Tel: 7676775624 | Mail: info@yellowandred.in

Language: EN KAN

    Follow us :


ಎಸಿಬಿ ಬಲೆಗೆ ಬಿದ್ದ ಪಿಡಿಓ ಮಂಜುಳಾ ವಿರುದ್ಧ ಮಾಕಳಿ ಗ್ರಾ.ಪಂ ಉಪಾಧ್ಯಕ್ಷೆ ವರಲಕ್ಷ್ಮಮ್ಮ ರಿಂದ ದೂರುಗಳ ಸುರಿಮಳೆ

Posted date: 09 Jan, 2020

Powered by:     Yellow and Red

ಎಸಿಬಿ ಬಲೆಗೆ ಬಿದ್ದ ಪಿಡಿಓ ಮಂಜುಳಾ ವಿರುದ್ಧ ಮಾಕಳಿ ಗ್ರಾ.ಪಂ ಉಪಾಧ್ಯಕ್ಷೆ ವರಲಕ್ಷ್ಮಮ್ಮ ರಿಂದ ದೂರುಗಳ ಸುರಿಮಳೆ

ಚನ್ನಪಟ್ಟಣ:ಗುತ್ತಿಗೆದಾರರೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಎಸಿಬಿ ಬಲೆಗೆ ಬಿದ್ದ ಮುದಗೆರೆ ಪಿಡಿಓ ಮಂಜುಳಾರವರು ಈ ಹಿಂದೆ  ಮಾಕಳಿಯಲ್ಲಿ ಪಿಡಿಓ ಆಗಿದ್ದ ಮೂರು ವರ್ಷಗಳಲ್ಲಿ ಅನೇಕ ರೀತಿಯ ಅಕ್ರಮ ಹಾಗೂ ಹಣ ದುರುಪಯೋಗ ಪಡಿಸಿಕೊಂಡಿದ್ದು ಇದರ ಬಗ್ಗೆ ದಾಖಲೆ ಸಮೇತ ಮೇಲಿನ ಅಧಿಕಾರಿಗಳಿಗೆ ಲಿಖಿತ ದೂರು ನೀಡಿದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೆ ಅಧಿಕಾರಿಗಳು ಪಿಡಿಓ ಪರ ನಿಂತಿರುವುದರಿಂದ ಸಂಬಂಧಿಸಿದ ಅವರ ಮೇಲಾಧಿಕಾರಿಗಳು ತನಿಖೆ ಕೈಗೊಂಡು ಶೀಘ್ರವಾಗಿ ಕ್ರಮ ಕೈಗೊಳ್ಳಬೇಕೆಂದು ಮಾಕಳಿ ಗ್ರಾಮ ಪಂಚಾ ಯತಿ ಉಪಾಧ್ಯಕ್ಷೆ ವರಲಕ್ಷ್ಮಮ್ಮ ಎನ್.ಜಿ ಮತ್ತು ಅವರ ಪತಿ ಲೋಕೇಶ್ ಇಂದು ಆಗ್ರಹಿಸಿದರು.

ಅವರು ನಗರದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದರು.


ಮಂಜುಳಾ ಬಂದ ಮೇಲೆ ಪ್ರತಿ ತಿಂಗಳಲ್ಲಿ ಏಳರಿಂದ ಹದಿನೈದು ದಿನಗಳು ಮಾತ್ರ ಕಛೇರಿಗೆ ಬರುತ್ತಿದ್ದರು. ಆದರೆ ಹಾಜರಾತಿ ಪುಸ್ತಕದಲ್ಲಿ ಸಂಪೂರ್ಣ ಹಾಜರಾತಿ ಹಾಕಿಕೊಂಡಿದ್ದಾರೆ. ನರೇಗಾ ಕಾಮಗಾರಿಗಳನ್ನು ಅವರಿಗೆ ಇಷ್ಟ ಬಂದವರಿಗೆ ಕೊಟ್ಟು ಬಿಲ್ ಮಾಡಿಕೊಂಡಿರುವುದಲ್ಲದೆ ಸರ್ಕಾರದಿಂದ ಅನುಷ್ಟಾನಗೊಂಡಿರುವ ವಿವಿಧ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿ ಸುವಲ್ಲಿ ವಿಫಲರಾಗಿದ್ದರು.

ಗ್ರಾಮ ಪಂಚಾಯತಿ ಸದಸ್ಯರಿಗೆ ನೀಡಬೇಕಾಗಿದ್ದ ಗೌರವಧನವನ್ನು ನೀಡದೆ ಅದನ್ನು ದುರುಪಯೋಗ ಮಾಡಿ ಕೊಂಡಿದ್ದಾರೆ.


೨೦೧೫-೧೬ ನೇ ಸಾಲಿನ ಕಂದಾಯ ವಸೂಲಿ ಹಣ ವನ್ನು  ಅಂದಂದೇ ಜಮಾ ಮಾಡದೆ ತಿಂಗಳ ನಂತರ ಸ್ವಲ್ಪ ಸ್ವಲ್ಪವೇ ಜಮಾ ಮಾಡಿದ್ದಾರೆ, ಉಪಕರಗಳನ್ನು ಮಾತ್ರ ಜಮೆ ಮಾಡಿರುವುದಿಲ್ಲ.  ಸಾಮಾಜಿಕ ಲೆಕ್ಕ ಪರಿಶೋಧನಾ ವರದಿಯು  ಕಛೇರಿಯಲ್ಲಿ ಲಭ್ಯವಾಗದಂತೆ ನೋಡಿಕೊಂಡಿದ್ದಾರೆ. ನರೇಗಾ ಕೂಲಿದಾರರಿಗೂ  ಸಕಾಲದಲ್ಲಿ ಹಣ ನೀಡಿಲ್ಲ, ಕೆಲ ಕಾಮಗಾರಿಗಳನ್ನು ಅಂದಿನ ಶಾಸಕರ ಅಣತಿಯಂತೆ ಮಾಡಿದ್ದಾರೆ.

ವಸತಿ ಫಲಾನುಭವಿಗಳಿಗೆ ಹಣ ಬಿಡುಗಡೆ, ಗ್ರಾಮ ಸಭೆ, ಮಹಿಳಾ ಮತ್ತು ಮಕ್ಕಳ ಗ್ರಾಮಸಭೆ, ವಾಷಿ೯ಕ ಸಭೆ, ಅಜೆಂಡಾ, ಕರಪತ್ರ ಸಿಡಿಗಳನ್ನು ಮಾಡಲಾಗಿದ್ದು, ಇದರಲ್ಲಿ ಯಾವುದನ್ನೂ ಸಹ ಸರಿಯಾದ ಕ್ರಮದಲ್ಲಿ ಮಾಡಿರುವುದಿಲ್ಲ.  ೧೩ ಮತ್ತು ೧೪ ಹಣಕಾಸು ಯೋಜನೆ, ವರ್ಗವಾರು ಮತ್ತು ಅಂಗವಿಕಲರಿಗೆ ಮೀಸಲಾತಿ ನೀಡಿಲ್ಲ, ನಡಾವಳಿ ನಿಯಮಗಳನ್ನು ದಾಖಲಿಸಿಲ್ಲ, ಹೀಗೆ ಅನೇಕ ರೀತಿಯ ಅದ್ವಾನ್ಹ ಮಾಡಿದ್ದು, ಮುಖ್ಯಮಂತ್ರಿ ಗಳವರೆಗೆ ಎಲ್ಲರಿಗೂ ದೂರು ನೀಡಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಪಿಡಿಓ ಪರ ನಿಂತಿದ್ದಾರೆ. ಈಗಲೂ ಕ್ರಮ ಕೈಗೊಳ್ಳದಿ ದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಲೋಕೇಶ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜನವಾದಿ ಮಹಿಳಾ ಸಂಘ ಟನೆಯ ಪ್ರಮೀಳಾ, ಸಿದ್ದೇ ಗೌಡ, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑