Tel: 7676775624 | Mail: info@yellowandred.in

Language: EN KAN

    Follow us :


ಕೆಂಗಲ್ ಗುಡ್ಡೆ ಗೋಮಾಳದಲ್ಲಿ, ಸುಟ್ಟುಕರಕಲಾದ ಅಪರಿಚಿತ ಶವ ಪತ್ತೆ

Posted date: 01 May, 2020

Powered by:     Yellow and Red

ಕೆಂಗಲ್ ಗುಡ್ಡೆ ಗೋಮಾಳದಲ್ಲಿ, ಸುಟ್ಟುಕರಕಲಾದ ಅಪರಿಚಿತ ಶವ ಪತ್ತೆ

ಚನ್ನಪಟ್ಟಣ:ಮೇ/೦೧/೨೦/ಶುಕ್ರವಾರ. ತಾಲ್ಲೂಕಿನ ವಂದಾರಗುಪ್ಪೆ ಗ್ರಾಮ ಪಂಚಾಯತಿ, ಪೌಳಿದೊಡ್ಡಿ ಗ್ರಾಮದ ಸರ್ವೇ ನಂ ೨೦ ರ ಗೋಮಾಳದಲ್ಲಿ ಸುಟ್ಟು ಕರಕಲಾದ ಅಪರಿಚಿತ ಗಂಡಸಿನ ಶವ ದೊರೆತ್ತಿದ್ದು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.


ಮೃತ ಗಂಡಸು ೪೦ ರಿಂದ ೪೫ ವಯಸ್ಸಿನವನಾಗಿದ್ದು, ಕೈಯಲ್ಲಿ ವಾಚ್ ಇದೆ. ಯಾರೋ ದುಷ್ಕರ್ಮಿಗಳು ಬೇರೆ ಕಡೆ ಕೊಲೆ ಮಾಡಿ ಇಲ್ಲಿ ತಂದು ಸುಟ್ಟು ಹಾಕಿರಬಹುದು ಎಂದು ಪೋಲೀಸರು ಶಂಕಿಸಿದ್ದು, ಶವ ಪರೀಕ್ಷೆಗೆ ಕಳುಹಿಸಲಾಗಿದೆ.


ಈ ಸಂಬಂಧ ಖಚಿತ ಮಾಹಿತಿ ಮೇರೆಗೆ ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ ಗ್ರಾಮಾಂತರ ಠಾಣೆಗೆ ದೂರು ದಾಖಲಿಸಿದ್ದು ಉಪ ಪೋಲೀಸ್ ಆಯುಕ್ತ ಓಂಪ್ರಕಾಶ್ ನೇತ್ರತ್ವದಲ್ಲಿ ವೃತ್ತ ನಿರೀಕ್ಷಕ ವಸಂತ್, ಉಪ ನಿರೀಕ್ಷಕ ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑