Tel: 7676775624 | Mail: info@yellowandred.in

Language: EN KAN

    Follow us :


ಮೇರು ವ್ಯಕ್ತಿತ್ವದ, ಜಾನಪದ ವಿದ್ವಾಂಸ ಹೊಸಹಳ್ಳಿ ಡಾ ರಾಜೇಗೌಡ ನಿಧನ

Posted date: 29 Apr, 2020

Powered by:     Yellow and Red

ಮೇರು ವ್ಯಕ್ತಿತ್ವದ, ಜಾನಪದ ವಿದ್ವಾಂಸ ಹೊಸಹಳ್ಳಿ ಡಾ ರಾಜೇಗೌಡ ನಿಧನ

ಬೆಂಗಳೂರು:ಏ/೨೯/೨೦/ಬುಧವಾರ. ಹಿರಿಯ ಜಾನಪದ ವಿದ್ವಾಂಸ, ಕರ್ನಾಟಕ ಜಾನಪದ ಪರಿಷತ್ತಿನ ಗೌರವ ಕಾರ್ಯದರ್ಶಿ, ಹಲವಾರು ಕೃತಿಗಳ ಕತೃ, ಕಥೆಸಾಹಿತ್ಯವನ್ನು ಒರೆ ಹಚ್ಚಿ ಬರೆಯುವ ಬರಹಗಾರ, ಹೆಚ್ ಎಲ್ ನಾಗೇಗೌಡರ ಒಡನಾಡಿ ಹೊಸಹಳ್ಳಿ ಡಾ ರಾಜೇಗೌಡ ರು ಇಂದು ನಿಧನರಾಗಿದ್ದು ಜಾನಪದ ಸಂಸ್ಕ್ರತಿ ಬಡವಾಗಿದೆ.


ಹಾಸನ ಜಿಲ್ಲೆಯ ಆಲೂರು (ಖ್ಯಾತ ಕವಿ ಆಲೂರು ವೆಂಕಟರಾಯರು) ತಾಲ್ಲೂಕಿನ ಮರಸೆ ಹೊಸಹಳ್ಳಿ (ಸಣ್ಣ ಅಕ್ಕಿ ಗೆ ಬಹಳ ಹೆಸರುವಾಸಿಯಾಗಿದೆ) ಗ್ರಾಮದ ಶ್ರೀಮತಿ ರಂಗಪ್ಪ ದಂಪತಿಗಳ ಪುತ್ರರಾದ ರಾಜೇಗೌಡರು, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂ ಎ ಪದವಿ ಪಡೆದು, ಕರ್ನಾಟಕ ಸರ್ಕಾರದ ನೋಂದಣಿ ಕಛೇರಿ (ಸಬ್ ರಿಜಿಸ್ಟ್ರಾರ್) ಯಲ್ಲಿ ಅಧಿಕಾರಿಯಾಗಿ‌ ಕೆಲಸ ನಿರ್ವಹಿಸಿ ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದರು.


ಹೆಚ್ ಎಲ್ ನಾಗೇಗೌಡರ ಒಡನಾಡಿಯಾಗಿದ್ದರಿಂದ ಜಾನಪದ ಲೋಕದಲ್ಲಿ ಅಹರ್ನಿಶಿ ದುಡಿದು, ಜಾನಪದ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಇಪ್ಪತ್ತಕ್ಕೂ ಹೆಚ್ಚು ವರ್ಷಗಳ ಕಾಲ ದುಡಿದಿದ್ದರು. ಗ್ರಾಮೀಣ ಸಂಸ್ಕೃತಿ ಮತ್ತು ಜಾನಪದ ದ ಬಗ್ಗೆ ಅತೀವ ತುಡಿತವಿದ್ದುದರಿಂದಲೇ ಅವರ ಮೂಸೆಯಿಂದ ಅನೇಕ ಕೃತಿಗಳು ಹೊರಬರಲು ಸಾಧ್ಯವಾಯಿತು.


ಹಾಸನ ಜಿಲ್ಲೆಯಲ್ಲಿ ವಿಶೇಷವಾಗಿ ಕಂಡುಬರುವ ತಂಬೂರಿ ಹಾಡುಗಾರರನ್ನು ಕುರಿತು, ವಿಶೇಷ ಅಧ್ಯಯನ ಮಾಡಿ, *ತಾಳ ಬಂದೋ, ತಂಬೂರಿ ಬಂದೋ* ಎಂಬ ಕೃತಿಗೆ ಡಾಕ್ಟರೇಟ್ ಪದವಿ ಸಂದಿದೆ. ಇದಲ್ಲದೆ *ಮಗನ ತಿಂದ ಮಾರಾಯನ ದುರ್ಗ* ಎಂಬ ಜಾನಪದ ಕುರಿತ ಕೃತಿ, *ಅಕ್ಕಯ್ಯಮ್ಮನ ಸಂಸಾರ ಮತ್ತು ಸತ್ಯಭೋಜರಾಜ* ಎಂಬ ಎರಡು ಕೃತಿಗಳ ಸಂಗ್ರಹ, *ಕೋಳಿ ಮತ್ತು ತುಳಸೀ ಕಟ್ಟೆ* ಎಂಬ ಕವನ ಸಂಕಲನ ಸೇರಿದಂತೆ ಅನೇಕ ಕಥೆ ಕಾವ್ಯಗಳನ್ನು ಬರೆದು ಸಾಹಿತ್ಯದಲ್ಲಿ ಮೇರು ಕೃತಿಗಾರರಾಗಿ ಹೊರಹೊಮ್ಮಿದ್ದರು.


ಮೃತರ ಆತ್ಮಕ್ಕೆ ಜಾನಪದ ತಜ್ಞ ವನಂ ಶಿವರಾಮು, ಜಾನಪದ ಪರಿಷತ್ತಿನ ಅಧ್ಯಕ್ಷರಾದ ತಿಮ್ಮೇಗೌಡ, ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್, ಮುಖ್ಯ ಆಡಳಿತಾಧಿಕಾರಿ ರುದ್ರಪ್ಪ, ಕುರುವ ಬಸವರಾಜು, ಜಿಲ್ಲಾಧ್ಯಕ್ಷರಾದ ಸು ತ ರಾಮೇಗೌಡ ತಾಲ್ಲೂಕು ಅಧ್ಯಕ್ಷ ಗೋ ರಾ ಶ್ರೀನಿವಾಸ. ಜಾನಪದ ಲೋಕದ ಆಡಳಿತ ಮಂಡಳಿ, ಸಿಬ್ಬಂದಿಗಳು ಸೇರಿದಂತೆ ಅನೇಕ ಕಲಾವಿದರು ಕಂಬನಿ ಮಿಡಿದಿದ್ದಾರೆ.


ರಾಮಾಯಣ ದರ್ಶನಂ ಮತ್ತು ಕುವೆಂಪು ರವರನ್ನು ಕುರಿತು ಪುಸ್ತಕವನ್ನು ಬರೆದಿದ್ದು, ಅಚ್ಚಿಗೆ ಹೋಗಿದೆ. ಇನ್ನೇನು ಹೊರಬರಬೇಕಿತ್ತು, ಜಾನಪದ ಮತ್ತು ಗ್ರಾಮೀಣ ಸಂಸ್ಕೃತಿಯ ಬಗ್ಗೆ ಬಹಳ ಒಲವಿದ್ದುದರಿಂದ ನಾಡಿಗೆ ಅವರ ಕೊಡುಗೆ ಅನನ್ಯವಾದುದು. ಗಾಂಧೀಜಿ, ಅಂಬೇಡ್ಕರ್, ವಿವೇಕಾನಂದ, ಲೋಹಿಯಾ ಮತ್ತು ಕುವೆಂಪುರವರನ್ನು ಚನ್ನಾಗಿ ಓದಿಕೊಂಡಿದ್ದರು. ಅವರ ಸಾವು ಜಾನಪದ ಸಂಸ್ಕೃತಿಗೆ ತುಂಬಲಾರದ ನಷ್ಟವಾಗಿದೆ.

*ಹಿ ಶಿ ರಾಮಚಂದ್ರೇಗೌ. ಹಿರಿಯ ಜಾನಪದ ವಿದ್ವಾಂಸರು.*


ಅವರೊಬ್ಬ ಅಪರೂಪದ ಹೃದಯವಂತ ಕೃತಿಗಾರ, ಪ್ರಜಾವಾಣಿ ಪತ್ರಿಕೆಯ ಸಂಗತ ಕಾಲಂನಲ್ಲಿ, ಉತ್ತಮ ಲೇಖನಗಳನ್ನು ಬರೆಯುತ್ತಿದ್ದರು. ಸಾವಯವ ಕೃಷಿಯ ಬಗ್ಗೆ ಆಳವಾದ ಜ್ಞಾನ ಹೊಂದಿದವರು. ಇಂತಹವರ ಮಾರ್ಗದರ್ಶನ ಇಂದಿನ ಪೀಳಿಗೆಗೆ ಅತ್ಯವಶ್ಯಕವಾಗಿತ್ತು. ಅವರ ಸಾವು ಅತೀವ ದು:ಖ ತಂದಿದೆ.

*ಚಕ್ಕೆರೆ ಶಿವಶಂಕರ್. ಜಾನಪದ ವಿದ್ವಾಂಸರು.*


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑