Tel: 7676775624 | Mail: info@yellowandred.in

Language: EN KAN

    Follow us :


ಚನ್ನಪಟ್ಟಣದಲ್ಲಿ ಕರೋನಾ ಶಂಕೆ, ನಿಗಾ ಘಟಕದಲ್ಲಿ ಜ್ವರ ಪೀಡಿತೆ, ಆತಂಕವಿಲ್ಲ

Posted date: 16 Mar, 2020

Powered by:     Yellow and Red

ಚನ್ನಪಟ್ಟಣದಲ್ಲಿ ಕರೋನಾ ಶಂಕೆ, ನಿಗಾ ಘಟಕದಲ್ಲಿ ಜ್ವರ ಪೀಡಿತೆ, ಆತಂಕವಿಲ್ಲ

ರಾಮನಗರ: ರಾಮನಗರ ಜಿಲ್ಲೆಯ ಚನ್ನಪಟ್ಟಣ ನಗರದ ಯುವತಿಯೋರ್ವಳಿಗೆ ಮೂರು ದಿನದಿಂದ ಸತತ ಕೆಮ್ಮು ಇದ್ದು ಅದನ್ನು ದೃಢಪಡಿಸಿಕೊಳ್ಳುವುದಕ್ಕೋಷ್ಕರ ಪೋಷಕರು ನೇರವಾಗಿ ಜಿಲ್ಲಾ ವೈದ್ಯಾಧಿಕಾರಿ ನಿರಂಜನ್ ರವರಿಗೆ ಕರೆ ಮಾಡಿ ಪರೀಕ್ಷೆಗೊಳಪಟ್ಟಿರುವುದಾಗಿ ಮಾಹಿತಿ ಲಭ್ಯವಾಗಿದೆ.


ನಗರದ ಉದ್ಯಮಿಯೊಬ್ಬರ ಪುತ್ರಿಯೊಬ್ಬರು ಉನ್ನತ ವ್ಯಾಸಂಗಕ್ಕಾಗಿ ಜರ್ಮನ್ ದೇಶದಲ್ಲಿದ್ದು ಕೆಲ ದಿನಗಳ ಹಿಂದೆ ನಗರಕ್ಕೆ ಆಗಮಿಸಿದ್ದರು. ಮೂರು ದಿನದಿಂದ ಸ್ವಲ್ಪ ಜ್ವರ ಮತ್ತು ಕೆಮ್ಮಿನಿಂದ ಬಳಲುತ್ಥಿದ್ದ ವಿದ್ಯಾರ್ಥಿನಿಯೂ ತನ್ನ ತಂದೆ ಮೂಲಕ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಕರೆ ಮಾಡಿ ಪರೀಕ್ಷೆ ಮಾಡಿಸಿಕೊಂಡಿದ್ದು ಕರೋನಾ ಬಗ್ಗೆ ಸ್ಪಷ್ಟ ಮಾಹಿತಿ ಇನ್ನೂ ದೃಢಪಟ್ಟಿಲ್ಲ.


ವಿದ್ಯಾರ್ಥಿನಿಯ ಜೊತೆಗೆ ತಂದೆ ಮತ್ತು ತಾಯಿಯನ್ನು ಪರೀಕ್ಷೆಗೊಳಪಡಿಸಿರುವ ವೈದ್ಯರ ತಂಡ ಕಫ ಮತ್ತು ರಕ್ತದ ಮಾದರಿಯನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಿದ್ದು ಫಲಿತಾಂಶ ಬರಲು ಎರಡು ದಿನ ಬೇಕಾಗಿರುವುದರಿಂದ ಅಲ್ಲಿಯ ತನಕ ನಿಗಾ ಘಟಕದಲ್ಲಿ ಇರಿಸಲಾಗುವುದು ಎಂದು ಉನ್ನತ ಮೂಲಗಳು ತಿಳಿಸಿವೆ.


ನಗರದ ಮತ್ತೋರ್ವ ವ್ಯಕ್ತಿಯು ಸತತ ಕೆಮ್ಮು ಮತ್ತು ಜ್ವರದಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಆ ವ್ಯಕ್ತಿಗೆ ಯಾವುದೇ ಸೋಂಕು ತಗುಲಿಲ್ಲ ಎಂಬುದು ದೃಢಪಟ್ಟಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.


(ಸೋಂಕು ದೃಢ ಪಡದ ಕಾರಣ ಹಾಗೂ ಮುನ್ನೆಚ್ಚರಿಕೆಯ ಕ್ರಮವಾಗಿ ಯಾವುದೇ ರೋಗಿಯ ಪೂರ್ವಾಪರವನ್ನು ಬಹಿರಂಗಪಡಿಸಲಾಗುವುದಿಲ್ಲ.)


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑