಎನ್ಆರ್ಪಿ ಕಾಯ್ದೆ ಹಿಂಪಡೆಯದಿದ್ದರೆ ನಿರಂತರ ಹೋರಾಟ ಪ್ರಗತಿಪರ ಸಂಘಟನೆಗಳ ಒಕ್ಕೂಟ

ಚನ್ನಪಟ್ಟಣ: ನಗರದ ಮದೀನ ಚೌಕ್‌ನ ಕಲ್ಯಾಣ ಮಂಟಪದಲ್ಲಿ ಪತ್ರಿಕಾಗೋಷ್ಠಿ ಯನ್ನು ಕರೆದಿದ್ದ ಪ್ರಗತಿ ಪರ ಸಂಘಟನೆಗಳ ಒಕ್ಕೂಟದ ಪ್ರಮುಖರು ಪೌರತ್ವ ತಿದ್ದು ಪಡಿಯ ವಿರುದ್ಧ ಪ್ರತಿಕ್ರಿಯಿಸಿ, ಬಿಜೆಪಿ ಹಾಗೂ ಆರ್‌ಎಸ್‌ಎಸ್ ಸಂಘಟನೆಯವರು ಸಮಾಜದಲ್ಲಿ ಕೋಮುವಾದಿ ವಿಚಾರಗಳನ್ನು ಬಿತ್ತುತ್ತಿದ್ದು, ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.


ಪ್ರಗತಿಪರ ಸಂಘಟನೆ ಗಳು, ಜಾತ್ಯತೀತ ಧೋರ ಣೆಯ ಚಿಂತಕರು, ಮುಸ್ಲಿಂ ಸಮುದಾಯದ ಎಲ್ಲ ಧರ್ಮ ಗುರುಗಳು, ಉಲೇಮಾಗಳು ಒಕ್ಕೂಟ ರಚಿಸಿ ಕೊಂಡು ಕಾರ್ಯಮಗ್ನ ರಾಗಿ ಬಿಜೆಪಿ ಮತ್ತು ಆರ್ ಎಸ್‌ಎಸ್ ಸಮಾಜ ದಲ್ಲಿ ಬಿತ್ತುತ್ತಿರುವ ಕೋಮವಾದಿ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸದಲ್ಲಿ ತಲ್ಲೀನವಾಗಿರುವುದಾಗಿ ಹೇಳಿದರು.


ಈ ಕಾಯಿದೆಯು ಸಂವಿಧಾನದಲ್ಲಿ ಪ್ರತಿಪಾಧಿಸಲಾದ ಮೌಲ್ಯಗಳಿಗೆ ವಿರುದ್ಧವಾಗಿದೆ. ಸಂವಿಧಾನದ ೧೪ನೇ ವಿಧಿಯನ್ನು ಉಲ್ಲಂಘನೆ ಮಾಡಿದಂತೆ ಆಗಿದೆ. ಇದು ಮುಸ್ಲಿಂರನ್ನು ಹತ್ತಿಕ್ಕುವ ದುರುದೇಶದಿಂದ ಮಾಡುತ್ತಿರುವ ತಿದ್ದುಪಡಿ ಯಾಗಿದೆ. ಕುಸಿಯುತ್ತಿರುವ ದೇಶದ ಆರ್ಥಿಕತೆ (ಜೆಡಿಪಿ), ನಿರುದ್ಯೋಗ ಸಮಸ್ಯೆ, ಇವುಗಳ ಬಗ್ಗೆ ಗಮನಕೊಡದೆ ಈ ವಿಷಯವನ್ನು ಪ್ರಸ್ತಾಪ ಮಾಡಿ, ಜನರ ಮನಸ್ಸನ್ನು ಬೇರೆಡೆಗೆ ಸೆಳೆಯುವ ಅಸ್ತ್ರ ಇದಾಗಿದೆ ಎಂದು ದೂರಿದರು.


ದೇಶದಾದ್ಯಂತ ಸಿಎಎ ಹಾಗೂ ಎನ್‌ಆರ್‌ಸಿ ವಿರುದ್ಧ ಪ್ರತಿಭಟನೆಗಳು ವ್ಯಾಪಕವಾಗಿ ಹಾಗೂ ನಿರಂತರವಾಗಿ ನಡೆಯುತ್ತಿವೆ. ಬಿಜೆಪಿ ರಾಜ್ಯ ಸರ್ಕಾರಗಳು ಇರುವ ಕಡೆ ಹಿಂಸಾಕೃತ್ಯಗಳು ನಡೆಯು ತ್ತಿದ್ದು, ಇದನ್ನು ಹತ್ತಿಕ್ಕಲು ಪ್ರಗತಿಪರ ಸಂಘಟನೆಗಳು ಏಕಮುಖವಾಗಬೇಕು. ಹಾಗಾಗಿ ಇಂದು ಒಗ್ಗೂಡಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ.


ಕೋಮವಾದಿ ಮನೋ ಭಾವದ ಬಿಜೆಪಿ ಸರ್ಕಾರದ ಶಕ್ತಿಯನ್ನು ಕುಂದಿಸದೇ ಹೋದರೆ, ಪ್ರಜಾಪ್ರಭುತ್ವಕ್ಕೆ ಮಾರಕವಾಗಲಿದೆ. ಇದರಿಂದ ದೇಶದ ಭವಿಷ್ಯ ಹಾಳಾಗಲಿದೆ ಎಂದು ಗೋಷ್ಠಿಯಲ್ಲಿ ಪಾಲ್ಗೊಂ ಡಿದ್ದ ಹಲವು ಪ್ರಗತಿಪರ ಸಂಘಟನೆಗಳ ಪ್ರಮುಖರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ನಾವೆಲ್ಲರೂ ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್‌ಅನ್ನು ಬಹಿಷ್ಕ ರಿಸುತ್ತಿದ್ದೇವೆ ಈ ಕಾನೂ ನುಗಳನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಪಡೆಯು ವವ ರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ, ಸಭೆಯಲ್ಲಿ ಚರ್ಚಿಸಿ ಪ್ರತಿಭಟನೆಯ ರೂಪುರೇಷೆಗಳನ್ನು ಸಿದ್ದಪಡಿಸಿ ಸಾಂವಿಧಾನದ ಚೌಕಟ್ಟಿನಲ್ಲಿ ನಿರಂತರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.


ಪತ್ರಿಕಾಗೋಷ್ಠಿಯಲ್ಲಿ ಸಿ ಪಿ ಶರತ್ ಚಂದ್ರ, ಕೋಟೆ ಸಿದ್ದರಾಮಯ್ಯ, ಲಿಯಾಖತ್ ಅಲಿಖಾನ್, ಸಯ್ಯದ್ ಅನ್ಸಾರ್ ಆಲಿ, ಮಹಮ್ಮದ್ ಆಲಿ, ರಘುರಾಮ್, ಲಿಯಾಖತ್ ಸೇರಿದಂತೆ ಅನೇಕ ಪ್ರಗತಿಪರ ಮುಖಂಡರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑