Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೧೩೮: ಸ್ತ್ರೀಯರು ಪುರುಷರ ಬಲಗಡೆ ಕುಳಿತುಕೊಳ್ಳಬೇಕಾ ?

Posted date: 15 Jan, 2020

Powered by:     Yellow and Red

ತಾಳೆಯೋಲೆ ೧೩೮: ಸ್ತ್ರೀಯರು ಪುರುಷರ ಬಲಗಡೆ ಕುಳಿತುಕೊಳ್ಳಬೇಕಾ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ


ಸ್ತ್ರೀಯರು ಪುರುಷರ ಬಲಗಡೆ ಕುಳಿತುಕೊಳ್ಳಬೇಕಾ ?


ನಮ್ಮ ಋಷಿಗಳು ಸ್ತ್ರೀಯರು ತಮ್ಮ ಪತಿಯ ಬಲಭಾಗದಲ್ಲಿ ಕುಳಿತುಕೊಳ್ಳಬೇಕೆಂದು ಹೇಳಿದ್ದಾರೆ. ಯಾವುದಾದರೂ ಶುಭ ಕಾರ್ಯವೂ ಅಥವಾ ವಿವಾಹ ದಲ್ಲಿಯೋ ಸ್ತ್ರೀಯನ್ನು ಬಲಗಡೆಗೆ ಕೂರಿಸುತ್ತಾರೆ. ಮದುವೆಯ ಶಾಸ್ತ್ರಗಳಲ್ಲಿ ಸ್ತ್ರೀಯನ್ನು ಬಲಗಡೆಗೆ ಕೂರಿಸುತ್ತಾರೆ. *ಯಾಕೆಂದರೆ ಸ್ತ್ರೀ ಮದುವೆಯಾದ ನಂತರ ಗಂಡನಿಗೆ ಬಲಭುಜ ವಾಗಿ ಸಂಸಾರದಲ್ಲಿ ನೆರವಾಗಬೇಕು, ಮತ್ತು ಸಮವಾಗಿ ಸಂಸಾರವನ್ನು ತೂಗಿಸಬೇಕೆನ್ನುವ ಅರ್ಥದಲ್ಲಿ ಕೂರಿಸುವರು.*


ಹೋಮ ಹವನ ಮುಂತಾದ ಪೂಜೆಗಳಲ್ಲಿ ಹೆಂಡತಿಯು ಗಂಡನ ಬಲಭಾಗದಲ್ಲಿ ಸಂಕಲ್ಪಕ್ಕೆ, ರಕ್ಷೆಗೆ ಮತ್ತು ಮುಂತಾದುವಕ್ಕೆ ಶ್ರೇಷ್ಠವಾದದ್ದು, ಬಲಭಾಗದ ಶಕ್ತಿಗೆ ಎಡಭಾಗದ ಸಮತೋಲನಕ್ಕೆ ಸಂಬಂಧವಿದೆ ಎಂಬ ನಂಬಿಕೆಯನ್ನು ಬಲಪಡಿಸುತ್ತದೆ. ಆದರೆ ಈ ವಿಷಯವನ್ನು ಅನೇಕ ಪರಿಶೋಧಕರು ಒಪ್ಪಿಕೊಳ್ಳಲಿಲ್ಲ. ಆದರೆ ಈ ಮಧ್ಯಕಾಲದಲ್ಲಿ ಕೆಲವು ವಿಷಯಗಳು ಬೆಳಕಿಗೆ ಬಂದವು. *ಸ್ತ್ರೀ-ಪುರುಷರಲ್ಲಿ ಎರಡು ತತ್ವಗಳನ್ನು ಪ್ರತಿಬಿಂಬಿಸುವ ಶಕ್ತಿ ಇದೆ.* ಆದ್ದರಿಂದ ಕೆಲವೊಂದು ಬಾರಿ ಪುರುಷನ ಎಡ ಭಾಗದಲ್ಲಿ ಸ್ತ್ರೀ ತತ್ವವನ್ನು ಪ್ರತಿಬಿಂಬಿಸುತ್ತದೆ. ಎಂದು ಹಾಗೆಯೇ ಸ್ತ್ರೀ ಬಲಭಾಗದಲ್ಲಿ ತತ್ವವನ್ನು ಹೊಂದಿರುತ್ತದೆ ಎಂದು ತಿಳಿಸಲಾಗಿದೆ.


ಈ ವಿಷಯವನ್ನು ಯಾವತ್ತೂ ಗ್ರಹಿಸಿದ ನಮ್ಮ ಹಿರಿಯರು ಸ್ತ್ರೀ ಪುರುಷನ ಬಲಭಾಗದಲ್ಲಿ ಕುಳಿತುಕೊಳ್ಳುವಂತೆ ಹೇಳಲಾಗಿದೆ. ಆದ್ದರಿಂದ ಇದನ್ನು ಆಚರಿಸಿ ನಮ್ಮ ಸನಾತನ ಧರ್ಮವನ್ನು ಗೌರವಿಸಬಹುದಾಗಿದೆ.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑