Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೧೬೮: ನಿನ್ನ ಅಂತರಾತ್ಮವನ್ನು ನೀನೇ ಮೋಸಪಡಿಸಿದರೆ ಏನಾಗುತ್ತದೆ ?

Posted date: 07 Apr, 2020

Powered by:     Yellow and Red

ತಾಳೆಯೋಲೆ ೧೬೮: ನಿನ್ನ ಅಂತರಾತ್ಮವನ್ನು ನೀನೇ ಮೋಸಪಡಿಸಿದರೆ ಏನಾಗುತ್ತದೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


ನಿನ್ನ ಅಂತರಾತ್ಮವನ್ನು ನೀನೇ ಮೋಸಪಡಿಸಿದರೆ ಏನಾಗುತ್ತದೆ ?


ಯಾರು ತನ್ನ ಅಂತರಾತ್ಮದ ಸುಬೋಧಯನ್ನು ನಿರ್ಲಕ್ಷಿಸಿ ದುಷ್ಕರ್ಮಗಳನ್ನು ಮಾಡುವರೋ, ಅವನ ಗುಣಿಯನ್ನು ಅವನೇ ತೆಗೆದುಕೊಂಡಂತೆ ಆಗುತ್ತದೆ. ತನ್ನನ್ನು ತಾನೆ ಭಸ್ಮ ಮಾಡಿಕೊಂಡ ಭಸ್ಮಾಸುರನಂತಾಗುತ್ತಾನೆ.


ಅಂತರಾತ್ಮವು ಭಗವಂತನ ನಿವಾಸ ಸ್ಥಾನ. *ಏನು ಓದದಿದ್ದರೂ, ಯಾವುದೇ ರೀತಿಯ ಪುಣ್ಯ ಗ್ರಂಥಗಳನ್ನು ಪಠಿಸದಿದ್ದರೂ, ಪ್ರತಿ ಮನುಷ್ಯನ ಅಂತರಾತ್ಮ ಯಾವುದು ಧರ್ಮ, ಯಾವುದು ಅಧರ್ಮ ಎಂದು ಹೇಳುತ್ತಲೇ ಇರುತ್ತದೆ.* ಅಂತರಾತ್ಮ ಹೇಳಿದ ಒಳ್ಳೆಯದನ್ನು ಮರೆತು ಯಾರು ಕೆಟ್ಟ ಹಾದಿಯನ್ನು ಹಿಡಿಯುವನೋ ಅವನ ಅಂತರ ಚೈತನ್ಯವು ಅವನನ್ನು ಅಶಾಂತಿಯೊಳಗೆ ತಳ್ಳಿಬಿಡುತ್ತದೆ. *ಅಂತರಾತ್ಮ ಹೇಳಿದ ಹಾಗೆ ಒಳ್ಳೆಯದನ್ನು ಬಿಟ್ಟು ಕೆಟ್ಟದ್ದನ್ನು ಆಚರಿಸುವುದು, ತಿಳಿದು ತಿಳಿಯದೆ ಮಾಡಿದ ತಪ್ಪಲ್ಲ.* ಆದ್ದರಿಂದ ಅಂತಹ ದುಷ್ಕರ್ಮ ಅವನನ್ನು ದಹಿಸಿ ಬಿಡುತ್ತದೆ . ಹೀಗೆ ಅವನು ಪತನವಾಗುವನು.


ಕ್ಷಣಿಕಾವೇಶದಲ್ಲಿ *ಅಂತರಾತ್ಮದ ಸುಭೋಧನೆಯನ್ನು ಮರೆತವನು ತಾತ್ಕಾಲಿಕ ಸುಖವನ್ನು ಹೊಂದಿದರೂ ತತ್‌ಕ್ಷಣವೇ ಅವನ ನರಕವನ್ನು ಅವನೇ ತಂದುಕೊಳ್ಳುವನು.* ಆದ್ದರಿಂದ ನಮ್ಮಲ್ಲಿನ ಅಂತರಾತ್ಮ ಎನ್ನುವ ದೈವವು ಹೇಳಿದ ಹಾಗೆ ಸಕ್ರಮವಾಗಿ ನಡೆದುಕೊಂಡು ಶಾಶ್ವತ ಸುಖವನ್ನು ಹೊಂದೋಣ.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑