Tel: 7676775624 | Mail: info@yellowandred.in

Language: EN KAN

    Follow us :


ಅಗ್ರಿಗೋಲ್ಡ್ ವಸ್ತುಸ್ಥಿತಿ ವರದಿಗೆ ಹೈಕೋರ್ಟ್ ಸೂಚನೆ

Posted date: 20 Jan, 2020

Powered by:     Yellow and Red

ಅಗ್ರಿಗೋಲ್ಡ್ ವಸ್ತುಸ್ಥಿತಿ ವರದಿಗೆ ಹೈಕೋರ್ಟ್ ಸೂಚನೆ

ಬೆಂಗಳೂರು: ಅಗ್ರಿಗೋಲ್ಡ್ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯ ಸ್ಥಿರ ಮತ್ತು ಚರಾಸ್ತಿ ಮಾರಾಟಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರವು ಹೈಕೋರ್ಟ್ ಗೆ ತಿಳಿಸಿದೆ.


ಈ ಕುರಿತಂತೆ *ಮಂಗಳೂರಿನ ಗ್ರಾಹಕರು ಮತ್ತು ಏಜೆಂಟರ ಕಲ್ಯಾಣ ಒಕ್ಕೂಟ* ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು *ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್ ಓಕಾ* ನೇತೃತ್ವದ ವಿಭಾಗೀಯ ಪೀಠ ಮಂಗಳವಾರ ವಿಚಾರಣೆ ನಡೆಸಿತು. ಅರ್ಜಿದಾರರ ಪರ ವಾದ ಮಂಡಿಸಿದ *ವಕೀಲ ಬಿ ಎಸ್ ಸಚಿನ್* ಸರ್ಕಾರ ವಶಪಡಿಸಿಕೊಂಡಿರುವ ಆಸ್ತಿಯನ್ನು ಶೀಘ್ರವೇ ಮಾರಾಟ ಮಾಡಿ ಹಣ ಮರುಪಾವತಿಗೆ ನಿರ್ದೇಶಿಸಬೇಕು ಎಂದು ಕೋರಿದರು.


ಹಿನ್ನೆಲೆ; ಆಂಧ್ರಪ್ರದೇಶ ಮೂಲದ ಅಗ್ರಿಗೋಲ್ಡ್ ಕಂಪನಿ ದಕ್ಷಿಣ ಭಾರತದಲ್ಲಿ ಏಜೆಂಟರ ಮೂಲಕ ಗ್ರಾಹಕರ ಬಳಿ ಕೋಟ್ಯಾಂತರ ರೂಪಾಯಿ ಹಣವನ್ನು ಕಟ್ಟಿಸಿಕೊಂಡು ನಂತರ ಹಲವು ಕಾರಣಗಳ ನೆಪವೊಡ್ಡಿ ಗ್ರಾಹಕರಿಗೆ ಹಣ ನೀಡದೆ ವಂಚಿಸಿತ್ತು. ಇದರಿಂದ ಗ್ರಾಹಕರು ಮತ್ತು ಏಜೆಂಟರ ನಡುವೆ ಮನಸ್ತಾಪ ಉಂಟಾಗಿದ್ದು ಕೆಲವು ಆತ್ಮಹತ್ಯೆ ಮಾಡಿಕೊಂಡ ವರದಿಗಳು ಪ್ರಕಟವಾಗಿದ್ದವು. ಇದರಿಂದ ನೊಂದ ಏಜೆಂಟರು ಒಕ್ಕೂಟ ರಚಿಸಿಕೊಂಡು ದಾವೆ ಹೂಡಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑