Tel: 7676775624 | Mail: info@yellowandred.in

Language: EN KAN

    Follow us :


ಬೊಂಬೆನಗರಿಯಲ್ಲಿ‌ ಒಂದೇ ದಿನ ಒಟ್ಟು ಏಳು ಮಂದಿಗೆ ಕೊರೋನಾ ಶಂಕೆ; ಆತಂಕ ತಂದಿಟ್ಟ ಪಿ.೧೬೯

Posted date: 09 Apr, 2020

Powered by:     Yellow and Red

ಬೊಂಬೆನಗರಿಯಲ್ಲಿ‌ ಒಂದೇ ದಿನ ಒಟ್ಟು ಏಳು ಮಂದಿಗೆ ಕೊರೋನಾ ಶಂಕೆ; ಆತಂಕ ತಂದಿಟ್ಟ  ಪಿ.೧೬೯

ಚನ್ನಪಟ್ಟಣ:ಏ/೦೯/೨೦/ಗುರುವಾರ. ಕೊರೋನಾ ಪೀಡಿತ ರೋಗಿಯೊಬ್ಬ ಪಿ.೧೬೯ (ರಾಜ್ಯ ಮಾಹಿತಿಯ ಸೀರಿಯಲ್ ನಂ) ನಗರದಲ್ಲಿ ವಾಸ್ತವ್ಯ ಹೂಡಿದ್ದ ಸಂಗತಿ ಅವನ ಟ್ರಾವೆಲ್ ಹಿಸ್ಟರಿಯಿಂದ ಬಹಿರಂಗ ಗೊಳ್ಳುತ್ತಿದ್ದಂತೆ ಬೊಂಬೆನಗರಿಯಲ್ಲಿ ಕೊರೋನಾ ಆತಂಕದ ಮಂಕು ಕವಿದಿದೆ.


ಪಿ.೧೬೯ ನೇ ರೋಗಿಯ ಪ್ರಯಾಣದ ವಿವರ, 

ಸಂಪರ್ಕದಲ್ಲಿದ್ದವರ ಮಾಹಿತಿಯನ್ನು ಕಲೆಹಾಕಿದ್ದು, ಈತನ ಜತೆಗೆ ಸಂಪರ್ಕಕ್ಕೆ ಬಂದಿದ್ದ ನಗರದ ಕಲಾನಗರದ ಈತನ ತಂಗಿಯ ಮನೆಯ ೦೬ (ಎರಡು ವರ್ಷದ ಪುಟ್ಟ ಮಗುವು ಸೇರಿದೆ) ಮಂದಿಯನ್ನು ಈಗಾಗಲೇ ಸಾರ್ವಜನಿಕ ಆಸ್ಪತ್ರೆಯ ಐಸೋಲೇಷನ್ ಘಟಕದಲ್ಲಿ ಇರಿಸಲಾಗಿದ್ದು, ಗಂಟಲ ದ್ರವ ಹಾಗೂ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.


ಬೆಂಗಳೂರಿಗೆ ವಾಪಸ್ಸಾಗುವ ಸಮಯದಲ್ಲಿ ಅಪ್ಪಗೆರೆ ಗ್ರಾಮದವರೊಬ್ಬರ ಕಾರನ್ನು ಬಾಡಿಗೆಗೆ ಪಡೆದಿದ್ದರಿಂದ ಆ ಚಾಲಕನನ್ನು ಸಹ ವೈದ್ಯರು ಸುಪರ್ದಿಗೆ ಪಡೆದು ಅವನಿಗೂ ಸಹ ಸ್ವಾಬ್ ತೆಗೆದಿದ್ದು ಒಂದೇ ದಿನ ಒಟ್ಟು ಏಳು ಮಂದಿಯನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದ್ದು ಇಂದು‌ ಸಂಜೆ ಅಥವಾ ನಾಳೆ ಬೆಳಿಗ್ಗೆ ವರದಿ ಬಂದ ನಂತರ ಪೀಡಿತರೋ ಅಲ್ಲವೋ ಎಂಬುದು ಗೊತ್ತಾಗಲಿದೆ.


ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದಿದ್ದ ಧರ್ಮ ಸಭೆಯಲ್ಲಿ ಪಾಲ್ಗೊಂಡಿದ್ದ  ಹೊಸಕೋಟೆ ತಾಲೂಕಿನ ಬೈಲನರಸಾಪುರ ಗ್ರಾಮದ ಈತ ಮಾ. ೨೦ ರಂದು ದೆಹಲಿಯ ಧರ್ಮ ಸಭೆಯನ್ನು ಮುಗಿಸಿಕೊಂಡು ನೇರವಾಗಿ ತನ್ನ ಸೋದರಿ ಮನೆಗೆ ಬಂದು ಒಂದೂವರೆ ದಿನ ಉಳಿದು ಕೊಂಡಿದ್ದ ಮಾಹಿತಿ ಲಭ್ಯವಾದ ನಂತರ ದಂಡಾಧಿಕಾರಿ ಸುದರ್ಶನ್ ನೇತೃತ್ವದಲ್ಲಿ ಕಲಾನಗರದ ಆರು ಮಂದಿ ಹಾಗೂ ಕಾರು ಚಾಲಕನನ್ನು ಆಸ್ಪತ್ರೆಗೆ ಕರೆದು ಸ್ವಾಬ್ ತೆಗೆಯಲಾಗಿದೆ.


ಮಾ. ೩೧ ರಂದು ಈತನನ್ನು ಹೋಂ ಕ್ವಾರಂಟೇನ್‍ ನಲ್ಲಿ ಇರಿಸಲಾಗಿತ್ತ . ಏ. ೦೬ ರಂದು ಈತನಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಈತನ ಸಂಪರ್ಕಕ್ಕೆ ಬಂದಿದ್ದ ಕುಟುಂಬದ ಆರು ಮತ್ತು ಚಾಲಕ ಸೇರಿದಂತೆ ಒಟ್ಟು ಏಳು ಮಂದಿಯನ್ನು ಆಸ್ಪತ್ರೆಯಲ ಐಸೋಲೇಷನ್ ನಲ್ಲಿ ಇರಿಸಲಾಗಿದೆ.


*ವರದಿ ಕಾಯುತ್ತಿರುವ ಅಧಿಕಾರಿಗಳು:*


ಐದು ಮಂದಿಯನ್ನು ಐಸೋಲೇಷನ್ ಘಟಕದಲ್ಲಿ ಇರಿಸಲಾಗಿದ್ದು, ಪ್ರಯೋಗಾಲಯದ ವರದಿಯಲ್ಲಿ ಇವರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಲ್ಲಿ ಬೆಂಗಳೂರಿನ ಕೊರೋನಾ ವಿಶೇಷ ಆಸ್ಪತ್ರೆಗೆ ಕಳುಹಿಸಲಾಗುವುದು. ಒಂದು ವೇಳೆ ಸೋಂಕು ಇಲ್ಲ ಎಂಬ ವರದಿ ಬಂದಿದ್ದೇ ಆದಲ್ಲಿ ತಾಲೂಕಿನ ಹೊನ್ನಾಯ್ಕನಹಳ್ಳಿ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ಹಾಸ್ಟೆಲ್‍ನಲ್ಲಿ ಸ್ಥಾಪಿಸಿರುವ ಕೊರೋನಾ ವಿಶೇಷ ನಿಗಾಘಟಕದಲ್ಲಿ ೧೪ ದಿನಗಳ ಕಾಲ ಕ್ವಾರಂಟೇನ್‍ನಲ್ಲಿ ಇರಿಸಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑