Tel: 7676775624 | Mail: info@yellowandred.in

Language: EN KAN

    Follow us :


ರೇಷ್ಮೆ ಮಾರುಕಟ್ಟೆಯನ್ನು ೩ ಸ್ಥಳಗಳಲ್ಲಿ ನಿರ್ವಹಿಸಿ: ನಾರಾಯಣ ಗೌಡ

Posted date: 08 Apr, 2020

Powered by:     Yellow and Red

ರೇಷ್ಮೆ ಮಾರುಕಟ್ಟೆಯನ್ನು ೩ ಸ್ಥಳಗಳಲ್ಲಿ ನಿರ್ವಹಿಸಿ: ನಾರಾಯಣ ಗೌಡ

ರಾಮನಗರ ಏ. ೦೮ (ಕರ್ನಾಟಕ ವಾರ್ತೆ):- ರಾಮನಗರ ಜಿಲ್ಲಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ರೇಷ್ಮೆ ಮಾರುಕಟ್ಟೆಯಲ್ಲಿ ಜನಸಂದಣಿ ಉಂಟಾಗದAತೆ ಕಾರ್ಯನಿರ್ವಹಿಸಲು ಇನ್ನೂ ೨ ಸ್ಥಳಗಳನ್ನು ಗುರುತಿಸಿ ರೇಷ್ಮೆ ವಹಿವಾಟು ನಡೆಸುವಂತೆ ರೇಷ್ಮೆ, ತೋಟಗಾರಿಕೆ ಹಾಗೂ ಪೌರಾಡಳಿತ ಸಚಿವರಾದ ನಾರಾಯಣ ಗೌಡ ಅವರು ತಿಳಿಸಿದರು.

ಅವರು ಇಂದು ರೇಷ್ಮೆ ಮಾರುಕಟ್ಟೆಯ ಬಳಿ ಅಧಿಕಾರಿಗಳೊಂದಿಗೆ ಚರ್ಚಿಸಿ, ರೇಷ್ಮೆ ಬೆಳೆಗಾರರು ರೇಷ್ಮೆ ಮಾರಾಟವಾಗದಿದ್ದಲ್ಲಿ ಕಷ್ಟಕ್ಕೆ ಸಿಲುಕುತ್ತಾರೆ. ಕೋವಿಡ್-೧೯ ಹರಡದಂತೆ ಬೇಕಿರುವ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಿ ರೇಷ್ಮೆ ಮಾರುಕಟ್ಟೆ ನಡೆಸುವಂತೆ ತಿಳಿಸಿದರು.

ಹಾಪ್‌ಕಾಮ್ಸ್ಗಳು ಈಗಾಗಲೇ ರೈತರು ಬೆಳೆದ ತರಕಾರಿಗಳನ್ನು ಆಪರ‍್ಟ್ಮೆಂಟ್‌ಗಳನ್ನು ಗುರುತಿಸಿ ಮಾರಾಟ ಮಾಡುತ್ತಿದ್ದಾರೆ. ಅದೇ ರೀತಿ ಮಾವಿನ ಹಣ್ಣುಗಳನ್ನು ಹಾಪ್‌ಕಾಮ್ಸ್ ಮೂಲಕ ಅಪರ‍್ಟ್ಮೆಂಟ್‌ಗಳಲ್ಲಿ ಮಾರಾಟ ಮಾಡಲು ವ್ಯವಸ್ಥೆ ಮಾಡುವಂತೆ ತಿಳಿಸಿದರು.

ರೇಷ್ಮೆ ಇಲಾಖೆ ಉಪನಿರ್ದೇಶಕರಾದ ಮಹೇಂದ್ರ ಅವರು ಈಗಾಗಲೇ ಚನ್ನಪಟ್ಟಣ, ಕನಕಪುರದಿಂದ ಬರುವ ರೇಷ್ಮೆಯನ್ನು ಆಯಾ ತಾಲ್ಲೂಕುಗಳಲ್ಲೇ ಮಾರಾಟ ಮಾಡಲು ಮಾಡಿರುವ ವ್ಯವಸ್ಥೆ ಹಾಗೂ ಮಾರಾಟವಾಗುತ್ತಿರುವ ರೇಷ್ಮೆ ಲಾಟ್‌ಗಳ ಬಗ್ಗೆ ಸಚಿವರಿಗೆ ವಿವರಿಸಿದರು. 

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ  ಗುಣವಂತ್, ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಕೆ.ಎಚ್. ರವಿ ಹಾಗೂ ರೇಷ್ಮೆ ಮಾರುಕಟ್ಟೆ ಉಪನಿರ್ದೇಶಕರು ಉಪಸ್ಥಿತರಿದ್ದರು.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑