Tel: 7676775624 | Mail: info@yellowandred.in

Language: EN KAN

    Follow us :


ಲಾಕ್‍ಡೌನ್ ನಿಂದ ಸಂಕಷ್ಟದಲ್ಲಿರುವ ಬ್ರಾಹ್ಮಣ ಕುಟುಂಬಗಳಿಗೆ ರಾಜ್ಯ ಬ್ರಾಹ್ಮಣರ ಅಭಿವೃದ್ಧಿ ಮಂಡಳಿಯಿಂದ ದಿನಸಿ ಪದಾರ್ಥಗಳ ವಿತರಣೆ

Posted date: 07 Apr, 2020

Powered by:     Yellow and Red

ಲಾಕ್‍ಡೌನ್ ನಿಂದ ಸಂಕಷ್ಟದಲ್ಲಿರುವ ಬ್ರಾಹ್ಮಣ ಕುಟುಂಬಗಳಿಗೆ ರಾಜ್ಯ ಬ್ರಾಹ್ಮಣರ ಅಭಿವೃದ್ಧಿ ಮಂಡಳಿಯಿಂದ ದಿನಸಿ ಪದಾರ್ಥಗಳ ವಿತರಣೆ

ಚನ್ನಪಟ್ಟಣ:ಏ/೦೬/೨೦/ಸೋಮವಾರ.

ಲಾಕ್‍ಡೌನ್ ನಿಂದ ಸಂಕಷ್ಟಕ್ಕೆ  ಸಿಲುಕಿರುವ, ಅರ್ಚಕ ವೃತ್ತಿಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ರಾಜ್ಯದ ೪೦ ಸಾವಿರಕ್ಕೂ ಹೆಚ್ಚು ಬ್ರಾಹ್ಮಣ ಕುಟುಂಬಗಳಿಗೆ ರಾಜ್ಯ ಬ್ರಾಹ್ಮಣರ ಅಭಿವೃದ್ಧಿ ನಿಗಮದಿಂದ ನೆರವು ನೀಡಲಾಗುತ್ತಿದೆ ಎಂದು ರಾಜ್ಯ ಬ್ರಾಹ್ಮಣರ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ತಿಳಿಸಿದರು.

ಅವರು ನಗರದ ವರದರಾಜಸ್ವಾಮಿ ದೇವಾಲಯದ ಆವರಣದಲ್ಲಿ ತಾಲೂಕು ಬ್ರಾಹ್ಮಣ ಮಹಾಸಭಾ 

ವತಿಯಿಂದ ಹಮ್ಮಿಕೊಂಡಿರುವ ಲಾಕ್‍ಡೌನ್ ನಿಂದ 

ಸಂಕಷ್ಟಕ್ಕೆ ಸಿಲುಕಿರುವ ಬ್ರಾಹ್ಮಣ ಕುಟುಂಬಗಳಿಗೆ ದಿನಸಿ ಪದಾರ್ಥ ವಿರತಣೆ ಕಾರ್ಯಕ್ರಮಕ್ಕೆ ಚಾಲನೆ 

ನೀಡಿ ಮಾತನಾಡಿದರು. ಈ ಕಾರ್ಯಕ್ಕೆ ಸರ್ಕಾರದಿಂದ ನಿಗದಿ ಪಡಿಸಿರುವ ಯಾವುದೇ ಅನುದಾನವನ್ನು ಬಳಕೆ ಮಾಡದೆ ಕೆಲ ದಾನಿಗಳ ಸಹಕಾರದಿಂದ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.


ರಾಜ್ಯಾದ್ಯಂತ ಪ್ರವಾಸ: 

ಬ್ರಾಹ್ಮಣರ ಅಭಿವೃದ್ದಿ ನಿಗಮದ ಅಧ್ಯಕ್ಷರಾಗಿ 

ನೇಮಕ ಗೊಂಡ ಬಳಿಕ ರಾಜ್ಯಾದ್ಯಂತ 7 ಸಾವಿರ 

ಕಿಮೀ ಗೂ ಹೆಚ್ಚು ದೂರು ಪ್ರಯಾಣ ಮಾಡಿ 

ಸಮಾಜದ ಜನರ ಸಮಸ್ಯೆಯನ್ನು ಆಲಿಸಿದ್ದೇನೆ. 

ಬ್ರಾಹ್ಮಣ ಸಮಾಜಕ್ಕೆ ಅನುಕೂಲ ಮಾಡಿಕೊಡುವ 

ನಿಟ್ಟಿನಲ್ಲಿ ಮಂಡಳಿ ಕಾರ್ಯನಿರ್ವಹಿಸಲಿದೆ ಎಂದು 

ಭರವಸೆ ನೀಡಿದರು.

ಲಾಕ್‍ಡೌನ್ ಬಗ್ಗೆ ಭಯ ಬೇಡ:

ಕೊರೋನಾ ಸೋಂಕಿನಿಂದ ದೇಶದ 

ಜನರನ್ನು ರಕ್ಷಣೆ ಮಾಡಲು ಲಾಕ್‍ಡೌನ್ 

ಅನಿವಾರ್ಯ ಮತ್ತು ಅತ್ಯುತ್ತಮ ಮಾರ್ಗ. 

ಲಾಕ್‍ಡೌನ್ ಘೋಷಿಸಿದ ಪರಿಣಾಮ ದೇಶದಲ್ಲಿ

ಕೊರೋನಾ ರೋಗ ಹಬ್ಬುವುದು 

ಕಡಿಮೆಯಾಗಿದೆ. ಆದರೆ ಲಾಕ್‍ಡೌನ್ ನಿಂದಾಗಿ ಬಡ ಕುಟುಂಬಗಳು, ದುಡಿದು ತಿನ್ನುವ 

ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ನಮ್ಮ 

ಮಂಡಳಿ ಈ ಕುಟುಂಬಗಳಿಗೆ ನೆರವು 

ನೀಡುತ್ತಿದ್ದು ಯಾವುದೇ ಆತಂಕ ಬೇಡ 

ಎಂದು ಧೈರ್ಯತುಂಬಿದರು.


ಮೂಲ ಸೌಕರ್ಯಕ್ಕೆ ನೆರವು:

ಬ್ರಾಹ್ಮಣ ಸಮುದಾಯದ ಸಂಸ್ಕೃತಿ ಮತ್ತು 

ಸಂಪ್ರದಾಯಗಳಿಗೆ ಪೂರಕವಾದ 

ಯೋಜನೆಯನ್ನು ನಮ್ಮ ಮಂಡಳಿ 

ಕೈಗೊಂಡಿದೆ. ತಾಲೂಕಿನ ಬ್ರಾಹ್ಮಣರ ರುದ್ರ ಭೂಮಿ ಅಭಿವೃದ್ಧಿ ಮತ್ತು ಅಪರ ಕರ್ಮ ಭವನ ನಿರ್ಮಾಣಕ್ಕೆ ಮಂಡಲಿ ವತಿಯಿಂದ ಎಲ್ಲಾ 

ರೀತಿಯ ಸಹಕಾರ ನೀಡಲಾಗುವುದು ಎಂದು 

ಭರವಸೆನೀಡಿದರು.


ಈ ಸಂದರ್ಭದಲ್ಲಿ ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಂ.ಎನ್.ರಾಮಪ್ರಸಾದ್, ಕಾರ್ಯದರ್ಶಿ 

ರಾಘವೇಂದ್ರ ಮಯ್ಯ, ಖಜಾಂಚಿ ಹೊಯ್ಸಳ, 

ಪದಾಧಿಕಾರಿಗಳಾದ ವೆಂಕಟೇಶ ಮೂರ್ತಿ, 

ಕೆ.ಎಂ. ಮಧುಸೂದನ್, ಡಾ. 

ಮಧುಸೂದನಾಚಾರ್ಯ ಜೋಷಿ, ಎನ್.ಮೋಹನ್, ನರಸಿಂಹ, ಎಸ್.ಮಧುಸೂದನ್, 

ಗುರುರಾಘವೇಂದ್ರ ಬೃಂದಾವನ ಸಮಿತಿಯ 

ಕಾರ್ಯದರ್ಶಿ ಚಂದ್ರಶೇಖರ್, 

ಪದಾಧಿಕಾರಿಗಳಾದ ಮೋಹನ್ ಹಂದೆ, ಆನಂದ್ 

ಇನ್ನೂ ಮುಂತಾದವರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑