Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೧೪೨: ಹಗಲಿನಲ್ಲಿ ಸ್ತ್ರೀಯರು, ರಾತ್ರಿಯಲ್ಲಿ ನಾಯಿಗಳು ನಿದ್ರೆ ಮಾಡಬಾರದೇಕೆ ?

Posted date: 21 Jan, 2020

Powered by:     Yellow and Red

ತಾಳೆಯೋಲೆ ೧೪೨: ಹಗಲಿನಲ್ಲಿ ಸ್ತ್ರೀಯರು, ರಾತ್ರಿಯಲ್ಲಿ ನಾಯಿಗಳು ನಿದ್ರೆ ಮಾಡಬಾರದೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


ಹಗಲಿನಲ್ಲಿ ಸ್ತ್ರೀಯರು, ರಾತ್ರಿಯಲ್ಲಿ ನಾಯಿಗಳು ನಿದ್ರೆ ಮಾಡಬಾರದೇಕೆ ?


ಇದು ನೈತಿಕತೆಗೆ ಸಂಬಂಧಿಸಿದ ವಿಷಯ. ನಾಯಿ ರಾತ್ರಿ ಸಮಯದಲ್ಲಿ ಎಚ್ಚರಿಕೆಯಾಗಿದ್ದು ತನ್ನ ಯಜಮಾನನ ಮನೆಗೆ ಕಳ್ಳರಾಗಲಿ, ದುರ್ಮಾರ್ಗಿಗಳಾಗಲಿ ಪ್ರವೇಶಿಸದೆ ಇರುವ ರೀತಿಯಲ್ಲಿ ಮನೆಗೆ ಕಾವಲು ಕಾಯುತ್ತದೆ. ಹಾಗೆಯೇ ಹಗಲಿನ ಸಮಯದಲ್ಲಿ ಸ್ತ್ರೀಯರು ಹೇಗೆಂದರೆ ಹಾಗೆ ನಿದ್ರಿಸದೆ ಎಚ್ಚರಿಕೆಯಿಂದಿರಬೇಕು.


ಮನೆಗೆ ಅತಿಥಿಗಳು ಬಂದಾಗ, ಮನೆಗೆ ಬೇಕಾಗುವ ಸರಕನ್ನು ಮಾರುವವರು ಬಂದಾಗ ನೋಡಿಕೊಳ್ಳಬೇಕಾಗುತ್ತದೆ. ಮನೆಯಲ್ಲಿ ಪುರುಷರು ಯಾರು ಇಲ್ಲದ ಸಮಯದಲ್ಲಿ ಸ್ತ್ರೀ ಬಹಳ ಎಚ್ಚರಿಕೆಯಿಂದ ಇರದೆ ಹಾಯಾಗಿ ನಿದ್ರೆಯಲ್ಲಿ ಜಾರಿದರೆ ಕಳ್ಳರು ಒಳನುಸುಳುವ ಅವಕಾಶ ಇರುತ್ತದೆ. ವೀಕ್ಷಕರಾಗಿ ಬರುವವರು ಮತ್ತು ಕೆಲವರು ಚಿಕ್ಕ ಕಳ್ಳರು ಸಿಕ್ಕಿದ್ದನ್ನು ಎತ್ತಿಕೊಂಡು ಓಡಿಹೋಗುವ ಅವಕಾಶವಿದೆ.


ಆದ್ದರಿಂದ ಸ್ತ್ರೀಯರು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಹಗಲಿನಲ್ಲಿ ನಿದ್ದೆ ಮಾಡಬಾರದೆಂಬ ಹಿತವನ್ನು ಹೇಳಲಾಗಿದೆ. ರಾತ್ರಿ ಸಮಯದಲ್ಲಿ ನಿದ್ರಿಸುವ ನಾಯಿಯೂ ಸಹ ಯಜಮಾನನಿಗೆ ಉಪಯೋಗಕರವಾಗಿರದು. ಆದ್ದರಿಂದ ಅದು ಸ್ತ್ರೀ ಆದರೂ ಪುರುಷನಾದರೂ ಇಲ್ಲವೇ ಸಾಕಿರುವ ಯಾವ ಪ್ರಾಣಿಯೇ ಆದರೂ ಧರ್ಮವನ್ನು ಮೀರುವುದು ಒಳ್ಳೆಯದಲ್ಲ.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑