Tel: 7676775624 | Mail: info@yellowandred.in

Language: EN KAN

    Follow us :


ಜಿಲ್ಲಾಡಳಿತಕ್ಕೆ ಬಿಡದಿ ಕೈಗಾರಿಕಾ ಸಂಘದಿಂದ ೫೦೦ ಆಹಾರ ಪದಾರ್ಥ ಕಿಟ್

Posted date: 07 Apr, 2020

Powered by:     Yellow and Red

ಜಿಲ್ಲಾಡಳಿತಕ್ಕೆ ಬಿಡದಿ ಕೈಗಾರಿಕಾ ಸಂಘದಿಂದ ೫೦೦ ಆಹಾರ ಪದಾರ್ಥ ಕಿಟ್

ರಾಮನಗರ:ಏ/೦೭/೨೦/ಮಂಗಳವಾರ. ಬಿಡದಿ ಕೈಗಾರಿಕಾ ಸಂಘದಿಂದ ಆಹಾರ ಪದಾರ್ಥಗಳುಳ್ಳ ೫೦೦ ಕಿಟ್‌ಗಳನ್ನು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ಅವರಿಗೆ ನೀಡಿದರು.


ಆಹಾರ ಕಿಟ್‌ನಲ್ಲಿ ಅಕ್ಕಿ-೧೦ ಕಿಲೋ, ಗೋಧಿ ಹಿಟ್ಟು ೦೩ ಕಿಲೋ, ಸಕ್ಕರೆ ೦೧.೫ ಕಿಲೋ, ತೊಗರಿ ಬೇಳೆ ೦೨ ಕಿಲೋ, ರಾಗಿ ಹಿಟ್ಟು ೦೧ ಕಿಲೋ, ಈರುಳ್ಳಿ ೦೧ ಕಿಲೋ, ಉಪ್ಪು ೦೧ ಕಲೋ, ಅಡುಗೆ ಎಣ್ಣೆ ೦೧ ಲೀಟರ್, ಸಾಂಬಾರ್ ಪುಡಿ ೨೦೦ ಗ್ರಾಂ, ಒಳಗೊಂಡಿರುತ್ತದೆ.


೫೦೦ ಆಹಾರ ಕಿಟ್ ಜೊತೆಯಲ್ಲಿ ಅಕ್ಕಿ ೩೦೦ ಕಿಲೋ, ಗೋಧಿ ಹಿಟ್ಟು ೧೦೦ ಕಿಲೋ. ತೊಗರಿ ಬೇಳೆ ೫೦ ಕಿಲೋ, ಅಡುಗೆ ಎಣ್ಣೆ ೧೦ ಲೀಟರ್, ಆಲೂಗಡ್ಡೆ  ೦೧ ಮೂಟೆ ಹಾಗೂ ಈರುಳ್ಳಿ ೦೧ ಮೂಟೆಯನ್ನು ಸಹ ನೀಡಿರುತ್ತಾರೆ.


ಈ ಸಂದರ್ಭದಲ್ಲಿ ಬಿಡದಿ ಕೈಗಾರಿಕಾ ಸಂಘದ ಭದ್ರತಾ ವಿಭಾಗದ ಮೇಜರ್ ಶಿವಕುಮಾರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜು ಎಲ್, ಉಪನಿರ್ದೇಶಕ ಶಿವಲಿಂಗಯ್ಯ ಕೆ. ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑