Tel: 7676775624 | Mail: info@yellowandred.in

Language: EN KAN

    Follow us :


ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ

Posted date: 29 Jan, 2020

Powered by:     Yellow and Red

ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ

ಚನ್ನಪಟ್ಟಣ:. ಬಿಜೆಪಿ ಪಕ್ಷದ ನಾಯಕರು ಸುಳ್ಳನ್ನೇ ಹತ್ತು ಬಾರಿ ಹೇಳಿ ಅದನ್ನೇ ನಿಜ ಎಂದು ನಂಬಿಸುವುದರಲ್ಲಿ ನಿಸ್ಸೀಮರಾಗಿದ್ದಾರೆ ಎಂದು ಬಿಜೆಪಿ ನಾಯಕರಾದ ಸಿ ಟಿ ರವಿ, ಯತ್ನಾಳ್ ಮತ್ತು ಪ್ರತಾಪ್ ಸಿಂಹ ರವರ ವಿರುದ್ಧ ವಾಗ್ದಾಳಿ ನಡೆಸಿದರು.

ಅವರು ಎರಡನೇ ದಿನದ ಜನ ಸಂಪರ್ಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.


ಸಿದ್ದರಾಮಯ್ಯರ ಬಾದಾಮಿ ಕ್ಷೇತ್ರಕ್ಕೆ ಮೈತ್ರಿ ಸರ್ಕಾರದಲ್ಲಿ  1,500 ಕೋಟಿ ಅನುದಾನ ನೀಡಿದ್ದೇನೆ,

ಕಾಂಗ್ರೇಸ್ ಶಾಸಕರ ಕ್ಷೇತ್ರಗಳಿಗೆ ಸುಮಾರು19 ಸಾವಿರ ಕೋಟಿ ಅನುದಾನವನ್ನು ನೀಡಿದ್ದೇನೆ. ಆದರೆ ಎಲ್ಲಾ ಅನುದಾನವು ಕೂಡಾ ಬಿಜೆಪಿ ಸರ್ಕಾರದಲ್ಲಿ ಸ್ಥಗಿತವಾಗಿದೆಯಾದರೂ,

ಸಿದ್ದರಾಮಯ್ಯರ ಕ್ಷೇತ್ರಕ್ಕೆ ನೀಡಿದ್ದ ಅನುದಾನಕ್ಕೆ ಈಗ ಕ್ಲಿಯರೆನ್ಸ್ ಕೊಟ್ಟಿರಬಹುದು ಅಷ್ಟೇ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.


ಈಗಿನ ಬಿಜೆಪಿ ಸರ್ಕಾರ ಬಿಜೆಪಿ ಕ್ಷೇತ್ರಗಳಿಗೆ ಮಾತ್ರ ಹೆಚ್ಚಿನ ಆದ್ಯತೆ ಕೊಟ್ಟಿಕೊಂಡು ಹೋಗ್ತಿದ್ದಾರೆ.

ಕೆಲವು ಜೆಡಿ ಎಸ್- ಕಾಂಗ್ರೇಸ್ ಕ್ಷೇತ್ರಗಳ ಅನುದಾನವನ್ನು ಬೇರೆ ಕಡೆ ವರ್ಗಾವಣೆ ಮಾಡಿಕೊಂಡಿದ್ದು ಇದೇ ದೊಡ್ಡ ಸಮಸ್ಯೆಯಾಗಿದೆ ಎಂದರು.


ರಾಜಕಾರಣದಲ್ಲಿ ಯಾರ್ಯಾರು ಒಳ ಹಾಗೂ ಒಪ್ಪಂದಗಳನ್ನು ಯಾವ ರೀತಿ ಮಾಡಿಕೊಂಡಿದ್ದಾರೋ ಗೊತ್ತಿಲ್ಲ.

ಇದರ ಬಗ್ಗೆ ಚರ್ಚೆ ಮಾಡಿದ್ರೆ ಅದಕ್ಕೆ ಬೇರೆ ಬಣ್ಣ ಕಟ್ತಾರೆ. ಒಳ, ಹೊರ ಒಪ್ಪಂದಗಳಿಂದ ರಾಜಕೀಯದಲ್ಲಿ ಬದುಕ್ತೇವೆ ಎಂದರೆ ಬಹಳ ದಿನ ಅದು ನಡೆಯಲ್ಲ. ಅದನ್ನು ಅವರು ಮನಗಾಣಬೇಕು ಎಂದರು.


ಬಿಜೆಪಿ ಯವರು ಸುಳ್ಳು ಸುಳ್ಳೇ ಹೇಳುತ್ತಿದ್ದು ಎಫ್ ಬಿ ಐ ನಿಂದ ಹಣ ಬಂದಿರುವುದು ಕೇಂದ್ರಕ್ಕೆ ಮಾಹಿತಿಯಿದ್ದರೆ ತಕ್ಷಣ ಕ್ರಮ ತೆಗೆದುಕೊಳ್ಳಲಿ, ಅದು ಬಿಟ್ಟು ಉಡಾಫೆಯಾಗಿ ಮಾತನಾಡಬಾರದು.

ಎಲ್ಲ ಇಲಾಖೆಗಳು ಅವರ ಕೈನಲ್ಲೆ ಇದ್ದರೂ ಯಾಕೆ ಕ್ರಮ ಕೈಗೊಳ್ಳುವುದಿಲ್ಲ.

ಕೇಂದ್ರ , ರಾಜ್ಯ ಸರ್ಕಾರಗಳೆರಡು ಜೊತೆಗೂಡಿ ಕಪ್ಪುಹಣವೋ ಮತ್ತೊಂದು ಹಣವೇ ಇರಲಿ,

ಸರ್ಕಾರದ ಅಸ್ಥಿರತೆಗೆ ಕಳ್ಳದಾರಿಯ ಹಣ ಬಂದಿದ್ರೆ ಅಂತಹವರ ಬಗ್ಗೆ ತಕ್ಷಣ ಕ್ರಮ ತೆಗೆದುಕೊಳ್ಳಲಿ

ಬರೀ ಹೇಳಿಕೆ ಕೊಟ್ಟು ಎಲ್ಲಿಂದಲೋ ಹಣ ಬರ್ತಿದೆ ಎನ್ನುವುದು ರಾಜಕೀಯ ಹೇಳಿಕೆಗಳಾಗಬಾರದು.


ನಾನು ಬಿಜೆಪಿಯವರ ಮೇಲೆ ಯಾಕೆ ಆಕ್ರೋಶ ವ್ಯಕ್ತಪಡಿಸಲಿ, ಜನರ ಸಮಸ್ಯೆಗಳಿಗೆ ಸ್ಪಂದಿಸುವುದರಲ್ಲಿ ಇವರ ನಡುವಳಿಕೆ, ಶಾಂತಿ ವಾತಾವರಣ ಕದಡುವುದನ್ನ ಸರಿಪಡಿಸಿಕೊಳ್ಳಿ ಎನ್ನುತ್ತೇನೆ. ಅದಕ್ಕೆ ನನ್ನ ಮೇಲೆ ಇಲ್ಲ ಸಲ್ಲದ ಅಸಹ್ಯಕರ ರೀತಿಯಲ್ಲಿ ಕೀಳು ಅಭಿರುಚಿಯ ವಿಷಯಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಬಿಡುವ ಮೂಲಕ ವಿಕೃತ ಸಂತೋಷ ಪಡ್ತಿದ್ದಾರೆ

ನಾನು ಇದೆಲ್ಲವನ್ನ ಕೂಲಾಗಿಯೇ ತೆಗೆದುಕೊಂಡಿದ್ದೇನೆ. ಯಾವುದನ್ನು ಆಕ್ರೋಶದಲ್ಲಿ ಹೇಳಲ್ಲ. ಕೂಲಾಗಿಯೇ ತೆಗೆದುಕೊಂಡಿದ್ದೇನೆ.

ನನ್ನಷ್ಟು ತಾಳ್ಮೆಯಿಂದ ರಾಜಕೀಯದಲ್ಲಿ ಇರುವವನು ಮತ್ತೊಬ್ಬನಿಲ್ಲ ಎಂದು ಸಿ ಟಿ ರವಿ ವಿರುದ್ಧ ಕೂಲಾಗಿ ಪ್ರತಿಕ್ರಿಯಿಸಿದರು.


ಬಿಜೆಪಿ ನಾಯಕರ ಈ ರೀತಿಯ ಹೇಳಿಕೆಗಳು ಸಮಾಜವನ್ನ ಹಾಳುಮಾಡುವಂತಹ ಕೆಲಸ ಮಾಡುತ್ತಿದ್ದಾರೆ.

ಸ್ವಾತಂತ್ರ್ಯ ತರಬೇಕಾದ್ರೆ ಹೋರಾಟ ಮಾಡಿದ ವ್ಯಕ್ತಿಗಳು ಏನೇನು ತೀರ್ಮಾನ ಮಾಡಿದ್ದಾರೆ

ದೇಶದ ಮುಂದಿನ ಭದ್ರ ಬುನಾದಿಗೆ ತೀರ್ಮಾನ ಮಾಡಿದ್ದಾರೆ, ಹುಟ್ಟಿಲ್ಲದವೆಲ್ಲ ಇಂದು ಮಾತನಾಡ್ತಾವೆ, ಸ್ವಾತಂತ್ರ್ಯ ಬಂದಾಗ ಇವರೆಲ್ಲರೂ ಹುಟ್ಟೇ ಇರಲಿಲ್ಲ. ಇವಕ್ಕೆಲ್ಲ ಉತ್ತರ ಕೊಡಲಿಕ್ಕೆ ಆಗುತ್ತಾ..? ಎಂದು ಬಸವರಾಜ ಯತ್ನಾಳ ರಿಗೆ ತಿರುಗೇಟು ನೀಡಿದರು.


ಎಷ್ಟು ಹಣ ಕೊಟ್ಟಿದ್ದೇನೆ, ಎಷ್ಟು ಮನೆ ಕಟ್ಟಿಕೊಟ್ಟಿದ್ದೇನೆ, ಹೋಗಿ ನೋಡಲಿ

ಪ್ರತಾಪ್ ಸಿಂಹನ ಕೈಲಿ ಹೇಳಿಸಿಕೊಳ್ಳಬೇಕಾ ನಾನು !

ಬರವಣಿಗೆಯಲ್ಲ ಮುಖ್ಯ, ಜನಗಳ ಭಾವನೆಗಳಿಗೆ ಯಾವ ರೀತಿ ಸ್ಪಂದಿಸಬೇಕು ಅನ್ನೋದನ್ನ ಅಳವಡಿಸಿಕೊಂಡಿರುವವನು ನಾನು

ರೈಟಿಂಗ್ ನಲ್ಲಿ, ಟ್ವೀಟ್ ಮೂಲಕ  ಕೆಟ್ಟ ಭಾವನೆ ವ್ಯಕ್ತಪಡಿಸುವವನಲ್ಲ ನಾನು

ಕೊಡಗು ಜಿಲ್ಲೆಗೆ ನಾನು ಅವತ್ತು ಕೊಟ್ಟಂತಹ ಸಮಸ್ಯೆಗಳಿಗೆ ಪರಿಹಾರವನ್ನು ಗಮನದಲ್ಲಿಟ್ಟುಕೊಂಡ ಮಾತನಾಡಿ.

ನಿಮಗೆ ಯೋಗ್ಯತೆಯಿದ್ದರೆ ಸಿಎಂ, ಪಿಎಂ ಗೆ ಹೇಳಿ ಜನರ ಸಮಸ್ಯೆ ಬಗೆಹರಿಸಿ ಎಂದು ಸಂಸದ ಪ್ರತಾಪ ಸಿಂಹ ರಿಗೆ ತಿರುಗೇಟು ನೀಡಿದರು.


ತಿಟ್ಟಮಾರನಹಳ್ಳಿ ಸೇರಿದಂತೆ ಬೇವೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಜನ ಸಂಪರ್ಕ ಸಭೆ ನಡೆಸಿ ಅಹವಾಲುಗಳನ್ನು ಸ್ವೀಕರಿಸಿದರು. ಸ್ಥಳೀಯ ಸಣ್ಣ ಪುಟ್ಟ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸುವಂತೆ ಸ್ಥಳದಲ್ಲೇ ಇದ್ದ ಅಧಿಕಾರಿಗಳಿಗೆ ಸೂಚಿಸಿದರು.

ಸ್ಥಳೀಯ ಜೆಡಿಎಸ್ ನಾಯಕರು ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑