Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೨೦೦: ತನ್ನ ಕೋಪವೇ ತನ್ನ ದು:ಖಕ್ಕೆ ಕಾರಣ ಹೇಗೆ ?

Posted date: 09 Apr, 2020

Powered by:     Yellow and Red

ತಾಳೆಯೋಲೆ ೨೦೦: ತನ್ನ ಕೋಪವೇ ತನ್ನ ದು:ಖಕ್ಕೆ ಕಾರಣ ಹೇಗೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*


ತನ್ನ ಕೋಪವೇ ತನ್ನ ದು:ಖಕ್ಕೆ ಕಾರಣ ಹೇಗೆ ?


*ತನ್ನ ಕೋಪವೇ ತನ್ನ ಶತೃ, ತನ್ನ ಶಾಂತವೇ ತನಗೆ ಮಿತ್ರನು* ಎಂದು ದಿವ್ಯ ಜ್ಞಾನವನ್ನು ಹೊಂದಿದ ಮಹಾತ್ಮರು ಎಷ್ಟೋ ಜನ ಹೇಳಿರುವರು. *ಕೋಪದಿಂದಲೇ ಹಿಂಸೆ ಜಗತ್ತನ್ನು ಆಳುತ್ತದೆ.* ಕೋಪವೇ ಲೋಕಕ್ಕೆ ಕಲಿ ಪುರುಷನಾಗಿ ಅವತರಿಸಿ ಜನರಿಗೆ ಅನೇಕ ಕಷ್ಟಗಳನ್ನು ತಂದು ಕೊಡುತ್ತಿದೆ. ಕೋಪದ ಕಾರಣವಾಗಿ ಎಷ್ಟೆಷ್ಟೋ ಜನರು ಪತನವಾಗಿರುವರೆಂದು ನಮ್ಮ ಪುರಾಣ ಇತಿಹಾಸಗಳು ಹೇಳುತ್ತಿವೆ.


ನಮ್ಮಲ್ಲಿನ *ಅಲ್ಪ ಗುಣಗಳಲ್ಲಿ ಕೋಪವೂ ಒಂದು. ನೂರಕ್ಕೋ, ಕೋಟಿಗೋ ಒಂದು ಬಾರಿ ಕೋಪದಿಂದ ಸತ್ಪಲಿತವನ್ನು ಕೊಟ್ಟಿರಬಹುದು.* ಆದರೆ ಅನೇಕ ಸಂದರ್ಭಗಳಲ್ಲಿ ಅದು ಕೆಡುಕನ್ನು ಮಾಡಿದೆ. ಅದಕ್ಕಾಗಿ ನಮ್ಮಲ್ಲಿನ ಕೋಪವೆನ್ನುವ ದುಷ್ಟ ಗುಣವನ್ನು ನಿರ್ಮೂಲನೆ ಮಾಡಿಕೊಳ್ಳಬೇಕು. ದ್ವೇಷದಿಂದ ಕ್ರೊಧ ಉಂಟಾಗುತ್ತದೆ. ಆದ್ದರಿಂದ ದಿವ್ಯ ಪ್ರೇಮವನ್ನು ಬೆಳಸಿಕೊಂಡರೆ ದ್ವೇಷ ನಶಿಸುತ್ತದೆ. ತತ್ಪಲಿತವಾಗಿ ಈ ಹೃದಯವನ್ನು ಆಕ್ರಮಿಸುತ್ತದೆ.


*ಕೋಪವನ್ನು ಜಯಿಸಿದವನೇ ಜೀವನದಲ್ಲಿ ಶೀಘ್ರವಾಗಿ ವಿಜಯವನ್ನು ಸಾಧಿಸಬಹುದು. ಅವರ ಕೋಪ ಅವರನ್ನೇ ದಹಿಸಿ ಸಂಘದಿಂದ ಬೇರೆ ಮಾಡುತ್ತದೆ. ಲೋಕ ಕಲ್ಯಾಣವನ್ನು ಬಯಸುವವರು ಕೋಪವೆನ್ನುವ ವಿಷಕ್ಕೆ ದೂರವಾಗಿ ಇರಬೇಕು. ಕೋಪದಲ್ಲಿ ಬೇಗನೆ ಕೃಶವಾಗಿ ನಶಿಸುವರು.* ಆದ್ದರಿಂದ ಕೋಪ ಎಂಬ ವಿಷಯದಲ್ಲಿ ಎಚ್ಚರಿಕೆಯಿಂದ ಇದ್ದು ಶಾಂತಿಯನ್ನು ಹೊಂದಿರಿ.


*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑