Tel: 7676775624 | Mail: info@yellowandred.in

Language: EN KAN

    Follow us :


ಮೇ ಹದಿನೇಳ ರವರೆಗೆ ಲಾಕ್ಡೌನ್ ಮುಂದುವರಿಕೆ, ಕಠಿಣ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

Posted date: 01 May, 2020

Powered by:     Yellow and Red

ಮೇ ಹದಿನೇಳ ರವರೆಗೆ ಲಾಕ್ಡೌನ್ ಮುಂದುವರಿಕೆ, ಕಠಿಣ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

ನವದೆಹಲಿ:ಬೆಂಗಳೂರು:ಮೇ/೦೧/೨೦/ಶುಕ್ರವಾರ. ಕೇಂದ್ರ ಸರ್ಕಾರವು ಹಂತಹಂತವಾಗಿ ಸ್ವಲ್ಪ ಸ್ವಲ್ಪ ದಿನಗಳೇ ಲಾಕ್ ಡೌನ್ ಮಾಡುತ್ತಿದ್ದು ಮೇ ೦೩ ತನಕ ಇದ್ದ ಲಾಕ್ ಡೌನ್‌ ನ್ನು ಮೇ ಹದಿನೇಳನೇ ತಾರೀಖಿನವರೆಗೂ ಕೊರೋನಾ ವೈರಸ್ ಲಾಕ್ ಡೌನ್ ವಿಸ್ತರಣೆ ಮಾಡಿರುವ ಕೇಂದ್ರ ಗೃಹ ಇಲಾಖೆ ಹೊಸದಾಗಿ ಒಂದು ಕಠಿಣ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಇದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.


ಏನಿದೆ ಮಾರ್ಗಸೂಚಿಯಲ್ಲಿ?


ಎರಡು ವಾರಗಳ ಕಾಲ ಲಾಕ್ ಡೌನ್ ವಿಸ್ತರಣೆ

ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮ ರದ್ದು

ಬಸ್, ರೈಲು ಹಾಗೂ ವಿಮಾನ ಸಂಚಾರ ರದ್ದು

ಮಹಾನಗರಗಳಲ್ಲಿ ಮೆಟ್ರೋ ರೈಲು ಸಂಚಾರ ಇಲ್ಲ.

ಟ್ಯಾಕ್ಸಿ ಹಾಗೂ ಆಟೋ ಸಂಚಾರ ಇಲ್ಲ.

ಕಟಿಂಗ್ ಶಾಪ್’ಗಳನ್ನು ಎಲ್ಲಿಯೂ ತೆರೆಯುವಂತಿಲ್ಲ.

ಅಗತ್ಯ ವಸ್ತು ಪೂರೈಕೆಯ ಗೂಡ್ಸ್‌ ರೈಲು, ವಾಹನಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ.


ಗರ್ಭಿಣಿ, ಮಕ್ಕಳು ಹಾಗೂ ವೃದ್ದರು ಕಡ್ಡಾಯವಾಗಿ ಮನೆಯಲ್ಲೇ ಇರಬೇಕು.

ಅಗತ್ಯ ವಸ್ತು ಖರೀದಿಗೆ ಮಾತ್ರ ಒಬ್ಬರೇ ರಸ್ತೆಗೆ ಬರಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಕ್ಕೆ ಓಡಾಡುವಂತಿಲ್ಲ. ಥಿಯೇಟರ್, ಮಾಲ್, ಜಿಮ್, ಸ್ವಿಮ್ಮಿಂಗ್ ಪೂಲ್ ತೆರೆಯುವಂತಿಲ್ಲ.

ಸಂಜೆ ಏಳರಿಂದ ರಿಂದ ಮುಂಜಾನೆ ಏಳು ಗಂಟಯವರೆಗೂ ಕಡ್ಡಾಯವಾಗಿ ಯಾರೂ ಓಡಾಡುವಂತಿಲ್ಲ.


ಅಂತಾರಾಜ್ಯ ವಾಹನ ಸಂಚಾರ ಸಂಪೂರ್ಣ ಬಂದ್

ಯಾವುದೇ ಶಾಲಾ-ಕಾಲೇಜುಗಳನ್ನು ತೆರೆಯುವಂತಿಲ್ಲ. ಕೈಗಾರಿಕೆಗಳಿಗೆ ಷರತ್ತುಬದ್ದ ಅನುಮತಿ. ಬಾರ್ ಅಂಡ್ ರೆಸ್ಟೋರೆಂಟ್’ಗಳಿಗೆ ಅನುಮತಿ ಇಲ್ಲ. (ರಾಜ್ಯ ಸರ್ಕಾರವು ಷರತ್ತು ಬದ್ದ ಅವಕಾಶ ನೀಡುವುದಾಗಿ ಘೋಷಿಸಿದೆ.)


ಆರೆಂಜ್ ಝೋನ್’ನಲ್ಲಿ ಯಾವುದಕ್ಕೆ ಅವಕಾಶ?


ನಿಗದಿತ ಪಾಸ್ ಹೊಂದಿರುವವರು ಮಾತ್ರ ಓಡಾಡಬಹುದು, ಅಗತ್ಯವಿದ್ದಲ್ಲಿ ಕಾರು ಬಳಸಬಹುದು. ಆದರೆ, ಕಾರಿನಲ್ಲಿ ಡ್ರೈವರ್ ಸೇರಿ ಇಬ್ಬರಿಗೆ ಮಾತ್ರ ಅವಕಾಶ ನೀಡಲಾಗಿದೆ.

ಬೈಕ್’ನಲ್ಲಿ ಕೇವಲ ಒಬ್ಬರು ಮಾತ್ರ ಸಂಚರಿಸಬಹುದು. ಬಸ್ ಸಂಚಾರ ಇರುವುದಿಲ್ಲ.


ಗ್ರೀನ್ ಝೋನ್’ನಲ್ಲಿ ಯಾವುದಕ್ಕೆ ಅವಕಾಶ?


ಈ ಜಿಲ್ಲಾ ವ್ಯಾಪ್ತಿಯಲ್ಲಿ ಬಸ್ ಓಡಾಟಕ್ಕೆ ಅವಕಾಶವಿದ್ದು, ಶೇ.೫೦ ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶವಿದ್ದು, ಟ್ಯಾಕ್ಸಿ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಡ್ರೈವರ್ ಸೇರಿ ಇಬ್ಬರಿಗೆ ಮಾತ್ರ ಅವಕಾಶ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑