Tel: 7676775624 | Mail: info@yellowandred.in

Language: EN KAN

    Follow us :


ರಸ್ತೆ ಅಪಘಾತ ಸಂಕಲಗೆರೆ ರಮೇಶ್ ಸಾವು

Posted date: 27 Apr, 2020

Powered by:     Yellow and Red

ರಸ್ತೆ ಅಪಘಾತ ಸಂಕಲಗೆರೆ ರಮೇಶ್ ಸಾವು

ಚನ್ನಪಟ್ಟಣ:ಏ/೨೭/೨೦/ಸೋಮವಾರ. ತಾಲ್ಲೂಕಿನ ಸಂಕಲಗೆರೆ ಗ್ರಾಮದ ರಮೇಶ್ ಹಾಗೂ ಅನುಕುಮಾರ್ ಎಂಬಿಬ್ಬರು ಸೈಕಲ್ ಮೋಟಾರ್‌ನಲ್ಲಿ ಬರುತ್ತಿದ್ದ ವೇಳೆ ಅವರಿಗೆ ಇಲ್ಲಿನ ಭೈರಾಪಟ್ಟಣ ಬಳಿ ಕಾರೊಂದು ಡಿಕ್ಕಿ ಹೊಡೆದು ರಮೇಶ್ (೪೫) ಎಂಬುವವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.


ಅನುಕುಮಾರ್ ಅವರನ್ನು ಇಲ್ಲಿನ ಬಿ.ಜೆ.ಎಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೂ ತೀವ್ರ ಪೆಟ್ಟು ಬಿದ್ದಿದೆ ಎಂದು ಹೇಳಲಾಗಿದೆ.

ಈ ಸಂಬಂಧ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.


ಮೃತರ ಶರೀರವನ್ನು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ವಾರಸುದಾರರಿಗೆ ಒಪ್ಪಿಸಲಾಯಿತು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑