Tel: 7676775624 | Mail: info@yellowandred.in

Language: EN KAN

    Follow us :


ರಾಮನಗರ ಜಿಲ್ಲೆಯಲ್ಲಿ ಕರೋನಾ ಫೇಲ್, ಶಂಕಿತರು ಪಾಸ್ ಜಿಲ್ಲಾಧಿಕಾರಿ

Posted date: 18 Mar, 2020

Powered by:     Yellow and Red

ರಾಮನಗರ ಜಿಲ್ಲೆಯಲ್ಲಿ ಕರೋನಾ ಫೇಲ್, ಶಂಕಿತರು ಪಾಸ್ ಜಿಲ್ಲಾಧಿಕಾರಿ

ರಾಮನಗರ: ಶಂಕಿತರು ಪಾಸ್, ಕರೋನಾ ಫೇಲ್

ಜಿಲ್ಲಾ ಆಸ್ಪತ್ರೆಯಲ್ಲಿ ಕರೋನಾ ವೈರಸ್ ನಿಂದ ದಾಖಲಾಗಿದ್ದ ಇಬ್ಬರು ರೋಗಿಗಳ ವರದಿ ಬಂದಿದ್ದು ಆ ಇಬ್ಬರೂ ಶಂಕಿತರಿಗೂ ಕರೋನಾ ನೆಗೆಟೀವ್ (ಸೋಂಕು ರಹಿತ) ಬಂದಿದ್ದು ಯಾರೂ ಹೆದರುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ ರವರು ಇಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರಾಮನಗರ ಜಿಲ್ಲೆಯಲ್ಲಿ ಕರೋನಾ ವೈರಸ್ ಶಂಕೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರ ಪರೀಕ್ಷಾ ವರದಿ ಬಂದಿದ್ದು, ಇಬ್ಬರದ್ದೂ ನೆಗೆಟೀವ್ ಆಗಿದೆ. ಹೀಗಾಗಿ ನಗರದ ಜನತೆ ಆತಂಕ ಪಡುವ ಅಗತ್ಯವಿಲ್ಲ ಎಂದರು.

ಚನ್ನಪಟ್ಟಣದ ೨೨ ವರ್ಷದ ಯುವತಿ ಜರ್ಮನಿಯಿಂದ ೪ ದಿನಗಳ ಹಿಂದೆ ರಾಮನಗರಕ್ಕೆ ಬಂದಿದ್ದರು. ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಇವರ ಗಂಟಲಿನ ಥ್ರೋಟ್ ಸ್ವಾಬ್ (Throat Swab)  ಪರೀಕ್ಷೆಗೆ ಕಳುಹಿಸಲಾಗಿತ್ತು. ಇದರ ವರದಿ ಇಂದು ಬಂದಿದ್ದು ನೆಗೆಟೀವ್ (ಸೋಂಕು ರಹಿತ) ಆಗಿದೆ.


ರಾಮನಗರ ಜಿಲ್ಲೆಗೆ ೬೮ ಜನ ಇಲ್ಲಿಯವರೆಗೂ  ವಿದೇಶಗಳಿಂದ ಬಂದಿದ್ದಾರೆ. ಅವರಲ್ಲಿ ೩೩ ಜನರನ್ನು ಐಸೋಲೇಷನ್​ ವಾರ್ಡ್​​​ನಲ್ಲಿ ಇರಿಸಲಾಗಿದೆ. ೧೪ ದಿನಗಳ ಕಾಲ ಅವರನ್ನು ಪರೀಕ್ಷೆಗೆ ಒಳಪಡಿಸಿ ಅವರನ್ನು ಡಿಸ್ಚಾರ್ಜ್​ ಮಾಡಲಾಗಿದೆ. ಇನ್ನುಳಿದ ೩೫ ಜನರನ್ನು ಈಗ ೧೪ ದಿನಗಳ ಕಾಲ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದರು.

ಹಾಗೆಯೇ, ಇತ್ತೀಚೆಗೆ ಇಂಡೋನೇಷಿಯಾ ಮತ್ತು ಬಾಲಿಗೆ ಭೇಟಿ ನೀಡಿ ಮಾಗಡಿಗೆ ಮರಳಿದ್ದ ೩೩ ವರ್ಷದ ಯುವಕ ಸಹ ಜ್ವರ ಮತ್ತು ಕೆಮ್ಮಿನಿಂದ ಮಾಗಡಿ ಆಸ್ಪತ್ರೆಗೆ ದಾಖಲಾಗಿದ್ದರು. ಇವರ ವರದಿ ಸಹ ನೆಗೆಟೀವ್ ಆಗಿದೆ ಎಂದು ಮಾಹಿತಿ ನೀಡಿದರು.

ಗೋ ರಾ ಶ್ರೀನಿವಾಸ...
ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑