Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೧೪೩: ಮಧು ಮಾಷ್ಠಿಕವನ್ನು ತಿಂದರೆ ಕೋಗಿಲೆಯ ಕಂಠ ನಮ್ಮದಾಗುವುದೇ ?

Posted date: 22 Jan, 2020

Powered by:     Yellow and Red

ತಾಳೆಯೋಲೆ ೧೪೩: ಮಧು ಮಾಷ್ಠಿಕವನ್ನು ತಿಂದರೆ ಕೋಗಿಲೆಯ ಕಂಠ ನಮ್ಮದಾಗುವುದೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ


ಮಧು ಮಾಷ್ಠಿಕವನ್ನು ತಿಂದರೆ ಕೋಗಿಲೆಯ ಕಂಠ ನಮ್ಮದಾಗುವುದೇ ?


ಮಧು ಮಾಷ್ಠಿಕ ಇಲ್ಲವೇ ಯಷ್ಠಿ ಮಧುಕ ಎನ್ನುವ ಗಿಡದ ಬೇರನ್ನು ತಿಂದರೆ ಕೋಗಿಲೆಗಳು ಹತ್ತಿರಕ್ಕೆ ಬರುವವು (ಕೋಗಿಲೆಯ ಸಿರಿ ಕಂಠ ನಮ್ಮದಾಗುವುದು) ಎಂದು ನಂಬುತ್ತಿದ್ದರು. ವಾಸ್ತವಕ್ಕೆ ಗುರುತಾಗಿ ಮಾತ್ರವೇ ಈ ರೀತಿ ಚಮತ್ಕಾರವಾಗಿ ಹೇಳಲ್ಪಟ್ಟಿದೆ. ಮಧು ಮಾಷ್ಠಿಕವನ್ನು ತಿಂದರೆ ಒಬ್ಬ ವ್ಯಕ್ತಿ ಕೋಗಿಲೆಯಂತಹ ಮಧುರವಾದ ಸ್ವರವನ್ನು ಹೊಂದುತ್ತಾನೆ ಎಂದು ಹೇಳಲ್ಪಟ್ಟಿದೆ. ನಿಜವಾಗಿ ನಮ್ಮ ಸುತ್ತಲು ಕೋಗಿಲೆಗಳು ಬರುವುದಿಲ್ಲ.


ಮಧುರವಾದ ಕಂಠ ಧ್ವನಿಯನ್ನು ಸಾಧಿಸುವುದಕ್ಕೆ ಮಧು ಮಾಷ್ಠಿಕವನ್ನು ತಿನ್ನಬೇಕೆಂದು ಆಯುರ್ವೇದ ಶಾಸ್ತ್ರವು ನಂಬಿಕೆಯನ್ನು ದೃಢೀಕರಿಸುತ್ತದೆ. ಕಠಿಣ ಧ್ವನಿ ಇರುವ ಗಂಟಲಿನವರು ಈ ಔಷಧಿಯನ್ನು ಸೇವಿಸಿದರೆ ಕಿವಿಗಳಿಗೆ ಇಂಪಾದ ಧ್ವನಿಯನ್ನು ಗಂಟಲಿಗೆ ಪ್ರಸಾಧಿಸುತ್ತದೆ. ಆಯುರ್ವೇದ ಶಾಸ್ತ್ರದ ವಚನ ಪ್ರಕಾರ ಮೊದಲು ಮಧು ಮಾಷ್ಠಿಕವನ್ನು ತಿನ್ನಬೇಕೆಂದು ಆಯುರ್ವೇದ ಶಾಸ್ತ್ರವು ನಂಬಿಕೆಯನ್ನು ದೃಢೀಕರಿಸುತ್ತದೆ.


ಆಯುರ್ವೇದ ಶಾಸ್ತ್ರದ ವಚನ ಪ್ರಕಾರ ಮೊದಲು ಮಧು ಮಾಷ್ಠಿಕವನ್ನು ಚೆನ್ನಾಗಿ ಒಣಗಿಸಿ ಪುಡಿಯಾಗಿ ನುಣ್ಣಗೆ ಅರೆದು, ಪುಡಿಯನ್ನು ದಿನವೂ ಸ್ವಲ್ಪಸ್ವಲ್ಪವೇ ತೆಗೆದುಕೊಳ್ಳಬೇಕು. ಕ್ರಮೇಪಿ ಸ್ವರದಲ್ಲಿ ಮಾಧುರ್ಯವೂ ತುಂಬಿರುತ್ತದೆ. ಆಗ ಮಾತನಾಡಿದ ಮಾತು ಕಂಚಿನ ರೀತಿಯ ಶಬ್ದ, ಕೋಗಿಲೆ ಹಾಡಿದ ಹಾಗೆ ಇರುತ್ತದೆ. ಮಧು ಮಾಷ್ಠಿಕವನ್ನು ಉಪಯೋಗಿಸುವುದರಿಂದ ಹೇಳಲಾಗದಷ್ಟು ಬದಲಾವಣೆ ಬರುತ್ತದೆಂಬುದು ಅಂಗೈಯಲ್ಲಿ ವೈಕುಂಠವನ್ನು ತೋರಿಸುವಷ್ಟು ನಂಬಶಕ್ಯವ

ಲ್ಲದಿದ್ದರೂ ಅಷ್ಟೋ ಇಷ್ಟೋ ಮಧುರವಾದ ಧ್ವನಿ ಯನ್ನು ಪ್ರಾಪ್ತಿಸುತ್ತದೆ ಎನ್ನುವುದು ವಾಸ್ತವ. ಈ ಔಷಧಿಯಲ್ಲಿ ಅಂತಹ ಗುಣ ಇರುವುದು ನಮಗೆ ತಿಳಿಯುತ್ತದೆ.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑