Tel: 7676775624 | Mail: info@yellowandred.in

Language: EN KAN

    Follow us :


ಕೋಟಮಾರನಹಳ್ಳಿ ನ್ಯಾಯಬೆಲೆ ಅಂಗಡಿಗೆ ನೋಟೀಸ್ ಜಾರಿ

Posted Date: 07 Apr, 2020

ಕೋಟಮಾರನಹಳ್ಳಿ ನ್ಯಾಯಬೆಲೆ ಅಂಗಡಿಗೆ ನೋಟೀಸ್ ಜಾರಿ

ಚನ್ನಪಟ್ಟಣ:ಏ/೦೭/೨೦/ಮಂಗಳವಾರ. ತಾಲ್ಲೂಕಿನ ಕೋಟಮಾರನಹಳ್ಳಿ ಗ್ರಾಮದಲ್ಲಿ ನ ನ್ಯಾಯ ಬೆಲೆ ಅಂಗಡಿಯ ಸನ್ನದುದಾರ ವೇಣುಗೋಪಾಲ ರವರಿಗೆ ತಾಲ್ಲೂಕು ಆಹಾರ ಸಹಾಯಕ ನಿರ್ದೇಶಕಿ ಶಾಂತಕುಮಾರಿ ರವರು ಕಾರಣ ಕೇಳಿ ನೋಟೀಸ್ ಜಾರಿಗೊಳಿಸಿದ್ದಾರೆ.


ಸನ್ನದುದಾರ ವೇಣುಗೋಪಾಲ ಮಾಲೀಕತ್ವದ ನ್ಯಾಯ ಬೆಲೆ ಅಂಗಡಿಯಲ್ಲಿ ರೇಣುಕಮ್ಮ ರಾಮಕೃಷ್ಣ ಮತ್ತು ಪ್ರಶಾಂತ್ (ಪಾಪು) ರವರು ಹೆಬ್ಬೆಟ್ಟು ಅಚ್ಚು ಪಡೆಯಲು, ಹತ್ತು ರೂಪಾಯಿ ಮತ್ತು ಪಡಿತರ ನೀಡಲು ಇಪ್ಪತ್ತು ರೂಪಾಯಿಗಳನ್ನು ಪಡೆಯುತ್ತಿದ್ದಾರೆ ಎಂಬ ಖಚಿತ ಮಾಹಿತಿಯನ್ನಾಧರಿಸಿ ದಾಳಿ ನಡೆಸಿದ್ದರು.


ಸನ್ನದುದಾರರ ಬಗ್ಗೆ ಕ್ರಮ ಕೈಗೊಳ್ಳುವಂತೆ ತಹಶಿಲ್ದಾರ್ ಸುದರ್ಶನ್ ರವರು ಆಹಾರ ನಿರೀಕ್ಷಕರಿಗೆ ಸೂಚಿಸಿದ್ದು, ಶಾಂತಕುಮಾರಿ ಮತ್ತು ಆಹಾರ ನಿರೀಕ್ಷಕಿ ಅನುಷಾ ರವರು ಕಾರಣ ಕೇಳಿ‌ ನೋಟೀಸ್ ಜಾರಿ ಮಾಡಿರುವುದಾಗಿ ಶಾಂತಕುಮಾರಿಯವರು ತಿಳಿಸಿದರು.


ಕಾರಣ ಬರುವ ತನಕ ಕಾಯದೇ ಸನ್ನದುದಾರರ ರದ್ದತಿಗೆ ಮೇಲಾಧಿಕಾರಿಗೆ ವರದಿ ಒಪ್ಪಿಸುವಂತೆ ಅಧಿಕಾರಿಗೆ ತಹಶಿಲ್ದಾರ್ ರವರು ನಿರ್ದೇಶಿಸಿರುವುದಾಗಿ ತಿಳಿದು ಬಂದಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑