Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೧೯೯:ಯಾವ ಕ್ಷಣದಲ್ಲಿ ಸತ್ಯಕ್ಕೆ ಬದಲಾಗಿ ಅಸತ್ಯವನ್ನು ಹೇಳಬಹುದು ?

Posted date: 08 Apr, 2020

Powered by:     Yellow and Red

ತಾಳೆಯೋಲೆ ೧೯೯:ಯಾವ ಕ್ಷಣದಲ್ಲಿ ಸತ್ಯಕ್ಕೆ ಬದಲಾಗಿ ಅಸತ್ಯವನ್ನು ಹೇಳಬಹುದು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ


ಯಾವ ಕ್ಷಣದಲ್ಲಿ ಸತ್ಯಕ್ಕೆ ಬದಲಾಗಿ ಅಸತ್ಯವನ್ನು ಹೇಳಬಹುದು ?


ನಾವು ಯಾವಾಗಲೂ ಸತ್ಯವನ್ನೇ ಹೇಳಬೇಕೆಂದು ನಮ್ಮ ಧರ್ಮವು ಹೇಳುತ್ತಿದೆ. ಆದರೆ ಕೆಲವು ಸಂದರ್ಭಗಳಲ್ಲಿ ತನಗೆ, ತನ್ನವರಿಗಾಗಿ ಹಾನಿ ಉಂಟು ಮಾಡುವ ಸತ್ಯದ ಮಾತಿಗಿಂತ ಅಸತ್ಯವನ್ನು ಹೇಳುವುದೇ ಸರಿಯಾದುದೆಂದು ನಮ್ಮ ಹಿರಿಯರು ಹೇಳಿರುವರು.


*ಉದಾಹರಣೆಗೆ ಕೆಲವೇ ದಿನಗಳಲ್ಲಿ ರೋಗಿ ಮರಣಿಸುತ್ತಾನೆಂದು ವೈದ್ಯರಿಗೆ ತಿಳಿದರೂ, ಈ ಸತ್ಯವನ್ನು ರೋಗಿಗೆ ಹೇಳದೆ ಅವನಿಗೆ ಒಳ್ಳೆಯದಾಗುತ್ತದೆಂದು ಶುಭ ವಚನಗಳನ್ನು ಹೇಳುವುದೇ ನೈತಿಕತೆ. ಹೇಳದೇ ಸತ್ಯವನ್ನೇ ಹೇಳಿದರೆ ತಿಂಗಳಲ್ಲಿ ಸಾಯುವವನು ನಾಲ್ಕೇ ದಿನಕ್ಕೆ ಸಾಯಬಹುದು.* ಆದ್ದರಿಂದ ಸತ್ಯವನ್ನು ಹೇಳುವುದು ಎಷ್ಟು ಅಗತ್ಯವೋ ಆಪತ್ತಿನ ಸಮಯದಲ್ಲಿ ಸತ್ಯವನ್ನು ಕೇಳದೆ ಸುಮ್ಮನಿರುವುದೂ ಸಹ ಸುಕರ್ಮವೆ ಆಗುತ್ತದೆ. *ನೈತಿಕತೆಯನ್ನು ಧರ್ಮವನ್ನು, ಲೋಕ ಕ್ಷೇಮವನ್ನು ಉಂಟು ಮಾಡುವ ಒಂದು ಚಿಕ್ಕ ಅಸತ್ಯವೂ ಸಹ ಸತ್ಯದಂತಷ್ಟು ಮಹಿಮೆಯನ್ನು ಹೊಂದಿರುವುದೇ ಆಗಿರುತ್ತದೆ.* ಈ ವಿಷಯವನ್ನು ನಮ್ಮ ಪುರಾಣ ಇತಿಹಾಸಗಳು ಕೆಲವು ಸಂದರ್ಭಗಳಲ್ಲಿ ಹೇಳಲ್ಪಟ್ಟಿವೆ.


ಕಡಿಮೆ ಬುದ್ಧಿಯಿಂದ ದುಷ್ಟ ಬುದ್ದಿಯಿಂದ ಹೇಳಿದ ಸತ್ಯ ಅನೇಕರಿಗೆ ಅನ್ಯಾಯವನ್ನುಂಟು ಮಾಡಬಹುದು. *ಸತ್ಯವಾದರೂ, ಅಸತ್ಯವಾದರೂ, ಜನೋದ್ಧಾರಣೆ, ಲೋಕ ಕ್ಷೇಮ, ಧರ್ಮ ರಕ್ಷಣೆಗಾಗಿ ಹೇಳುವುದೇ ನಿಜವಾದ ಸತ್ಯ.* *ಕೆಲವರು ಹೊಟ್ಟೆ ಕಿಚ್ಚಿನ ಗುಣದಲ್ಲಿ ಒಬ್ಬರ ಮೇಲೆ ಒಬ್ಬರಿಗೆ ಸತ್ಯವಾದ ಒಂದು ಕೆಟ್ಟದ್ದನ್ನು ಹೇಳಿದರೂ ಅಂತಹ ಸತ್ಯವನ್ನು ಹೇಳಿದವನು ಪಾಪಾತ್ಮನೇ ಆಗುವನು.* ಹೇಳಬಾರದ ಸತ್ಯವನ್ನು ಹೇಳಬೇಕಾಗಿ ಬಂದಾಗ ಮೌನವನ್ನು ಆಚರಿಸು ಎಂದು ಸತ್ಯವ್ರತವನ್ನು ಕೈಗೊಂಡ ಗಾಂಧೀಜಿಯವರು ಹೇಳಿರುವರು.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑