Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೧೯೫: ಪಾಪ ಪೂರಿತವಾದ ಪುಣ್ಯವೆಂದು ಯಾವುದಕ್ಕೆ ಹೇಳುವರು ?

Posted date: 03 Apr, 2020

Powered by:     Yellow and Red

ತಾಳೆಯೋಲೆ ೧೯೫: ಪಾಪ ಪೂರಿತವಾದ ಪುಣ್ಯವೆಂದು ಯಾವುದಕ್ಕೆ ಹೇಳುವರು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ


ಪಾಪ ಪೂರಿತವಾದ ಪುಣ್ಯವೆಂದು ಯಾವುದಕ್ಕೆ ಹೇಳುವರು ?


ನಿಜವಾಗಿಯೂ ಈ ಮಾತು ಬಹಳ ವಿಚಿತ್ರವಾಗಿದೆ! ಆದರೆ ಕೆಲವು ಸಂದರ್ಭಗಳಲ್ಲಿ ಪುಣ್ಯ ಕರ್ಮದಲಿ ಪಾಪಮಿಳಿತವಾಗಿರುತ್ತದೆ. ಹಾಗೆ ಪಾಪ ಮಿಳಿತವಾಗಿರುವ ಪುಣ್ಯ ಕರ್ಮಗಳನ್ನು ಗುರ್ತಿಸಿ ಅದನ್ನು ಬಿಡಬೇಕು.


ಯಾಗಗಳು ಎಷ್ಟೇ ಶುಭ ಫಲಿತಗಳನ್ನು ಉಂಟು ಮಾಡುತ್ತದೆಂದು ಪುರಾಣಗಳು ಹೇಳಿರುವವು. ಆದರೆ ಈ ರೀತಿಯ ಯಾಗಗಳಲ್ಲಿ ಪ್ರಾಣಿ ಬಲಿಯನ್ನು ದೇವತೆಗಳಿಗೆ ಕೊಡುವುದು ನಡೆಯುತ್ತದೆ. ವಾಸ್ತವವಾಗಿ ದೈವ ಪೂಜೆಯಲ್ಲಿ ಇಂತಹ ನೀಚ ಕರ್ಮ ಏನು ! ದೇವರ ಸನ್ನಿಧಿಯಲ್ಲಿ ಹಿಂಸೆ ನಡೆಯಬಹುದೆ ? ಹಾಗಾದರೆ ಹಾಗೆ ಮೃಗಗಳನ್ನು ಹಿಂಸಿಸಿ ಮಾಡುವ ಪುಣ್ಯ ಕರ್ಮ ಪಾಪವಾದುದೇ ಅಲ್ಲವೆ !


ಯಾಗವನ್ನು ಮಾಡುವುದು ಪುಣ್ಯಪ್ರದವೆ. ಆದರೆ ಮೃಗಗಳನ್ನು ಬಲಿ ಕೊಡುವುದು ಹಾಗೂ ಹಿಂಸಿಸುವುದು ನಿಸ್ಸಂದೇಹವಾಗಿಯೂ ಪಾಪವೆ. ಹೀಗೆ ಪಾಪ ಪುಣ್ಯಗಳು ಒಂದೇ ಕಡೆ ಹೇಗೆ ಸಾಧ್ಯವಾಗುವುದು. ಶಾಸ್ತ್ರಗಳನ್ನು ತಪ್ಪಾಗಿ ಅರ್ಥ ಮಾಡಿಕೊಂಡಿರುವುದರಿಂದ ಈ ರೀತಿಯ ಘೋರ ಕೃತ್ಯಗಳು ಆಚಾರಗಳಾಗಿ ಬದಲಾಯಿಸಿರುವವು. ಆದ್ದರಿಂದ ಶಾಸ್ತ್ರ ಭಾವವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅದರಲ್ಲಿನ ಪರಮಾತ್ಮನನ್ನು ಗ್ರಹಿಸಿ ದೈವ ಕಾರ್ಯಗಳು ಹಿಂಸಾ ರಹಿತವಾಗಿ ಮಾಡಬೇಕು.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑